T20 Blast: 8 ಭರ್ಜರಿ ಸಿಕ್ಸ್, 8 ಫೋರ್: ಸ್ಮಿಡ್ ಸಿಡಿಲಬ್ಬರಕ್ಕೆ ನಲುಗಿದ ಎದುರಾಳಿ ತಂಡ..!

T20 Blast 2023: ಇಂಗ್ಲೆಂಡ್​ನಲ್ಲಿ ನಡೆಯುತ್ತಿರುವ ಟಿ20 ಬ್ಲಾಸ್ಟ್​ನಲ್ಲಿ 21ರ ಯುವ ದಾಂಡಿಗ ವಿಲ್ ಸ್ಮಿಡ್ ತೂಫಾನ್ ಬ್ಯಾಟಿಂಗ್​ನೊಂದಿಗೆ ಅಬ್ಬರಿಸಿದ್ದಾರೆ. ಸೋಮರ್‌ಸೆಟ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಗ್ಲೌಸೆಸ್ಟರ್‌ಶೈರ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು.ಅದರಂತೆ ಇನಿಂಗ್ಸ್ ಆರಂಭಿಸಿದ ಸೋಮರ್​ಸೆಟ್ ಪರ ಟಾಮ್ ಬ್ಯಾಂಟನ್ ಹಾಗೂ ವಿಲ್ ಸ್ಮಿಡ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಮೊದಲ ಓವರ್​ನಿಂದಲೇ ಬಿರುಸಿನ ಬ್ಯಾಟಿಂಗ್ ಆರಂಭಿಸಿದ ಈ ಜೋಡಿಯು ಪ್ರಥಮ ವಿಕೆಟ್​ಗೆ 10 ಓವರ್​ಗಳಲ್ಲಿ 122 ರನ್​ ಕಲೆಹಾಕಿತು.ವಿಶೇಷ ಎಂದರೆ 122 ರನ್​ಗಳಲ್ಲಿ 94 ರನ್​ಗಳು ವಿಲ್​ ಸ್ಮಿಡ್ ಅವರ ಬ್ಯಾಟ್​ನಿಂದ ಮೂಡಿಬಂದಿತ್ತು. ಅಂದರೆ ಕೇವಲ 35 ಎಸೆತಗಳಲ್ಲಿ 8 ಭರ್ಜರಿ ಸಿಕ್ಸ್ ಹಾಗೂ 8 ಫೋರ್ ಬಾರಿಸಿ ಅಬ್ಬರಿಸಿದ್ದ ಸ್ಮಿತ್ ಶತಕದ ಹೊಸ್ತಿಲಲ್ಲಿ ಎಡವಿದ್ದರು.ಇನ್ನು ಮಧ್ಯಮ ಕ್ರಮಾಂಕದಲ್ಲಿ ನಾಯಕ ಎಲ್ ಗ್ರೆಗೊರಿ 13 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 2 ಫೋರ್​ನೊಂದಿಗೆ 30 ರನ್ ಬಾರಿಸುವ ಮೂಲಕ ಸೋಮರ್​ಸೆಟ್ ತಂಡದ ಮೊತ್ತವನ್ನು 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 231 ರನ್​ ಕಲೆಹಾಕಿತು.
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಗ್ಲೌಸೆಸ್ಟರ್‌ಶೈರ್ ಪರ ಆರಂಭಿಕ ಆಟಗಾರ ಮೈಲ್ಸ್ ಹ್ಯಾಮಂಡ್ 34 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 5 ಫೋರ್​ನೊಂದಿಗೆ 61 ರನ್ ಬಾರಿಸಿದರು. ಹಾಗೆಯೇ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬೆನ್ ಚಾರ್ಲ್ಸ್‌ವರ್ತ್ 25 ಎಸೆತಗಳಲ್ಲಿ 41 ರನ್ ಕಲೆಹಾಕಿದ್ದರು. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಗ್ಲೌಸೆಸ್ಟರ್‌ಶೈರ್ ತಂಡವು ದಿಢೀರ್ ಕುಸಿತಕ್ಕೊಳಗಾಯಿತು. ಪರಿಣಾಮ 9 ಓವರ್​ಗಳಲ್ಲಿ 2 ವಿಕೆಟ್ ನಷ್ಟಕ್ಕೆ 99 ರನ್ ಕಲೆಹಾಕಿದ್ದ ಗ್ಲೌಸೆಸ್ಟರ್‌ಶೈರ್ ತಂಡವು 151 ರನ್​ಗಳಿಗೆ ಆಲೌಟ್ ಆಯಿತು. ಇತ್ತ ಸೋಮರ್​ಸೆಟ್ ತಂಡವು 80 ರನ್​ಗಳ ಭರ್ಜರಿ ಜಯ ಸಾಧಿಸಿದೆ.

source https://tv9kannada.com/photo-gallery/cricket-photos/t20-blast-will-smeed-plays-his-best-hits-in-t20-blast-kannada-news-zp-598184.html

Leave a Reply

Your email address will not be published. Required fields are marked *