“ಯುದ್ಧದ ಎಫೆಕ್ಟ್: ಹೋಟೆಲ್ ಉದ್ಯಮಕ್ಕೆ ಸಿಲಿಂಡರ್ ಶಾಕ್, ವಾಹನ ಸವಾರರಿಗೆ ಬೆಲೆ ಏರಿಕೆ ಬರೆ!”

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಚಿತ್ರದುರ್ಗ ಮಾ. 10

ಇರಾನ್ ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದಿಂದಾಗಿ ಈಗಾಗಲೇ ಗ್ಯಾಸ್, ಅಡುಗೆ ಎಣ್ಣೆ ಬೆಲೆ ಏರಿಕೆಯಾಗಿದೆ. ಯುದ್ಧ ನಿಲ್ಲುವ ಯಾವ ಮುನ್ಸೂಚನೆಯೂ ಕಾಣಿಸ್ತಾ ಇಲ್ಲ. ಇದರ ನಡುವೆ ಪೆಟ್ರೋಲ್ ಡಿಸೇಲ್ ದರವೂ ಏರಿಕೆಯಾಗುವ ಎಲ್ಲಾ ಸೂಚನೆಗಳು ಕಾಣಿಸುತ್ತಿವೆ. ಮಧ್ಯಪ್ರಾಚ್ಯದ ಯುದ್ಧದ ಎಫೆಕ್ಟ್ ನಿಂದ ಇಲ್ಲಿನ ಗ್ರಾಹಕರು ಕೂಡ ನಡುಗುವಂತೆ ಆಗಿದೆ. ದೇಶಾದ್ಯಂತ ಗ್ಯಾಸ್ ಸಮಸ್ಯೆ ಉಂಟಾಗಿದೆ. ಅದರಲ್ಲೂ ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಈ ಮಧ್ಯೆ ಪಿಜಿ ಮಾಲೀಕರಿಗೂ ಆತಂಕ ಶುರುವಾಗಿದೆ. ಹೀಗಾಗಿ ಪಿಜಿಗಳಲ್ಲಿ ಊಟದ ಮೆನು ಚೇಂಜ್ ಮಾಡಲಾಗಿದೆ.

ಅದರಲ್ಲೂ ಪೆಟ್ರೋಲ್ ಪ್ರತಿ ಲೀಟರ್‍ಗೆ 22 ರೂಪಾಯಿ, ಡಿಸೇಲ್ 24 ರೂಪಾಯಿವರೆಗೂ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗ್ತಾ ಇದೆ. ಈ ಮೂಲಕ ಪೆಟ್ರೋಲ್ ದರ 125 ರೂಪಾಯಿಗೆ, ಡಿಸೇಲ್ ದರ 115 ರೂಪಾಯಿಗೆ ಹೆಚ್ಚಳವಾಗುವ ಸಾಧ್ಯತೆ ಇದೆ. ಎಲ್ಲಾ ಡಿಸ್ಟ್ರಿಬ್ಯೂಟರ್ಸ್‍ಗಳಿಗೂ ಈಗಾಗಲೇ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಲಿಮಿಟೆಡ್ ಪತ್ರವನ್ನು ಬರೆದಿದೆ. ಆ ಪತ್ರದಲ್ಲಿ ದರ ಏರಿಕೆಯ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಅಂದ್ರೆ ಯಾವ ಕ್ಷಣದಲ್ಲಾದರೂ ದರ ಏರಿಕೆಯಾಗಬಹುದು ಎಂಬ ಮಾಹಿತಿಯನ್ನು ಆ ಪತ್ರದ ಮೂಲಕ ನೀಡಲಾಗಿದೆ.

ಮಧ್ಯಪ್ರಾಚ್ಯದಲ್ಲಿನ ಯುದ್ಧ ಎಷ್ಟರಮಟ್ಟಿಗೆ ಎಫೆಕ್ಟ್ ತಟ್ಟಿದೆ ಅಂದರೆ ಸದ್ಯ ದೇಶಾದ್ಯಂತ ಗ್ಯಾಸ್ ಸಿಲಿಂಡರ್‍ಗೆ ಹಾಹಾಕರ ಉಂಟಾಗಿದೆ. ಕಮರ್ಷಿಯಲ್ ಸಿಲಿಂಡರ್‍ಗೆ 115 ರೂ ಏರಿಕೆ ಆಗಿದ್ದು, ಇದು ಹೋಟೆಲ್ ಉದ್ಯಮಕ್ಕೆ ಭಾರೀ ಹೊಡೆತ ಬಿದ್ದಿದೆ. ಇತ್ತ ಜನಜೀವನದ ಮೇಲೂ ಪರಿಣಾಮ ಬೀರುತ್ತಿದೆ. ಗ್ಯಾಸ್ ಸಿಲಿಂಡರ್ ಪೂರೈಕೆಯಲ್ಲಿ ವ್ಯತ್ಯಾಸ ಆಗಿರುವುದು ಇಡೀ ಹೋಟೆಲ್‍ಉದ್ಯಮ ಸೇರಿದಂತೆ ಇದೀಗಪಿಜಿ ಮಾಲೀಕರಿಗೂ ಆತಂಕ ಶುರುವಾಗಿದೆ.

ಈಗಾಗಲೇ ಎಲ್ಪಿಜಿ ಸಿಲಿಂಡರ್ ದರ 60 ರೂಪಾಯಿ ಹಾಗೇ ವಾಣಿಜ್ಯ ಸಿಲಿಂಡರ್ ದರ 115 ರೂಪಾಯಿಗರ ಏರಿಕೆಯಾಗಿತ್ತು. ಪ್ರಸ್ತುತ ಸಿಲಿಂಡರ್ ಗಳ ಕೊರತೆಯೂ ಕಾಡುತ್ತಿದೆ. ಇರಾನ್  ಇಸ್ರೇಲ್ ಯುದ್ಧ ಇಂದಿಗೆ 11ನೇ ದಿನಕ್ಕೆ ಕಾಲಿಟ್ಟಿದೆ. ಅದರ ಪರಿಣಾಮ ದೇಶದ ಮೇಲೂ ತಗುಲಿದೆ. ಮೊದಲೇ ನಿರುದ್ಯೋಗದ ಸಮಸ್ಯೆಯಿಂದ ಬಳಲ್ತಾ ಇರೋರಿಗೆ ಈ ದರ ಏರಿಕೆಯ ಬರೆ ಜೋರಾಗಿನೆ ಬೀಳ್ತಾ ಇದೆ. ಅದರಲ್ಲೂ ವಾಹನ ಸವಾರರಿಗೂ ಈ ದರ ಏರಿಕೆಯ ಪೆಟ್ಟು ಬೀಳಲಿದೆ. ಇದರಿಂದ ಸಾಮಾನ್ಯ ಜನರಿಗೆ ಸಾಕಷ್ಟು ತೊಂದರೆ ಎದುರಾಗುವ ಸಾಧ್ಯತೆ ಇದೆ. ಇನ್ನು ಸಾಮಾನ್ಯವಾಗಿ ಪಿಜಿಗಳಲ್ಲಿ ದಿನಕ್ಕೆ ಮೂರು ಬಾರಿ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಆದರೆ ಇದೀಗ ಉಂಟಾಗಿರುವ ಗ್ಯಾಸ್ ಕೊರತೆಯಿಂದಾಗಿ ಪಿಜಿ ಮಾಲೀಕರು ಅಡುಗೆ ಮಾಡುವುದಕ್ಕೂ ಚಿಂತಿಸುವಂತಾಗಿದೆ. ಇದರಿಂದ ಊಟದ ಮೆನುವಿನಲ್ಲಿ ಬದಲಾವಣೆ ಮಾಡಲು ನಿರ್ಧಾರ ಮಾಡಿದ್ದೇವೆ. ಪಿಜಿಗಳಲ್ಲಿ ಚಪಾತಿ, ರೊಟ್ಟಿ ಮಾಡದಂತೆ ನಿರ್ಧರಿಸಲಾಗಿದೆ. ಅನ್ನ, ಸಾಂಬಾರ್, ಪಲಾವ್ ಹೀಗೆ ಗ್ಯಾಸ್ ಕಡಿಮೆ ಬಳಕೆ ಆಗುವ ಪದಾರ್ಥಗಳನ್ನು ಮಾಡಲು ನಿರ್ಧರಿಸಲಾಗಿದೆ. ಆ ಮೂಲಕ ಪಿಜಿಗಳಲ್ಲಿ ಇಂದಿನಿಂದಲೇ ಹೊಸ ಮೆನು ಜಾರಿ ಆಗುತ್ತೆ. ಕಮರ್ಷಿಯಲ್ ಗ್ಯಾಸ್ ದರ ಹೆಚ್ಚಾದರೂ ಹೆಚ್ಚಳ ಮಾಡಲ್ಲ. ಸದ್ಯ ನಾವೇ ಭರಿಸುತ್ತೇವೆ. ಇದೇ ದರ ಮುಂದುವರೆದರೆ ನೋಡಬೇಕಾಗುತ್ತೆ. ಈ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರ ನೆರವಿಗೆ ಮುಂದಾಗಬೇಕಿದೆ ಎಂದಿದ್ದಾರೆ. 

Leave a Reply

Your email address will not be published. Required fields are marked *