ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಲಿ.ಗೆ ನಿರ್ದೆಶಕರಾಗಿ ನಿಶಾನಿ ಜಯ್ಯಣ್ಣ ನೇತೃತ್ವದ ತಂಡ ಅವಿರೋಧ ಆಯ್ಕೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜ. 27 : ಚಿತ್ರದುರ್ಗ ನಗರದ ವಾಸವಿ ವೃತ್ತದಲ್ಲಿನ ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಲಿ.ಗೆ ಮುಂದಿನ 5 ವರ್ಷಕ್ಕೆ
ಚುನಾವಣೆಯಲ್ಲಿ ನಿಶಾನಿ ಜಯ್ಯಣ್ಣರವರ ನೇತೃತ್ವದ ತಂಡ ಅವಿರೋಧವಾಗಿ ಆಯ್ಕೆಯಾಗಿದೆ.

ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಲಿ.ನ ಸಾಮಾನ್ಯ ಚುನಾವಣೆಯಲ್ಲಿ ಚುನಾವಣಾ ದಿನಾಂಕ ದಿಂದ ಮುಂದಿನ 5
ವರ್ಷಗಳ ಅವಧಿಗೆ ಸಂಘದ ಆಡಳಿತ ಮಂಡಳಿಗೆ ನಿರ್ದೇಶಕರನ್ನಾಗಿ ಚುನಾಯಿಸಲು 12 ಸ್ಥಾನಗಳಿಗೆ ಚುನಾವಣೆಯಲ್ಲಿ ನಾಮಪತ್ರ
ಸಲ್ಲಿಸಲು ಜ. 25ರ ಮಧ್ಯಾಹ್ನ 3 ಗಂಟೆಯವರೆಗೆ ಕಾಲಾವಕಾಶವನ್ನು ಕಲ್ಪಿಸಲಾಗಿತ್ತು, ಇದರಲ್ಲಿ 18 ಜನ ನಾಮಪತ್ರವನ್ನು
ಸಲ್ಲಿಸಿದ್ದರು. ಜ. 26ರ ಭಾನುವಾರ ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆದಿದ್ದು, ನಾಮಪತ್ರ ವಾಪಸ್ಸ್ ಪಡೆಯಲು ಜ. 27ರ
ಮಧ್ಯಾಹ್ನ 3 ಗಂಟೆಯವರೆಗೆ ಕಾಲವಕಾಶವನ್ನು ನೀಡಿಲಾಗಿತ್ತು ಈ ಸಮಯದಲ್ಲಿ 6 ಜನ ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು
ವಾಪಾಸ್ಸ್ ಪಡೆದಿದ್ದರಿಂದ ಕಣದಲ್ಲಿ ಉಳಿದ 12 ಜನರು ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿ ಲಿ.ಗೆ ನಿರ್ದೆಶಕರಾಗಿ
ಅವಿರೋಧವಾಗಿ ಆಯ್ಕೆಮಾಡಲಾಯಿತು.

ಈ ಚುನಾವಣೆಯಲ್ಲಿ 06 ಸಾಮಾನ್ಯ ಸ್ಥಾನದಿಂದ ಎಂ.ನಿಶಾನಿ ಜಯ್ಯಣ್ಣ, ಲಿಯಾಕತ್ ಅಲಿ ಖಾನ್, ಸಾಧೀಖ್ ಬಾಷಾ, ಜಿ.ಸುರೇಶ್
ಕುಮಾರ್ (ಭಾಫ್ನಾ) ಜೆ.ಆರ್.ಹರೀಶ್, ಜೆ.ನಿಶಾನಿ ಧಶರಥ್, ಒಂದು ಪರಿಶಿಷ್ಟ ಜಾತಿ ಮೀಸಲು ಸ್ಥಾನದಿಂದ ಚಂದ್ರಪ್ಪ, ಒಂದು
ಪರಿಶಿಷ್ಟ ಪಂಗಡ ಮೀಸಲು ಸ್ಥಾನದಿಂದ ಓ.ತಿಪ್ಪೇಸ್ವಾಮಿ, ಒಂದು ಹಿಂದುಳಿದ ವರ್ಗಗಳ (ಪ್ರವರ್ಗ-ಎ) ಮೀಸಲು ಸ್ಥಾನ, ಶ್ರೀನಿವಾಸ್
ಮೂರ್ತಿ, ಒಂದು ಹಿಂದುಳಿದ ವರ್ಗಗಳ (ಪ್ರವರ್ಗ-ಬಿ) ಮೀಸಲು ಸ್ಥಾನದಿಂದ ಸೂರ್ಯ ಪ್ರಕಾಶ್ ಹಾಗೂ ಎರಡು ಮಹಿಳಾ ಮೀಸಲು
ಸ್ಥಾನದಿಂದ ಎನ್.ಎಂ.ಪುಷ್ಪವಲ್ಲಿ ಮತ್ತು ಎ. ಚಂಪಕಾ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚಿತ್ರದುರ್ಗ ಟೌನ್ ಕೋ-
ಆಪರೇಟಿವ್ ಸೊಸೈಟಿ ಲಿ.,ನ ಚುನಾವಣಾ ಅಧಿಕಾರಿಗಳು, ಹಾಗೂ ಅಧೀಕ್ಷರು, ಸಹಕಾರ ಸಂಘಗಳ ಸಹಾಯಕ ನಿಬಂಧಕರ
ಕಚೇರಿ, ಚಿತ್ರದುರ್ಗ ಉಪ ವಿಭಾಗದ ಅಧೀಕ್ಷಕರಾದ ಎಸ್.ಮೊಹಮ್ಮದ್ ಯೂನುಸ್ ಪರ್ವೀಜ್ ತಿಳಿಸಿದ್ದಾರೆ.

Views: 0

Leave a Reply

Your email address will not be published. Required fields are marked *