Health: ಜಿಲ್ಲೆಯಾದ್ಯಂತ ಬಿಸಿಲಿನ ಪ್ರಕರತೆ ಮತ್ತು ತೀವ್ರತೆ ಕಂಡು ಬಂದ ಹಿನ್ನಲೆಯಲ್ಲಿ ಸಾರ್ವಜನಿಕರು, ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳ ಆರೋಗ್ಯದ ಕೆಲ ಅಗತ್ಯ ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ ಅಲಕನಂದಾ ಕೆ ಮಳಗಿ ಅವರು ಸಲಹೆ ನೀಡಿದ್ದಾರೆ.
ಕೊಪ್ಪಳ: ಜಿಲ್ಲೆಯಾದ್ಯಂತ ಬಿಸಿಲಿನ ಪ್ರಕರತೆ ಮತ್ತು ತೀವ್ರತೆ ಕಂಡು ಬಂದ ಹಿನ್ನಲೆಯಲ್ಲಿ ಸಾರ್ವಜನಿಕರು, ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳ ಆರೋಗ್ಯದ ಕೆಲ ಅಗತ್ಯ ಮುಂಜಾಗ್ರತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ ಅಲಕನಂದಾ ಕೆ ಮಳಗಿ ಅವರು ಸಲಹೆ ನೀಡಿದ್ದಾರೆ.
# ಈ ಬೇಸಿಗೆ ಸಮಯದಲ್ಲಿ ಆರೋಗ್ಯದ ಬಗ್ಗೆ ಮುಂಜಾಗ್ರತೆಗಾಗಿ ಸಾರ್ವಜನಿಕರು ಮನೆಯಿಂದ ಹೊರಗಡೆ ಹೋಗುವಾಗ ಜೊತೆಯಲ್ಲಿ ತಪ್ಪದೇ ಶುದ್ಧ ಕುಡಿಯುವ ನೀರನ್ನು ಹಾಗೂ ಛತ್ರಿ ತೆಗೆದುಕೊಂಡು ಹೋಗಬೇಕು.
# ಬಿಸಿಲಿನಲ್ಲಿ ಜಮೀನ ಕೆಲಸ, ರಸ್ತೆ ಕಾಮಗಾರಿ ಮುಂತಾದ ಹೊರಗಡೆ ಕಾರ್ಯನಿರ್ವಹಿಸುವವರು ಆದಷ್ಟು ಬೆಳಗ್ಗೆ 11 ಗಂಟೆಯ ಒಳಗೆ ಮತ್ತು ಸಂಜೆ 4 ಗಂಟೆ ನಂತರ ಕೈಗೊಳ್ಳುವುದು ಉತ್ತಮ.
# ಸಡಿಲವಾದ ತೆಳು ಬಣ್ಣದ ಹತ್ತಿ ಬಟ್ಟೆಯನ್ನು ಧರಿಸಬೇಕು. ಕೈಗೆ ಸಿಗುವಂತೆ ಶುದ್ಧ ಕುಡಿಯುವ ನೀರನ್ನು ಇಟ್ಟಕೊಳ್ಳಬೇಕು.
# ಆಗಾಗ್ಗೆ ನಿಧಾನವಾಗಿ ಧಾರಾಳವಾಗಿ ಉಪ್ಪು, ಸಕ್ಕರೆ ಮಿಶ್ರಿತ ನೀರನ್ನು ಕುಡಿಯಿರಿ ಮತ್ತು ಹಣ್ಣಿನ ರಸ ಅಥವಾ ಪಾನಕಗಳನ್ನು ಕುಡಿಯಿರಿ.
# ಹತ್ತಿಯ ನುಣುಪಾದ ಬಟ್ಟೆ ಅಥವಾ ಟಿಸ್ಸು, ಕರ ವಸ್ತçದಿಂದ ಬೆವರನ್ನು ಒರೆಸಿರಿ.
# ನೀರು, ಮಜ್ಜಿಗೆ ಅಥವಾ ಎಳೆನೀರು ಕುಡಿಯಬಹುದು.
# ಬೆಚ್ಚಗಿನ, ಮಸಾಲೆ ರಹಿತ ಶುದ್ಧ ಸಾತ್ವಿಕ ಆಹಾರ ಸೇವಿಸಿರಿ.
# ಗಾಳಿಯಾಡುವಂತಿರುವ ಪಾದರಕ್ಷೆಗಳನ್ನು ಧರಿಸಿರಿ
ಬೇಸಿಲಿನಲ್ಲಿ ಯಾವುದೇ ವ್ಯಕ್ತಿ ತೊದಲು ಮಾತು ಅಥವಾ ಅರ್ಥ ರಹಿತವಾಗಿ ಬಡಬಡಿಸಿದಲ್ಲಿ ಕೂಡಲೇ ಅವರನ್ನು ನೆರಳಿನ ಸ್ಥಳಕ್ಕೆ ಸ್ಥಳಾಂತರಿಸಿ, ಕೆಳಗೆ ಮಲಗಿಸಿ ಕಾಲುಗಳನ್ನು ಮೇಲಕ್ಕೆ ಎತ್ತಿ ವಿಶ್ರಾಂತಿ ಪಡೆಯುವಂತೆ ಮಾಡಬೇಕು.
ಚರ್ಮ ಕೆಂಪಾದರೆ ಬೆವರು ಕಡಿಮೆ ಆದರೆ, ದೇಹದ ಉಷ್ಣತೆ ಜಾಸ್ತಿಯಾದರೆ ದೀರ್ಘವಾದ ತೀವ್ರ ಉಸಿರಾಟ ಇದ್ದಲ್ಲಿ ತುರ್ತಾಗಿ ಸಮೀಪ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು.
ಇವುಗಳಿಂದ ದೂರವಿರಿ:
# ಅತಿ ಬಿಗಿಯಾದ ಸಿಂಥೆಟಿಕ್ ಬಟ್ಟೆಗಳನ್ನು ಧರಿಸಬಾರದು.
# ಕುಷನ್‌ಯುಕ್ತ ಖುರ್ಚಿಯಲ್ಲಿ ಹೆಚ್ಚು ಕುಡಬೇಡಿರಿ.
# ಸೋಡಾ ಇತ್ಯಾದಿ ಕಾರ್ಬೊನೆಟಡ್ ತಂಪು ಪಾನಿಯಗಳನ್ನು ಕುಡಿಯಬೇಡಿ.
# ಬೆವರನ್ನು ಒರೆಸಲು ಒರಟಾದ ಒಟ್ಟೆಯನ್ನು ಉಪಯೋಗಿಸಬೇಡಿ.
# ಕಾಫೀ ಅಥವಾ ಟೀ ಸಕ್ಕರೆ ಅಂಶವುಳ್ಳ ಪಾನಿಯಗಳನ್ನು ಅತಿಯಾಗಿ ಸೇವಿಸಬೇಡಿ.
# ಉಷ್ಣತೆಯಿಂದ ಸುಸ್ತಾದ ವ್ಯಕ್ತಿಯನ್ನು ತುಂಬಾ ತಣ್ಣಗಿನ ಅಥವಾ ಶೀಥಲಿಕರಿಸಿದ ನೀರಿನಿಂದ ಒರೆಸಬೇಡಿ.
# ಕಲುಷಿತ ನೀರು ಸೇವನೆ ಮಾಡಬಾರದು
ವ್ಯಕ್ತಿಯು ತೊದಲು ತೊದಲಾಗಿ ವಿಚಿತ್ರವಾಗಿ ಮಾತನಾಡಿದರೆ ಆತಂಕ ಪಡಬೇಡಿ ಹಾಗೂ ಶಾಂತಿ ಸಮಾಧಾನದಿಂದ ಶೀಘ್ರವಾಗಿ 108 ಗೆ ಕರೆ ಮಾಡಿ, ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು. ಆರೋಗ್ಯದ ಯಾವುದೇ ಸಮಸ್ಯೆವಿದ್ದರೆ ತಮ್ಮ ಸಮೀಪದ ಆಸ್ಪತ್ರೆಯ ವೈದ್ಯರನ್ನು ಮತ್ತು ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆರನ್ನು ಸಂಪರ್ಕಿಸಬೇಕು.