“ಕಾಂಗ್ರೆಸ್ ಸರ್ಕಾರ ಬಡವರ ಪರವಲ್ಲ, ರಾಜಕೀಯಕ್ಕೇ ಹೆಚ್ಚು ಪ್ರಾಮುಖ್ಯತೆ” – ಸಂಸದ ಗೋವಿಂದ ಕಾರಜೋಳ ವಾಗ್ದಾಳಿ.

ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್

ಚಿತ್ರದುರ್ಗ: ಜುಲೈ 14, 2025
ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದರೂ ಕಾಂಗ್ರೆಸ್ ಸರ್ಕಾರ ಬಡವರು ಹಾಗೂ ದಲಿತರ ಪರವಾಗಿ ಯಾವುದೇ ಶಾಶ್ವತ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿಲ್ಲ ಎಂದು ಬಿಜೆಪಿ ಸಂಸದ ಗೋವಿಂದ ಕಾರಜೋಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿತ್ರದುರ್ಗದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ರಾಜ್ಯದಲ್ಲಿ ಸುಮಾರು 40,000ಕ್ಕೂ ಹೆಚ್ಚು ಬಡವರು ವರ್ಷಗಳಿಂದ ಸರ್ಕಾರಿ ಜಮೀನನ್ನು ಬಗರ್ ಹುಕುಂ ಮೂಲಕ ಸಾಗುವಳಿ ಮಾಡುತ್ತಿದ್ದಾರೆ. ಅವರು ಆ ಜಮೀನಿನಲ್ಲಿ ಹೊಟ್ಟೆ ತುಂಬಿಸುತ್ತಿದ್ದಾರೆ. ಆದರೆ ಈತನಕ ಅವರಿಗೆ ಶಾಶ್ವತ ಆಸ್ತಿ ನೀಡುವ ಪ್ರಾಮಾಣಿಕ ಪ್ರಯತ್ನವಿಲ್ಲ,” ಎಂದು ಹೇಳಿದರು.

ಬಗರ್ ಹುಕುಂ ಜಮೀನು ಮಂಜೂರು ಮಾಡುವ ಪ್ರಕ್ರಿಯೆಗಾಗಿ ತಾಲ್ಲೂಕು ಮಟ್ಟದಲ್ಲಿ ಶಾಸಕರನ್ನು ಅಧ್ಯಕ್ಷರನ್ನಾಗಿ ಮಾಡಿರುವ ಸರ್ಕಾರದ ಆದೇಶವಿದ್ದರೂ, ಕಳೆದ 2 ವರ್ಷಗಳಿಂದ ಚಿತ್ತರೂಪದಲ್ಲಿ ಯಾವುದೇ ಸಭೆಗಳನ್ನೂ ಆಯೋಜನೆ ಮಾಡಲಾಗಿಲ್ಲ ಎಂದು ಕಾರಜೋಳ ಆರೋಪಿಸಿದರು. ಅವರು ತಕ್ಷಣವೇ ಬಗರ್ ಹುಕುಂ ಸಂಬಂಧಿತ ಕಮಿಟಿ ಸಭೆ ನಡೆಸಿ ಬಡವರಿಗೆ ನ್ಯಾಯ ಒದಗಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.


ಸಿಗಂದೂರು ಸೇತುವೆ ಉದ್ಘಾಟನೆ – ರಾಜಕೀಯ ಆರೋಪಗಳಿಗೆ ಉತ್ತರ

ಸಿಗಂದೂರು ಸೇತುವೆ ಉದ್ಘಾಟನೆಯ ವೇಳೆ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಿಲ್ಲ ಎಂಬ ಡಿ.ಕೆ. ಶಿವಕುಮಾರ್‌ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಂಸದರು, “224 ಕ್ಷೇತ್ರಗಳ ಪೈಕಿ 140 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು, ಸಚಿವರು ಇದ್ದರೂ ಸಹ ಅವರು ಪ್ರೋಟೋಕಾಲ್ ಪಾಲನೆ ಮಾಡುತ್ತಿಲ್ಲ. ನನ್ನನ್ನು 198ಕ್ಕೂ ಹೆಚ್ಚು ಕಾರ್ಯಕ್ರಮಗಳಿಗೆ ಆಹ್ವಾನ ನೀಡದೆ ಬಿಜೆಪಿ ವಿರುದ್ಧ ರಾಜಕೀಯವನ್ನೇ ಆಡಿದ್ದಾರೆ,” ಎಂದು ಚಾಟಿ ಬೀಸಿದರು.

ಅವರು ಮುಂದೆ ಹೇಳಿದರು:
“ಪ್ರೋಟೋಕಾಲ್ ಪಾಲನೆ ಮಾಡುವುದು ಎಲ್ಲರ ಜವಾಬ್ದಾರಿ. ಶಾಶ್ವತ ನೀತಿ, ನಿಯಮಗಳ ಪ್ರಕಾರ ಮುಖ್ಯಮಂತ್ರಿಗಳನ್ನು ಕರೆಯಬೇಕಾದ ಸಂದರ್ಭದಲ್ಲಿ ಮಾತ್ರ ಅಧಿಕೃತ ಅಧ್ಯಕ್ಷತೆ ಅಗತ್ಯವಿರುತ್ತದೆ. ಆದರೆ ಈ ಸರ್ಕಾರ ಪ್ರಗತಿಗಿಂತ ರಾಜಕಾರಣಕ್ಕೆ ಆದ್ಯತೆ ನೀಡುತ್ತಿದೆ.”

₹500 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಸಿಗಂದೂರು ಸೇತುವೆ ರಾಜ್ಯದ ಆಸ್ತಿ ಆಗಿದೆ ಎಂಬುದನ್ನು ಮೆಚ್ಚದೆ, ಮುಖ್ಯಮಂತ್ರಿ ರಾಜಕೀಯವಾಗಿ ಪ್ರತಿಕ್ರಿಯಿಸುತ್ತಿರುವುದನ್ನು carrosm ಸಂಸದರು ಟೀಕಿಸಿದರು.


ED ದಾಳಿ ಆರೋಪ – ಸ್ಪಷ್ಟನೆ ನೀಡಿದ ಕಾರಜೋಳ

ಕಾಂಗ್ರೆಸ್‌ನ 55 ಶಾಸಕರಿಗೆ ಈಡಿ ದಾಳಿ ಮಾಡುವ ಯೋಜನೆ ಇದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಕಾರಜೋಳ,
“ಯಾರು ಮಾರಾಟಕ್ಕೆ ಸಿದ್ಧರಿದ್ದಾರೋ ಅವರು ಖರೀದಿಯಾಗುತ್ತಾರೆ. ಹುನಗುಂದ ಶಾಸಕನ ಬಳಿ ಆ ಪಟ್ಟಿಯನ್ನೇ ಕೇಳಿ, ಅವರು ಅದನ್ನು ಬಿಡುಗಡೆ ಮಾಡಲಿ. ನಾನು ಕೂಡ ಅದೇ ಜಿಲ್ಲೆಗೆ ಸೇರಿದವನು. ಯೋಗ್ಯ, ಸಮಾಜ ಸೇವೆಗೆ ಬದ್ಧ, ನೈತಿಕತೆಯಿರುವವರು ಇದ್ದರೆ ಖಂಡಿತ ಖರೀದಿ ಮಾಡುತ್ತೇವೆ,” ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು

Leave a Reply

Your email address will not be published. Required fields are marked *