ದಾಲ್ಚಿನ್ನಿ ಬಿಪಿ ಕಮ್ಮಿ ಮಾಡೋದ್ರಲ್ಲಿ ಎತ್ತಿದ ಕೈ! ಆದರೆ ಇದರ ಸೀಕ್ರೆಟ್ ಯಾರಿಗೂ ಗೊತ್ತೇ ಇಲ್ಲ.

ದಾಲ್ಚಿನ್ನಿ ಅಥವಾ ಚಕ್ಕೆ ಆಹಾರಕ್ಕೆ ಟೇಸ್ಟ್ ಕೊಡುತ್ತದೆ ಮತ್ತು ಆರೋಗ್ಯಕ್ಕೆ ಬೆಸ್ಟ್ ಎಂಬ ಹೆಸರು ಪಡೆದು ಕೊಂಡಿದೆ. ಏಕೆಂದರೆ ಇದು ಬಿಪಿ ಶುಗರ್ ಕಮ್ಮಿ ಮಾಡುತ್ತೆ.

ನಾವು ತಯಾರು ಮಾಡುವ ಅಡುಗೆಯ ಸ್ವಾಧಕ್ಕೆ ಬಳಸುವ ವಿವಿಧ ಮಸಾಲೆ ಪದಾರ್ಥಗಳಲ್ಲಿ ದಾಲ್ಚಿನ್ನಿ ಅಥವಾ ಚಕ್ಕೆ ಕೂಡ ಒಂದು. ಸ್ವಲ್ಪ ಸಿಹಿ ಪ್ರಮಾಣವನ್ನು ನೈಸ ರ್ಗಿಕವಾಗಿ ಒಳಗೊಂಡಿರುವ ದಾಲ್ಚಿನ್ನಿ ನಿಮ್ಮ ಬೆಳಗಿನ ಚಹಾದಲ್ಲಿ ಸೇರಿದ್ದರೆ ಅಥವಾ ನೀವು ತಿನ್ನುವ ತಿಂಡಿಯಲ್ಲಿ ಒಳಗೊಂಡಿದ್ದರೆ,ಅದರ ಮಜವೇ ಬೇರೆ. ಹಲವಾರು ಕಾಯಿಲೆಗಳಿಗೆ ಇದು ಔಷಧಿಯಾಗಿ ಕೂಡ ಕೆಲಸ ಮಾಡುತ್ತದೆ.ಏಕೆಂದರೆ ಇದರಲ್ಲಿ ಔಷಧೀಯ ಗುಣಗಳು ಅಷ್ಟರ ಪ್ರಮಾಣದಲ್ಲಿ ಇವೆ. ಒಂದು ಮಾಹಿತಿಯ ಪ್ರಕಾರ ರಕ್ತದ ಒತ್ತಡ ಇರುವವರಿಗೆ ಇದು ಬಹಳ ಒಳ್ಳೆಯದು.

ಬಿಪಿ ಕಾಯಿಲೆಯನ್ನು ನಿಯಂತ್ರಿಸಿ, ಹೃದಯದ ಆರೋಗ್ಯವನ್ನು ಕಾಪಾಡುತ್ತದೆ

ಬಿಪಿ ಕಾಯಿಲೆಯನ್ನು ನಿಯಂತ್ರಿಸಿ, ಹೃದಯದ ಆರೋಗ್ಯವನ್ನು ಕಾಪಾಡುತ್ತದೆ
  • ದಾಲ್ಚಿನ್ನಿ ಅಥವಾ ಚಕ್ಕೆ ನಮ್ಮ ಹೃದಯದ ಕಾಯಿಲೆಯನ್ನು ಅಭಿವೃದ್ಧಿ ಯಾಗದಂತೆ ತಡೆಯುವ ಗುಣ ಹೊಂದಿದೆ.ಅಂದರೆ ನಮ್ಮ ರಕ್ತದಲ್ಲಿ ಹೆಚ್ಚಾದ ಕೊಲೆಸ್ಟ್ರಾಲ್ ಪ್ರಮಾಣವನ್ನು ಇದು ನಿಯಂತ್ರಣ ಮಾಡುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ವನ್ನು ಸಾಕಷ್ಟು ಕಡಿಮೆ ಮಾಡುತ್ತದೆ.
  • ಅದು ಅಲ್ಲದೆ ನಮ್ಮ ರಕ್ತನಾಳಗಳ ಗಾತ್ರವನ್ನು ಹಿಗ್ಗಿಸಿ ಸರಾಗ ವಾದ ರಕ್ತ ಸಂಚಾರ ಆಗುವಂತೆ ಮಾಡಿ ರಕ್ತದ ಒತ್ತಡ ನಿಯಂತ್ರ ಣದಲ್ಲಿ ಉಳಿಯುವಂತೆ ನೋಡಿಕೊಳ್ಳುತ್ತದೆ.
  • ಇದರಿಂದ ಹೃದಯ ರಕ್ತನಾಳದ ಕಾಯಿಲೆಗಳು ಸಹ ದೂರವಾ ಗುತ್ತವೆ.. ಇನ್ನು ಇದರ ಪ್ರಯೋಜನಗಳು ಇಷ್ಟಕ್ಕೆ ಮಾತ್ರ ಸೀಮಿ ವಾಗಿಲ್ಲ! ಬದಲಿಗೆ ಹಲವಾರು ರೀತಿಯಲ್ಲಿ ಪ್ರಯೋಜನಕ್ಕೆ ಬರುತ್ತವೆ…ಮುಂದೆ ಓದಿ

ದಾಲ್ಚಿನ್ನಿಯ ಆರೋಗ್ಯದ ಪ್ರಯೋಜನಗಳೇನು ಗೊತ್ತಾ?

ಸಕ್ಕರೆ ಕಾಯಿಲೆಗೆ ಒಳ್ಳೆಯದು

ಸಕ್ಕರೆ ಕಾಯಿಲೆಗೆ ಒಳ್ಳೆಯದು

ದಾಲ್ಚಿನ್ನಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಅದ್ಭುತವಾಗಿ ಕಂಟ್ರೋಲ್ ಮಾಡುತ್ತದೆ. ಏಕೆಂದರೆ ಇದರಲ್ಲಿ ಇನ್ಸುಲಿನ್ ತರಹದ ಅಂಶಗಳು ಲಭ್ಯ ವಿದ್ದು, ಇದು ದೇಹದಲ್ಲಿ ಗ್ಲುಕೋಸ್ ಪ್ರಮಾಣವನ್ನು ಹೀರಿಕೊಳ್ಳು ತ್ತದೆ ಮತ್ತು ಇನ್ಸುಲಿನ್ ಪ್ರತಿರೋಧ ತೊಂದರೆಯನ್ನು ಕಡಿಮೆ ಮಾಡಿ ಜನರಲ್ಲಿ ಟೈಪ್ 2 ಮಧುಮೇಹ ಬರದಂತೆ ನೋಡಿಕೊಳ್ಳುತ್ತದೆ. ಹೀಗಾಗಿ ಸಕ್ಕರೆ ಕಾಯಿಲೆ ಇರುವ ಜನರಿಗೆ ಇದು ಒಂದು ರೀತಿಯ ನೈಸರ್ಗಿಕ ಔಷಧಿ ಇದ್ದಂತೆ!

ಆಂಟಿ ಆಕ್ಸಿಡೆಂಟ್ ಅಂಶಗಳು ಹೆಚ್ಚಾಗಿವೆ

ಆಂಟಿ ಆಕ್ಸಿಡೆಂಟ್ ಅಂಶಗಳು ಹೆಚ್ಚಾಗಿವೆ

ದಾಲ್ಚಿನ್ನಿ ತನ್ನಲ್ಲಿ ಪಾಲಿಫಿನಾಲ್ ಎನ್ನುವ ಆಂಟಿ ಆಕ್ಸಿಡೆಂಟ್ ಅಂಶಗಳನ್ನು ಅತಿ ಹೆಚ್ಚಿನ ಪ್ರಮಾಣದಲ್ಲಿ ಹೊಂದಿದ್ದು, ಆಕ್ಸಿಡೇಟಿವ್ ಒತ್ತಡವನ್ನು ನಿವಾರಣೆ ಮಾಡುತ್ತದೆ ಮತ್ತು ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಹೋರಾಡುತ್ತದೆ. ಅಷ್ಟೇ ಅಲ್ಲದೆ ದೀರ್ಘಕಾಲದ ಕಾಯಿಲೆ ಗಳನ್ನು ನಿಯಂತ್ರಣ ಮಾಡುವುದು ಮಾತ್ರವಲ್ಲದೆ ಆಂಟಿ ಇಂಪ್ಲಾಮೆಟರಿ ಗುಣಲಕ್ಷಣಗಳನ್ನು ಸಹ ಹೊಂದಿರುತ್ತದೆ.

ಇದೊಂದು ಉರಿಯುತ ನಿವಾರಕ

ಇದೊಂದು ಉರಿಯುತ ನಿವಾರಕ

ನಿರಂತರವಾಗಿ ಉರಿಯುತ ಎದುರಾಗುತ್ತಿದ್ದರೆ ಅದರಿಂದ ವಿವಿಧ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತವೆ. ಮಾರಕ ಕ್ಯಾನ್ಸರ್ ಕೂಡ ಇದೇ ಕಾರಣದಿಂದ ಉಂಟಾಗುತ್ತದೆ. ಆದರೆ ದಾಲ್ಚಿನ್ನಿ ತನ್ನ ಉರಿಯುತ ವಿರೋಧಿ ಗುಣಲಕ್ಷಣಗಳಿಂದ ಇಂತಹ ಹಲವಾರು ಕಾಯಿಲೆಗಳನ್ನು ಸದ್ದಿಲ್ಲದೆ ಸರಿಪಡಿಸುತ್ತದೆ. ಹಾಗಾಗಿ ನಮ್ಮ ಆಯುರ್ವೇದ ಪದ್ಧತಿಯಲ್ಲಿ ಇಂದಿಗೂ ಕೂಡ ದಾಲ್ಚಿನ್ನಿ ತನ್ನ ಹೆಸರು ಉಳಿಸಿಕೊಂಡಿದೆ.

ತೂಕ ನಿಯಂತ್ರಣ ಸಾಧ್ಯ

ತೂಕ ನಿಯಂತ್ರಣ ಸಾಧ್ಯ
  • ನಮ್ಮ ಇನ್ಸುಲಿನ್ ಸೂಕ್ಷ್ಮತೆಯನ್ನು ಅಭಿವೃದ್ಧಿಪಡಿಸುವ ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣ ಮಾಡುವ ಗುಣ ಗಳನ್ನು ದಾಲ್ಚಿನ್ನಿ ಒಳಗೊಂಡಿದೆ.
  • ಹೀಗಾಗಿ ಹೆಚ್ಚುವರಿ ಸಕ್ಕರೆ ಪ್ರಮಾಣ ಸೇವಿಸಬೇಕು ಎನ್ನುವ ಭಾವನೆಯನ್ನು ಇದು ತೊಡೆದುಹಾಕಿ ದೇಹದ ತೂಕವನ್ನು ನಿಯಂತ್ರಣ ಮಾಡುವಲ್ಲಿ ಯಶಸ್ವಿಯಾಗುತ್ತದೆ. ದಾಲ್ಚಿನ್ನಿ ಯನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಬಳಕೆ ಮಾಡುವುದು ತುಂಬಾ ಉತ್ತಮ.​

ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು

ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು
  • ಕೆಲವೊಂದು ಅಧ್ಯಯನಗಳು ಹೇಳುವ ಹಾಗೆ ದಾಲ್ಚಿನ್ನಿ ನಮ್ಮ ಮೆದುಳಿನ ಆರೋಗ್ಯದ ಮೇಲೆ ಸಕಾರಾತ್ಮಕ ವಾಗಿ ಪ್ರಭಾವ ಬೀರುತ್ತದೆ.ಇದು ನಮ್ಮ ಅರಿವಿನ ಮತ್ತು ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ.
  • ಮೆದುಳಿನ ಜೀವಕೋಶಗಳನ್ನು ಅಭಿವೃದ್ಧಿ ಪಡಿಸುವುದರ ಜೊತೆಗೆ ನರಮಂಡಲಗಳ ಸಮಸ್ಯೆಗಳನ್ನು ದೂರ ಮಾಡುತ್ತದೆ.ಈ ವಿಚಾರದಲ್ಲಿ ಹೆಚ್ಚಿನ ಅಧ್ಯಯನ ಅಗತ್ಯವಿದೆ.​

ನಿಮ್ಮ ಆಹಾರ ಪದ್ಧತಿಯಲ್ಲಿ ದಾಲ್ಚಿನ್ನಿಯನ್ನು ಸೇರಿಸಿಕೊಳ್ಳಿ

ನಿಮ್ಮ ಆಹಾರ ಪದ್ಧತಿಯಲ್ಲಿ ದಾಲ್ಚಿನ್ನಿಯನ್ನು ಸೇರಿಸಿಕೊಳ್ಳಿ
  • ದಾಲ್ಚಿನ್ನಿ ಪುಡಿಯನ್ನು ನಿಮ್ಮ ಬೆಳಗಿನ ತಿಂಡಿಯಲ್ಲಿ ಸ್ವಲ್ಪ ಮಿಕ್ಸ್ ಮಾಡಿ ಸೇವಿಸಿ
  • ದಾಲ್ಚಿನ್ನಿ ಚಹಾ ತಯಾರು ಮಾಡಿ ಅದಕ್ಕೆ ಸ್ವಲ್ಪ ಜೇನುತುಪ್ಪ ವನ್ನು ಹಾಗೆ ಸೇವಿಸಬಹುದು.
  • ನಿಮ್ಮ ದೇಹಕ್ಕೆ ಪೌಷ್ಟಿಕಾಂಶ ಸಿಗಲು ಮತ್ತು ಬಾಯಿಗೆ ರುಚಿ ಸಿಗಲು ನೀವು ತಯಾರು ಮಾಡುವ ಸ್ಮೂತಿಯಲ್ಲಿ ದಾಲ್ಚಿನ್ನಿ ಯನ್ನು ಸೇರಿಸಬಹುದು.
  • ಕ್ಯಾಪ್ಸುಲ್ ರೂಪದಲ್ಲಿ ಸಹ ದಾಲ್ಚಿನ್ನಿ ಸಿಗುತ್ತದೆ. ಅದನ್ನು ಸೇವಿಸಬಹುದು.​

Source : https://vijaykarnataka.com/lifestyle/health/try-cinnamon-tea-daily-to-control-your-blood-pressure/articleshow/104846153.cms?story=8

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *