ವೈದ್ಯರ ಎಡವಟ್ಟು: ​ಎಡಗಣ್ಣಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋದ ಬಾಲಕನ ಬಲ ಕಣ್ಣಿಗೆ ಆಪರೇಷನ್!​

ಎಡಗಣ್ಣಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋದ ಬಾಲಕನಿಗೆ, ವೈದ್ಯರು ಬಲ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿರುವ ಆಘಾತಕಾರಿ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಈ ಕುರಿತು ಬಾಲಕನ ಪೋಷಕರು ವೈದ್ಯರ ವಿರುದ್ಧ ಆಕ್ರೋಶ ಹೊರಹಾಕಿದ್ದು, ಪೊಲೀಸ್ ದೂರು ನೀಡಿದ್ದಾರೆ. ವೈದ್ಯರ ಹಾಗೂ ಆಸ್ಪತ್ರೆಯ ಪರವಾನಗಿಯನ್ನು ರದ್ದು ಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಎಡಗಣ್ಣಿನ ಬದಲು ಬಲಗಣ್ಣಿಗೆ ಬ್ಯಾಂಡೇಜ್ ಹಾಕಿರುವುದನ್ನು ಕಂಡು ತಾಯಿ ಕಂಗಾಲಾಗಿದ್ದಾರೆ. ಬಳಿಕ ಸೂಕ್ಷ್ಮವಾಗಿ ಗಮನಿಸಿದಾಗ ವೈದ್ಯರು ತಪ್ಪಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ ಎಂಬುದು ಖಚಿತವಾಗಿದೆ.

  • ನೋಯ್ಡಾದಲ್ಲಿ ವೈದ್ಯರ ಎಡವಟ್ಟು, ಆಸ್ಪತ್ರೆಯ ಪರವಾನಗಿ ರದ್ದಿಗೆ ಆಗ್ರಹ
  • ಎಡಗಣ್ಣಿನ ಚಿಕಿತ್ಸೆಗೆ ಹೋದ ಬಾಲಕನಿಗೆ, ಬಲಗಣ್ಣಿಗೆ ಶಸ್ತ್ರಚಿಕಿತ್ಸೆ
  • ವೈದ್ಯರ ನಡೆಗೆ ಬಾಲಕನ ಪೋಷಕರಿಂದ ಆಕ್ರೋಶ

ನೋಯ್ಡಾ: ಎಡಗಣ್ಣಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋದ ಬಾಲಕನಿಗೆ, ವೈದ್ಯರು ಬಲ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿರುವ ಆಘಾತಕಾರಿ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಈ ಕುರಿತು ಬಾಲಕನ ಪೋಷಕರು ವೈದ್ಯರ ವಿರುದ್ಧ ಆಕ್ರೋಶ ಹೊರಹಾಕಿದ್ದು, ಪೊಲೀಸ್ ದೂರು ನೀಡಿದ್ದಾರೆ. ವೈದ್ಯರ ಹಾಗೂ ಆಸ್ಪತ್ರೆಯ ಪರವಾನಗಿಯನ್ನು ರದ್ದು ಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

“ಎಡಗಣ್ಣಿನಲ್ಲಿ ಆಗಾಗ್ಗೆ ನೀರು ಬರುತ್ತಿದ್ದರಿಂದ 7 ವರ್ಷದ ಬಾಲಕ ಯುಧಿಷ್ಠರ್‌ನನ್ನು ವೈದ್ಯರು ಪರೀಕ್ಷೆಗೆ ಒಳಪಡಿಸಿದ್ದರು. ಬಳಿಕ ಕಣ್ಣಿನಲ್ಲಿ ಅಲರ್ಜಿ ಆಗಿದೆ ಎಂದು ಹೇಳಿ ಔಷಧ ನೀಡಿದ್ದರು. ಒಂದು ವಾರ ಕಳೆದರೂ, ಸಮಸ್ಯೆ ಮಾತ್ರ ನಿವಾರಣೆ ಆಗಿರಲಿಲ್ಲ. ಹೀಗಾಗಿ ಮತ್ತೆ ಆಸ್ಪತ್ರೆಗೆ ಹೋದಾಗ ಅರವಳಿಕೆ ನೀಡಿ ಶಸ್ತ್ರಚಿಕಿತ್ಸೆ ಮಾಡಬೇಕು, 45 ಸಾವಿರ ಖರ್ಚಾಗುತ್ತದೆ ಎಂದು ವೈದ್ಯ ಡಾ.ಆನಂದ್ ವರ್ಮಾ ಹೇಳಿದ್ದರು. ಅವರ ಮಾತಿಗೆ ಒಪ್ಪಿಸಿ ಸೂಚಿಸಿದೆ. ಕೊನೆಗೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಕಣ್ಣಿನಿಂದ ಪ್ಲಾಸ್ಟಿಕ್‌ನಂತಹ ವಸ್ತುವನ್ನು ಹೊರತೆಗೆಯಲಾಗಿದೆ ಎಂಬುದಾಗಿ ತಿಳಿಸಿದರು” ಎಂದು ಬಾಲಕನ ತಂದೆ ನಿತಿನ್ ಭಾಟಿ ಹೇಳಿಕೊಂಡಿದ್ದಾರೆ.

ಎಡವಟ್ಟಾಗಿರುವುದು ಗೊತ್ತಾಗಿದ್ದು ಹೇಗೆ?

ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ವೈದ್ಯರ ತಿಳಿಸುತ್ತಿದ್ದಂತೆ ಬಾಲಕ ಹಾಗೂ ತಂದೆ ಮನೆಗೆ ಮರಳಿದ್ದಾರೆ. ಮಗ ಮನೆಗೆ ಬರುತ್ತಿದ್ದಂತೆ, ಎಡಗಣ್ಣಿನ ಬದಲು ಬಲಗಣ್ಣಿಗೆ ಬ್ಯಾಂಡೇಜ್ ಹಾಕಿರುವುದನ್ನು ಕಂಡು ತಾಯಿ ಕಂಗಾಲಾಗಿದ್ದಾರೆ. ಬಳಿಕ ಸೂಕ್ಷ್ಮವಾಗಿ ಗಮನಿಸಿದಾಗ ವೈದ್ಯರು ತಪ್ಪಾಗಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ ಎಂಬುದು ಖಚಿತವಾಗಿದೆ. ಕೊನೆಗೆ ಆಸ್ಪತ್ರೆಗೆ ಬಂದು ಪ್ರಶ್ನಿಸಿದಾಗ, ಅಲ್ಲಿದ್ದ ವೈದ್ಯರು ಹಾಗೂ ಸಿಬ್ಬಂದಿ ನಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ನಿತಿನ್ ಭಾಟಿ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿರುವ ಪೊಲೀಸರು, ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಮುಖ್ಯ ವೈದ್ಯಕೀಯ ಅಧಿಕಾರಿಗೆ ದೂರು

ವೈದ್ಯರ ನಿರ್ಲಕ್ಷ್ಯದ ವಿರುದ್ಧ ಬಾಲಕನ ಕುಟುಂಬ ಗೌತಮ್ ಬುದ್ಧ ನಗರದ ಮುಖ್ಯ ವೈದ್ಯಕೀಯ ಅಧಿಕಾರಿ (CMO)ಗೆ ದೂರು ನೀಡಿದೆ. ಕೂಡಲೇ ವೈದ್ಯರ ಹಾಗೂ ಆಸ್ಪತ್ರೆಯ ಪರವಾನಗಿ ರದ್ದುಪಡಿಸಬೇಕು ಎಂದು ಬಾಲಕನ ತಂದೆ ತಂದೆ ನಿತಿನ್ ಭಾಟಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Source : https://vijaykarnataka.com/news/india/medical-negligence-7-year-old-boy-goes-for-surgery-doctor-operates-on-wrong-eye/articleshow/115295463.cms

Views: 0

Leave a Reply

Your email address will not be published. Required fields are marked *