Test Cricket Records: ಟಸಟನಲಲ ಮದಲ ಎಸತದಲಲ ವಕಟ: ದಖಲ ಬರದ ಅಫಘನ ಬಲರ

ಮಿರ್​ಪುರ್​ನಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ್ ಹಾಗೂ ಅಫ್ಘಾನಿಸ್ತಾನ್ ನಡುವಣ ಟೆಸ್ಟ್ ಪಂದ್ಯದಲ್ಲಿ ಅಪರೂಪದ ದಾಖಲೆಯೊಂದು ನಿರ್ಮಾಣವಾಗಿದೆ. ಇಂತಹದೊಂದು ವಿಶೇಷ ದಾಖಲೆ ಬರೆದಿದ್ದು ಅಫ್ಘಾನಿಸ್ತಾನ್ ವೇಗಿ ನಿಜಾತ್ ಮಸೂದ್.ಈ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ್ ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ್ ಮೊದಲ ಓವರ್​ನಲ್ಲಿ 6 ರನ್​ ಕಲೆಹಾಕಿತು. ಇತ್ತ ರಶೀದ್ ಖಾನ್ ಅನುಪಸ್ಥಿತಿಯಲ್ಲಿ ತಂಡದಲ್ಲಿ ಸ್ಥಾನ ಪಡೆದ ಯುವ ವೇಗಿ ನಿಜಾತ್ ಮಸೂದ್ 2ನೇ ಓವರ್ ಎಸೆಯಲು ಬಂದರು.ಅಲ್ಲ ಪಾದರ್ಪಣಾ ಪಂದ್ಯದ ಮೊದಲ ಎಸೆತದಲ್ಲೇ ಝಾಕಿರ್ ಹಸನ್ ವಿಕೆಟ್ ಪಡೆಯುವ ಮೂಲಕ ಹೊಸ ಇತಿಹಾಸ ನಿರ್ಮಿಸಿದರು. ಅಂದರೆ ಟೆಸ್ಟ್ ಕ್ರಿಕೆಟ್​ನಲ್ಲಿ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ಅಫ್ಘಾನಿಸ್ತಾನದ ಮೊದಲ ಬೌಲರ್ ಎಂಬ ದಾಖಲೆ ನಿಜಾತ್ ಮಸೂದ್ ಪಾಲಾಗಿದೆ.ಅಲ್ಲದೆ ಈ ಸಾಧನೆ ಮಾಡಿದ ವಿಶ್ವದ 7ನೇ ಬೌಲರ್​ ಎನಿಸಿಕೊಂಡಿದ್ದಾರೆ. ಇನ್ನು ಈ ಸಾಧನೆ ಮಾಡಿದ ವಿಶ್ವದ ಮೊದಲ ಬೌಲರ್ ರಿಚರ್ಡ್ ಇಲ್ಲಿಂಗ್ವರ್ತ್. 1991 ರಲ್ಲಿ ಇಂಗ್ಲೆಂಡ್ ಬೌಲರ್ ರಿಚರ್ಡ್ ಪಾದರ್ಪಣಾ ಪಂದ್ಯದ ಮೊದಲ ಎಸೆತದಲ್ಲೇ ವಿಕೆಟ್ ಉರುಳಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.ಇನ್ನು ಭಾರತದ ಬೌಲರ್ ಕೂಡ ಈ ಸಾಧನೆ ಮಾಡಿದ್ದಾರೆ. 1997 ರಲ್ಲಿ ಶ್ರೀಲಂಕಾ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ಪಾದರ್ಪಣೆ ಮಾಡಿದ್ದ ನೀಲೇಶ್ ಕುಲಕರ್ಣಿ ಆರಂಭಿಕ ಆಟಗಾರ ಮರ್ವಾನ್ ಅಟಪಟ್ಟುವನ್ನು ತಮ್ಮ ಮೊದಲ ಎಸೆತದಲ್ಲಿ ಔಟ್ ಮಾಡಿದ್ದರು.ಹಾಗೆಯೇ ಟೆಸ್ಟ್​ ಕ್ರಿಕೆಟ್​ನಲ್ಲಿ ಕೊನೆಯ ಬಾರಿ ಈ ಸಾಧನೆ ಮೂಡಿಬಂದಿದ್ದು 2016 ರಲ್ಲಿ. ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಹಾರ್ಡಸ್ ವಿಲೋನ್ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದ ಮೊದಲ ಎಸೆತದಲ್ಲೇ ಇಂಗ್ಲೆಂಡ್​ನ ಅಲೆಸ್ಟರ್ ಕುಕ್ ಅವರನ್ನು ಔಟ್ ಮಾಡಿ ದಾಖಲೆ ಬರೆದಿದ್ದರು.ಇದೀಗ 7 ವರ್ಷಗಳ ನಂತರ ಅಫ್ಘಾನ್ ವೇಗಿ ನಿಜಾತ್ ಮಸೂದ್ ಟೆಸ್ಟ್ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ್ದಾರೆ. ಅಲ್ಲದೆ ಬಾಂಗ್ಲಾದೇಶ್ ವಿರುದ್ಧದ ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ 79 ರನ್ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

source https://tv9kannada.com/photo-gallery/cricket-photos/afghanistans-nijat-masood-creates-history-in-test-cricket-kannada-news-zp-601736.html

Views: 0

Leave a Reply

Your email address will not be published. Required fields are marked *