VR Vanita, Cricket News: ಶಿವಮೊಗ್ಗ ಲಯನ್ಸ್ ತಂಡದ ಜೆರ್ಸಿ ಧರಿಸಿ ಕುಳಿತುಕೊಂಡಿರುವ ಫೋಟೋ ಎಲ್ಲೆಡೆ ವೈರಲ್ ಆಗಿದೆ. ಇನ್ನು ಶಿವಮೊಗ್ಗ ಫ್ರಾಂಚೈಸಿಯ ಮುಖ್ಯ ಕೋಚ್ ಆಗಿ ನೇಮಕಗೊಂಡಿರುವ ವನಿತಾಗೆ ಇದು ಹೊಸ ಅನುಭವವಾಗಿದೆ.

VR Vanita, Cricket News: ಫೆಬ್ರವರಿಯಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ (WPL) ನ ಉದ್ಘಾಟನಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಭಾಗವಾಗಿದ್ದ ವಿ ಆರ್ ವನಿತಾ ಎಲ್ಲರಿಗೂ ಚಿರಪರಿಚಿತ. ಇವರು ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ನಡೆಸುತ್ತಿರುವ ಮಹಾರಾಜ ಟ್ರೋಫಿ, ಟಿ20 ಪಂದ್ಯಾವಳಿಯ ಹರಾಜಿನಲ್ಲಿ ಕಾಣಿಸಿಕೊಂಡಿದ್ದರು.
ಶಿವಮೊಗ್ಗ ಲಯನ್ಸ್ ತಂಡದ ಜೆರ್ಸಿ ಧರಿಸಿ ಕುಳಿತುಕೊಂಡಿರುವ ಫೋಟೋ ಎಲ್ಲೆಡೆ ವೈರಲ್ ಆಗಿದೆ. ಇನ್ನು ಶಿವಮೊಗ್ಗ ಫ್ರಾಂಚೈಸಿಯ ಮುಖ್ಯ ಕೋಚ್ ಆಗಿ ನೇಮಕಗೊಂಡಿರುವ ವನಿತಾಗೆ ಇದು ಹೊಸ ಅನುಭವವಾಗಿದೆ.
ಭಾರತೀಯ ಕ್ರಿಕೆಟ್ ಚಿತ್ರಣವನ್ನು ಒಂದೊಮ್ಮೆ ನೋಡಿದರೆ, ಪುರುಷರ ತಂಡವು ಮಹಿಳಾ ಮುಖ್ಯ ಕೋಚ್ ಅನ್ನು ಹೊಂದಿರುವುದು ಬಲು ಅಪರೂಪ, ಆದರೆ ವನಿತಾಗೆ ಟ್ರೆಂಡ್ ಸೆಟ್ ಮಾಡುವ ಅವಕಾಶ ಇದೀಗ ಸಿಕ್ಕಿದೆ ಎನ್ನಬಹುದು.
“ಪುರುಷರ ಕ್ರಿಕೆಟ್ ಗೆ ತರಬೇತಿ ನೀಡಬೇಕು ಮತ್ತು ಅಲ್ಲಿನ ಡೈನಾಮಿಕ್ಸ್ ಅನ್ನು ಅರ್ಥಮಾಡಿಕೊಳ್ಳಬೇಕು ಎಂದು ನಾನು ಬಹಳ ಸಮಯದಿಂದ ಮನಸ್ಸಿನಲ್ಲಿಟ್ಟುಕೊಂಡಿದ್ದೆ. ಬಹುಶಃ ಸಹಾಯಕ ಕೋಚ್ ಆಗಿ ಪುರುಷರ ತಂಡದ ಭಾಗವಾಗಲು ಬಯಸಿದ್ದರೆ. ಆದರೆ ಕೋಚ್ ಆಗುವಷ್ಟು ಉತ್ತಮಳಿದ್ದೇನೆ ಎಂದು ಫ್ರಾಂಚೈಸಿಗಳು ಭಾವಿಸಿವೆ. ಹಾಗಾಗಿ, ನನ್ನ ಮೇಲೆ ವಿಶ್ವಾಸ ತೋರಿಸಿದ್ದಕ್ಕಾಗಿ ಧನ್ಯವಾದಗಳು” ಎಂದು ವನಿತಾ ಹೇಳಿದ್ದಾರೆ.
2022 ರಲ್ಲಿ ನಿವೃತ್ತಿ ಘೋಷಿಸಿದ ವನಿತಾ, ಅದಕ್ಕೂ ಮೊದಲು 2014 ಮತ್ತು 2016 ರ ನಡುವೆ ಆರು ಮಹಿಳಾ ODI ಮತ್ತು 16 T20I ಗಳನ್ನು ಆಡಿದ್ದಾರೆ. ಆ ನಂತರ ಕರ್ನಾಟಕ U-16 ತಂಡದ ತರಬೇತುದಾರರಾದರು. ಇನ್ನು RCB ಬೆಂಗಳೂರು ಫ್ರಾಂಚೈಸಿಯನ್ನು ಸ್ವಾಧೀನಪಡಿಸಿಕೊಂಡ ನಂತರ ವನಿತಾ ಅವರನ್ನು ಫೀಲ್ಡಿಂಗ್ ಕೋಚ್ ಆಗಿ ನೇಮಿಸಲಾಯಿತು.