ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್

ಚಿತ್ರದುರ್ಗ ಮೇ. 04 ರೋಟರಿ ಕ್ಲಬ್ ಚಿತ್ರದುರ್ಗ ಮತ್ತು ಟಾರ್ಗೆಟ್ 10000 ಟೀಮ್‍ವತಿಯಿಂದ ಎಸ್ ಆರ್ ಬಿ ಎಂ ಎಸ್ ರೋಟರಿ ಸೇವಾ ಭವನದ ಹಿಂಭಾಗದಲ್ಲಿರುವ ಪಾರ್ಕಿನಲ್ಲಿ ಸುಮಾರು 50 ಸಸಿಗಳನ್ನು ನೆಡಲಾಯಿತು
ಕಾರ್ಯಕ್ರಮದಲ್ಲಿ ಟಾರ್ಗೆಟ್ ತಂಡದ ಅಧ್ಯಕ್ಷರಾದ ಸಿದ್ದರಾಮ್ ಜೋಗಿ ಮಧುಸೂದನ್ ರೆಡ್ಡಿ, ಮುಕೇಶ್, ಶಶಿ ಹಾಗೂ ತಂಡದ ಇನ್ನಿತರ ಸದಸ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಹಾಗೂ ರೋಟರಿ ಕ್ಲಬ್ ವತಿಯಿಂದ ಎಸ್ ವೀರೇಶ್,ವೀರಭದ್ರ ಸ್ವಾಮಿ, ಕನಕರಾಜ್, ವಿಶ್ವನಾಥ್ ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಕಾಯಕ ರತ್ನ ಪ್ರಶಸ್ತಿಗೆ ಬಾಜನರಾಗಿರುವಂತಹ ಸಿದ್ಧರಾಮ ಜೋಗಿ ಅವರನ್ನು ರೋಟರಿ ಕ್ಲಬ್ ಚಿತ್ರದುರ್ಗ, ಚಿತ್ರದುರ್ಗ ರೋಟರಿ ಟ್ರಸ್ಟ್. ಎಸ್ ಆರ್ ಬಿ ಎಂ ಎಸ್ ರೋಟರಿ ಸೇವಾ ಭವನ, ಎಂ ಜೆ ಕೃಷ್ಣಪ್ಪ ಲೇ ಔಟ್‍ನ ನಾಗರಿಕರು ಮತ್ತು ಇತರ ಸಂಘ ಸಂಸ್ಥೆಯ ಪದಾಧಿಕಾರಿಗಳ ವತಿಯಿಂದ ಗೌರವ ಸಮರ್ಪಣೆಯನ್ನು ಮಾಡಲಾಯಿತು.