ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಚಿತ್ರದುರ್ಗ ಜೂ. 12 ಆರ್‍ಸಿಬಿ ವಿಜಯೋತ್ಸವ ವೇಳೆ ಸಂಭವಿಸಿದ ಕಾಲ್ತುಳಿತ ಮತ್ತು 11ಸಾವಿಗೆ ಸಂಬಂಧಿಸಿ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯಿಂದ (ಎಐಸಿಸಿ) ಸಿಎಂ, ಡಿಸಿಎಂ ತಲೆದಂಡದ ನಿರೀಕ್ಷೆಯಲ್ಲಿದ್ದೆವು. ಅದರ ಬದಲಾಗಿ ಜಾತಿಗಣತಿಯನ್ನು ಅಡ್ಡ ಇಟ್ಟು ಜನರ ಗಮನವನ್ನು ಬೇರೆಡೆ ಸೆಳೆಯಲು ಕಾಂಗ್ರೆಸ್ ಪಕ್ಷ ಪ್ರಯತ್ನಿಸುತ್ತಿದೆ ಎಂದು ರಾಜ್ಯ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.
ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರ ಆರ್.ಸಿ.ಬಿ ಗೆಲುವಿನ ಪ್ರಯೋಜನ ಪಡೆಯಲು ಪಂದ್ಯಾಟವನ್ನು ಗೆಲ್ಲುವ ಮೊದಲೇ ಸಂಭ್ರಮಾಚರಣೆಗೆ ಅನುಮತಿ ಪಡೆದಿತ್ತು. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹತ್ತಿರ 11 ಜನ ಅಮಾಯಕರನ್ನು ಸರ್ಕಾರವೇ ಕೊಲೆ ಮಾಡಿರುವುದು ಆರ್‍ಸಿಬಿ ತಂಡಕ್ಕೂ ಯಾವುದೇ ಸಂಬಂಧ ಇಲ್ಲದೇ ಇದ್ದರೂ ಕೂಡ ಕ್ರೇಡಿಟ್ ಪಡೆಯುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಧಾನಸೌದದ ಮೆಟ್ಟಲ ಮೇಲೆ ಆರ್‍ಸಿಬಿ ಆಟಗಾರರಿಗೆ ಸನ್ಮಾನ ಮಾಡುತ್ತೇವೆ ಅಲ್ಲಿಗೆ ಎಲ್ಲಾ ಜನರಿಗೂ ಫ್ರೀ ಎಂಟ್ರಿ ಎಂದು ಜನರನ್ನು ಕರೆದು 11 ಜನ ಅಮಾಯಕರನ್ನು ಸರ್ಕಾರವೇ ಕೊಲೆ ಮಾಡಿದೆ. ನೈತಿಕತೆ ಇದ್ದಿದ್ದರೆ ಅಂದೇ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ರಾಜೀನಾಮೆ ಕೊಟ್ಟು ಹೋಗುತ್ತಿದ್ದರು. ಆದರೆ ನಾಚಿಕೆ ಮಾನ ಮರ್ಯಾದೆ ಎಂಬುದೇ ಇಲ್ಲದಂತೆ ಪೊಲೀಸರ ಮೇಲೆ ಗೂಬೆ ಕೂರಿಸಿ ಅಮಾನತ್ತು ಮಾಡಿದ್ದಾರೆ ಇದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ.
ಖಅಃ ವರ್ಡ್ ಟೀಮ್ ಅಲ್ಲ, ಟೀಮಲ್ಲಿ ರಾಜ್ಯದವರು ಒಬ್ಬರೂ ಇಲ್ಲ ಜನ ಸಂಭ್ರಮ ಪಟ್ಟಿದ್ದಾರೆ, ಸರ್ಕಾರಕ್ಕೂ ಟೀಮ್‍ಗೆ ಏನು ಸಂಬಂಧ ಸಿಎಂ, ಡಿಸಿಎಂ ಕ್ರೆಡಿಟ್ ತೆಗೆದುಕೊಳ್ಳಲು ವಿಧಾನಸೌಧಕ್ಕೆ ಕರೆದರು ವಿಧಾನಸೌಧ ಪ್ಲೇಗ್ರೌಂಡ್ ಏನು?. ಎಲ್ಲರೂ ಬನ್ನಿ ಎಂದು ಕರೆದರು ಫ್ರೀ ಎಂದು ಹೇಳಿ ಹೇಳಿ ಇದನ್ನೂ ಫ್ರೀ ಎಂದು ಹೇಳಿ ಕರೆದರು ಸರ್ಕಾರದ ಅಚಾತುರ್ಯದಿಂದ ಕಾಲ್ತುಳಿತದಲ್ಲಿ 11ಜನರ ಪ್ರಾಣ ಹಾನಿ ತಪ್ಪು ಮಾಡಿದ್ದು ಸರ್ಕಾರ, ಸಿಎಂ, ಡಿಸಿಎಂ ರಾಜೀನಾಮೆ ಕೊಡಬೇಕು ನಿಮ್ಮ ಚರ್ಮ ಉಳಿಸಿಕೊಳ್ಳಲು, ಬೇರೆಯವರ ಚರ್ಮ ಸುಲಿದಿದ್ದೀರಿಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡಿದ್ದಾರೆ ದಿಕ್ಕು ತಪ್ಪಿಸಲು ಮರು ಜಾತಿ ಜನಗಣತಿಗೆ ಹೈಕಮಾಂಡ್ ಸೂಚನೆ ಕಾಂಗ್ರೆಸ್ ಹೈಕಮಾಂಡ್ ಈಸ್ ಡೆಡ್ ವುಡ್ 250ಕೋಟಿ ಜಾತಿ ಗಣತಿಗೆ ಖರ್ಚಾಗಿದ್ದು ಹೈಕಮಾಂಡ್ ಬಳಿ ವಸೂಲಿ ಮಾಡಿ ಕಾಂಗ್ರೆಸ್ ಹೈಕಮಾಂಡ್ ಕೇಂದ್ರ ಸರ್ಕಾರ ಅಲ್ಲ ಎಂದರು.
ಸಿದ್ಧರಾಮಯ್ಯ ಸರ್ಕಾರದಲ್ಲಿ ದಿನಕ್ಕೊಂದು ಹಗರಣ ಒಂದು ಬ್ಯಾಟ್‍ನಿಂದ ಒಂದು ಬಾಲ್ ಹೊಡೆಯಬಹುದು ರಾಜ್ಯದಲ್ಲಿ ಭ್ರಷ್ಟಾಚಾರದ ಬಾಲ್‍ಗಳು ಹೆಚ್ಚಿವೆ ನಾನು ಎಷ್ಟು ಬಾಲ್ ಹೊಡೆಯಬಹುದು ? ಟೆರರಿಸ್ಟ್‍ಗಳನ್ನು ಯಾರಾದರೂ ಕರೆದು ಗುಂಡು ಹಾಕಿ ಎನ್ನುತ್ತಾರೆ? ಟೆರರಿಸ್ಟ್ ಅಟ್ಯಾಕ್ ಮುಂದಿಟ್ಟು ಪ್ರಧಾನಿ ರಾಜೀನಾಮೆ ಕೇಳುತ್ತಾರೆಆರ್ ಸಿಬಿ ಸಂಭ್ರಮಕ್ಕೆ ನೀವು ಜನರನ್ನು ಕರೆದಿದ್ದೀರಿರಾಜ್ಯ ಸರ್ಕಾರಕ್ಕೆ ಸ್ಕೀಮ್ ಗೊತ್ತಿಲ್ಲ, ಬರೀ ಸ್ಕ್ಯಾಮ್ ಗೊತ್ತುಚುನಾವಣೆ ನಿಲ್ಲಲ್ಲ ಎಂದು ಸಿಎಂ ನಾಲ್ಕು ಸಲ ಹೇಳಿದ್ದಾರೆಸಿದ್ಧರಾಮಯ್ಯಗೆ ಅಧಿಕಾರ ದಾಹ ಬಿಡಬೇಕಲ್ಲಮುಂದಿನ ಸಲ ಸ್ಪರ್ಧಿಸಿದರೂ ಜನ ಸೋಲಿಸುತ್ತಾರೆ ಕೇಂದ್ರ ವಿಪಕ್ಷ ನಾಯಕರಿಗೆ ಜನ ನಯಾಪೈಸೆ ಬೆಲೆ ಕೊಡಲ್ಲಕೇಂದ್ರದ ವಿಪಕ್ಷ ನಾಯಕ ಟ್ರೋಲ್ ಲೀಡರ್ ಕಾಂಗ್ರೆಸ್ ಪಕ್ಷ ಬ್ರಿಟಿಷರು ಜನ್ಮ ಕೊಟ್ಟ ಪಕ್ಷ, ಬಿಜೆಪಿ ನಮ್ಮ ದೇಶದ ಪಕ್ಷಬ್ರಿಟಿಷರೇ ಹೋದ ಬಳಿಕ ಕಾಂಗ್ರೆಸ್ ಏಕೆ ಬೇಕುಟೆರರ್ ಅಟ್ಯಾಕ್‍ಗೆ ಪಾಕ್ ಒಳಗೆ ನುಗ್ಗಿ ಹೊಡೆದಿದ್ದೇವೆ ಅದಕ್ಕೂ ವಿಪಕ್ಷದವರು ಸಾಕ್ಷಿ ಕೇಳುತ್ತಾರೆಂದು ಚಲವಾದಿ ನಾರಾಯಣಸ್ವಾಮಿ ಕಿಡಿಕಾರಿ ಸಿದ್ದರಾಮಯ್ಯ ಭ್ರಷ್ಟಾಚಾರದ ಅಂಕಗಳನ್ನು ಪಡೆದಿದ್ದಾರೆ. ಪ್ರತಿನಿತ್ಯ ಅಗರಣಗಳ ಸರಮಾಲೆಯನ್ನು ಪಡೆಯುತ್ತಿದ್ದಾರೆ.ಎಂದರು.
ಹೈಕಮಾಂಡ್ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಮೇಲೆ ಕ್ರಮ ಕೈಗೊಳ್ಳುವುದು ಬಿಟ್ಟು, ಸರ್ಕಾರಕ್ಕೆ ಉಪಾಯ ಹೇಳಿಕೊಟ್ಟಿದ್ದಾರೆ. 11 ಜನರ ಸಾವಿನ ಪ್ರಕರಣ ಮರೆಮಾಚಲು ಮರು ಜಾತಿಜನಗಣತಿ ಮಾಡುವುದಾಗಿ ಹೇಳಿ ಎಂದಿದ್ದಾರೆ. ಇದ ಯಾವ ಸೀಮೆ ನ್ಯಾಯಾ ? ಹೈಕಮಾಂಡ್‍ನಲ್ಲಿಯೂ ಯಾರು ಕೂಡ ನ್ಯಾಯವಂತವರಿಲ್ಲ ಎಂಬುದು ತಿಳಿಯುತ್ತದೆ. ಇದಕ್ಕೆ ಜನರು ಸೂಕ್ತ ಉತ್ತರ ಕೊಡಲಿದ್ದಾರೆ ಎಂದು ಗುಡುಗಿದ ಅವರು.ಸಂವಿಧಾನದ ಪ್ರಕಾರ ಕೆಲಸ ಮಾಡುವುದನ್ನು ಬಿಟ್ಟು, ಹೈಕಮಾಂಡ್ ಹೇಳಿದಂತೆ ಕೆಲಸ ಮಾಡುತ್ತಿದ್ದಾರೆ. ಇದಕ್ಕೆನಾ ಜನರು ನಿಮ್ಮನ್ನು ಅಯ್ಕೆ ಮಾಡಿದ್ದು ಎಂದು ಪ್ರಶ್ನಿಸಿದರು.
ರಾಷ್ಟ್ರ ರಾಜಕಾರಣದಲ್ಲಿ ತನ್ನದೆ ಆದ ನಿಟ್ಟಿನಲ್ಲಿ ಮೋದಿ ಅವರ 11 ವರ್ಷಗಳು ಜನಸೇವೆಯಲ್ಲಿ ದಾಪುಗಾಲು ಇಡುತ್ತಿದ್ದಾರೆ.14 ವರ್ಷಗಳ ಕಾಲ ಗುಜರಾತ್ ಮುಖ್ಯಮಂತ್ರಿ ಆಗುವ ಮೂಲಕ ಜನ ಸೇವೆ ಸಲ್ಲಿಸಿ ದೇಶ ಸೇವೆ ಮಾಡುತ್ತಿದ್ಧಾರೆ.ಆನೇಕ ಪಕ್ಷಗಳು ದೇಶದಲ್ಲಿ ಆಳ್ವಿಕೆ ಮಾಡಿವೆ ಆದರೆ ಕಳಂಕದ ಪಟ್ಟಿ ಪಡೆದಿವೆ ಆದರೆ ಮೋದಿ ಅವರು ಯಾವುದೇ ಒಂದು ಕಳಂಕ ಇಲ್ಲ. ಭ್ರಷ್ಟಾಚಾರ ಇಲ್ಲ. ನಿಷ್ಕಳಂಕ ರಾಜಕೀಯದ ಮೇರು ವ್ಯಕ್ತಿ ಎಂಬುದನ್ನು ವಿಶ್ವಕ್ಕೆ ತೋರಿಸಿದ್ದಾರೆ.
ಸಬಕ್ ಸಾಥ್ ಸಬಕ್ ವಿಕಾಸ್ ಎಂಬ ಘೋಷ ವಾಕ್ಯದೊಂದಿಗೆ ಮುನ್ನಡೆಯುತ್ತಿದ್ದಾರೆ.ಬಡತನ ರೇಖೆಗಿಂತ ದೇಶ ಮೇಲೆಳುತ್ತಿದೆ. ನಮ್ಮ ಸ್ಥಿತಿಗತಿ ಬದಲಾಗುತ್ತಿದೆ. ವಿರೋಧ ಪಕ್ಷಗಳು ಸತ್ಯವನ್ನು ಮರೆಮಾಚಿ ಆರೋಪಗಳನ್ನು ಮಾಡುತ್ತಾರೆ. ಇದನ್ನು ಯಾರೂ ಕೂಡ ಒಪ್ಪುವುದಿಲ್ಲ.ಸಿದ್ದರಾಮಯ್ಯ ಮೋದಿ ಸೇವೆಗೆ ಶೂನ್ಯ ಎಂಬ ಅಂಕ ಕೊಟ್ಟಿದ್ದಾರೆ. ದೇಶದ ಜನ ಆ ಶೂನ್ಯ ಸೇರಿಸಿಕೊಂಡು ದೇಶದ ಹಿರೋ ಎಂದಿದ್ದಾರೆ. ಅವರಿಗೆ ಅಂಕಗಳನ್ನೆ ಕೊಡಲು ಆಗುವುದಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಕುಮಾರಸ್ವಾಮಿ, ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ಮುರುಳಿ, ಸುರೇಶ್ ಸಿದ್ದಾಪುರ, ಜಯಪಾಲ್ ವಕ್ತಾರರಾದ ನಾಗರಾಜ್ ಬೇದ್ರೇ, ದಗ್ಗೆ ಶಿವಪ್ರಕಾಶ್, ಶಿವಪುತ್ರಪ್ಪ, ಮೋಹನ್, ರಾಮದಾಸ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಬಾಕ್ಸ್ : ಚಿಂತಕ ಚಕ್ರವರ್ತಿ ಸೂಲಿಬೆಲೆ ವಿರುದ್ಧದ ಕೇಸ್‍ಗಳ ಮಾಹಿತಿ ಕೇಳಿದ ವಿಚಾರ ಚಕ್ರವರ್ತಿ ಸೂಲಿಬೆಲೆ ಅವ್ರನ್ನ ಏನ್ ಮಾಡ್ತೀರಿ ಎಂದು ಕಿಡಿ ಚಕ್ರವರ್ತಿ ಸೂಲಿಬೆಲೆ ಏನು ಭಯೋತ್ಪಾದಕರಾ, ಕೊಲೆಗಡುಕರಾ? ನೀವು ಟೆರರಿಸ್ಟ್, ಕೊಲೆಗಡುಕರನ್ನೇ ರಕ್ಷಣೆ ಮಾಡ್ತೀರಿ ಚಕ್ರವರ್ತಿ ಸೂಲಿಬೆಲೆ ಹಿಂದುತ್ವದ ಪರ ಚಿಂತಕ, ಭಾಷಣಕಾರಭಾಷಣ ಮಾಡಿದ್ದಕ್ಕೆಲ್ಲ ಏನ್ ಮಾಡ್ತೀರಿ? ಚಕ್ರವರ್ತಿ ಸೂಲಿಬೆಲೆ ಅವರನ್ನು ಮುಟ್ಟಿ ನೋಡಿ ಗೊತ್ತಾಗುತ್ತೆಂದು ಸವಾಲು*ಗೊಡ್ಡು ಬೆದರಿಕೆಗೆ ನಾವು ಹೆದರಲ್ಲ ಎಲ್ಲದಕ್ಕೂ ಇತಿಮಿತಿ ಇದೆಸರ್ಕಾರವೇ ಇತಿಮಿತಿ ಮೀರಿದರೆ ಜನ ಉತ್ತರ ಕೊಡುತ್ತಾರೆ ನಿಮ್ಮ ಸರ್ಕಾರ ತಂದದ್ದು ಜನ, ತೆಗೆಯುವವರು ಜನರೆಂಬ ಅರಿವು ಸಿಎಂಗೆ ಇರಬೇಕು ಪರಿಷತ್ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಹೇಳಿದರು.