
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಚಿತ್ರದುರ್ಗ ಜೂ. 26 ಶ್ರೀ ಗಾನಯೋಗಿ ಸಂಗೀತ ಬಳಗದವತಿಯಿಂದ ಲಿಂ. ಪಂಚಾಕ್ಷರ ಗವಾಯಿಗಳ 81ನೇ ಹಾಗೂ ಲಿಂ. ಡಾ. ಪುಟ್ಟರಾಜ ಕವಿ ಗವಾಯಿಗಳ 15ನೇ ಪುಣ್ಯ ಸ್ಮರಣೋತ್ಸವ ಸಮಾರಂಭವೂ ಜೂ. 29 ರ ಭಾನುವಾರ ಬೆಳ್ಳಿಗೆ 10.30ಕ್ಕೆ ನಗರದ ಹೊಳಲ್ಕೆರೆ ರಸ್ತೆಯ ಶ್ರೀಮತಿ ಶಾರದಮ್ಮ ರುದ್ರಪ್ಪ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಗಾನಯೋಗಿ ಸಂಗೀತ ಬಳಗದ ಕಾರ್ಯಾಧ್ಯಕ್ಷರಾದ ನಂದೀಶ್ ಜಿ.ಟಿ.ರವರು ತಿಳಿಸಿದ್ದಾರೆ.
ಕಾರ್ಯಕ್ರಮದ ಸಾನಿಧ್ಯವನ್ನು ದಾವಣಗೆರೆ ವಿರಕ್ತಮಠದ ಡಾ.ಬಸವಪ್ರಭು ಶ್ರೀಗಳು ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಶ್ರೀ ಗಾನಯೋಗಿ ಸಂಗೀತ ಬಳಗದ ಎಂ.ತೋಟಪ್ಪ ಉತ್ತಂಗಿ ವಹಿಸಲಿದ್ದಾರೆ. ನಿವೃತ್ತ ಉಪನ್ಯಾಸಕರಾದ ಶ್ರೀಮತಿ ಸಿ.ಬಿ.ಶೈಲಾ ವಿಜಯಕುಮಾರ್ ಉಭಯ ಶ್ರೀಗಳ ಬಗ್ಗೆ ಉಪನ್ಯಾಸವನ್ನು ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಶ್ರೀಮತಿ ಶಾರದಮ್ಮ ರುದ್ರಪ್ಪ, ಶ್ರೀಮತಿ ಉಮಾ ರಮೇಶ್, ಶ್ರೀಮತಿ ಪ್ರೇಮ ಬಾಲಚಂದ್ರಪ್ಪ, ಶ್ರೀಮತಿ ನೀಲಮ್ಮ ಬಸಯ್ಯ ಹಾಗೂ ಬ್ರಹ್ಮಚಾರಿ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಸಮಾಜದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ, ಸಾಧನೆಯನ್ನು ಮಾಡಿದ ಹಿರಿಯ ಪತ್ರಕರ್ತರು, ಬರಹಗರರಾದ ಜಿ.ಎಸ್.ಉಜ್ಜನಪ್ಪ, ಜಾನಪದ ಗಾಯಕಿ ಶ್ರೀಮತಿ ಸುಶೀಲಮ್ಮ, ಪರಿಸರ ಪ್ರೇಮಿ ಸಿದ್ದರಾಜು ಜೋಗಿ, ಸಂಗೀತಗರಾರದ ರಾಮಲಿಂಗ ಜಲ್ಲಾಪುರ ಹಾಗೂ ರಂಗಕರ್ಮಿ ಪ್ರಕಾಶ್ ಬಾದರದಿನ್ನಿಯವರನ್ನು ಸನ್ಮಾನಿಸಲಾಗುವುದು ಇದರೊಂದಿಗೆ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಶ್ರೀ ಗಾನಯೋಗಿ ಸಂಗೀತ ಬಳಗದವತಿಯಿಂದ ಗೀತಾ ಗಾಯನ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.