
ದುಬೈನ ರಾಜಕುಮಾರ ಶೇಖ್ ಹಮ್ದಾನ್ ಮತ್ತು ಅವರ ಪತ್ನಿ ಶೀಖಾ ಶೀಖಾ ಬಿಂತ್ ಸಯೀದ್ ಬಿನ್ ಥಾನಿ ಅಲ್ ಮುಕ್ತೌಮ್ ತಮ್ಮ ದಾಂಪತ್ಯದ ಗುರುತಾಗಿ ನಾಲ್ಕನೇ ಮಗುವನ್ನು ತಮ್ಮ ಮನೆಗೆ ಸ್ವಾಗತಿಸಿದ್ದಾರೆ. ಅದು ಮಾತ್ರವಲ್ಲ ರಾಜಕುಮಾರ್ ಶೇಖ್ ಹಮ್ದಾನ್ ತಮ್ಮ ಪುತ್ರಿಗೆ ಇಟ್ಟಿರುವ ಹೆಸರನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಶೇಖ್ ಹಮ್ದಾನ್ ಹಾಗೂ ಅವರ ಕುಟುಂಬದವರೆಲ್ಲರೂ ಸೇರಿ ಮಗುವಿಗೆ ಹಿಂದ್ ಎಂದು ನಾಮಕರಣ ಮಾಡಿದ್ದಾರೆ.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಶೇಖ್ ಹಮ್ದಾನ್ ನಮ್ಮ ಪ್ರಾರ್ಥನೆಯನ್ನು ಪೂರ್ಣಗೊಳಿಸಿ ನಮಗೆ ಸಂಪೂರ್ಣ ಕೃಪೆ ತೋರಿದ ದೇವರಿಗೆ ನಾನು ಧನ್ಯವಾದ ಹೇಳುತ್ತೇನೆ. ದೇವರು ನಮಗೆ ಹೆಣ್ಣು ಮಗುವನ್ನು ಕರುಣಿಸಿದ್ದಾನೆ. ಹಿಂದ್ ಇವಳು ಹಮ್ದಾನ್ ಬಿನ್ ಮೊಹಮ್ಮೆದ್ ಅಲ್ ಮಕ್ತೌಮ್ನ ಮಗಳು ಎಂದು ಹೇಳಿದ್ದಾರೆ.ಇನ್ನು ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಹಿಂದ್ ಹೆಸರಿನ ಅರ್ಥವೇನು ಎಂದು ಎಲ್ಲರೂ ಹುಡುಕುತ್ತಿದ್ದಾರೆ. ಹಿಂದ್ ಎಂದರೆ ಸಮೃದ್ಧಿ ಎಂದು ಅರ್ಥ. ರಾಜಕುಮಾರ ಹಮ್ದಾನ್ ಪುತ್ರಿಗೆ ಅವಳ ಅಜ್ಜಿಯ ಹೆಸರನ್ನೇ ಇಡಲಾಗಿದೆ. ಶೇಖ್ ಹಿಂದ್ ಬಿಂತ್ ಮಕ್ತೌಮ್ ಬಿನ್ ಜುಮಾ ಅಲ್ ಮಕ್ತೌಮ್ ಎಂದು.

ಶೇಖ್ ಹಮ್ದಾನ್ 2008ರಲ್ಲಿ ದುಬೈನ ರಾಜಕುಮಾರರಾದರು. ಇವರು ಯುಎಇ ದೇಶದ ಉಪಪ್ರಧಾನಿ ಹಾಗೂ ರಕ್ಷಣಾ ಸಚಿವಾಲಯವನ್ನು ಕೂಡ ನಿಭಾಯಿಸುತ್ತಾರೆ, ಇವರು ದುಬೈನ್ನು ಆಳುತ್ತಿರುವ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ನ ಮಕ್ತೌಮ್ ಮತ್ತು ಶೇಖ್ ಹಿಂದ್ ಬಿಂತ್ ಮಕ್ತೌಮ್ ಬಿನ್ ಜುಮಾ ಅಲ್ ಮಕ್ತೌಮ್ ಅವರ ಎರಡನೇ ಪುತ್ರ. ದುಬೈನ ರಾಜಕುಮಾರ ಹಮ್ದಾನ್ಗೆ ಆಟ, ಅಡ್ವೆಂಚರ್ಗಳೆಂದರೆ ಹೆಚ್ಚು ಉತ್ಸಾಹ. ಸೋಷಿಯಲ್ ಮೀಡಿಯಾದಲ್ಲಿ ಯಾವಾಗಲೂ ಆ್ಯಕ್ಟಿವ್ ಇರುತ್ತಾರೆ. ಈ ಮೂಲಕವೇ ಜನರ ಮನಸ್ಸುಗಳಿಗೆ ಹತ್ತಿರವಾಗಿದ್ದಾರೆ ಮತ್ತು ನೆಟ್ಟಿಗರ ಜೊತೆ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ.

Source : Newsfirst
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1