ಚಿಕನ್‌ಗೆ ಖಾರ ಕಡಿಮೆ ಹಾಕಿದಳೆಂದು ಪತ್ನಿಯನ್ನು ಮಹಡಿಯಿಂದ ತಳ್ಳಿದ ಪತಿ:

ಇತ್ತೀಚಿಗೆ ಕ್ಷುಲ್ಲಕ ಕಾರಣಗಳಿಗೆ ಪತಿ ಪತ್ನಿಯ ನಡುವೆ ಜಗಳ ಮನಸ್ತಾಪಗಳು ಹೆಚ್ಚಾಗಿವೆ. ಹೀಗೊಂದು ವೈರಲ್ ಆದ ವಿಡಿಯೋದಲ್ಲಿ ಪತಿ ಪತ್ನಿಯನ್ನು ಮಹಡಿಯಿಂದ ಕೆಳಕೆ ತಳ್ಳಿದ್ದಾನೆ. ಈ ದೃಶ್ಯ ನಿಜಕ್ಕೂ ಬೆಚ್ಚಿಬೀಳಿಸುವಂತಿದೆ.

ಪಾಪಿ ಪತಿಯೊಬ್ಬ ಚಿಕನ್‌ಗೆ ಕಡಿಮೆ ಖಾರ ಬಳಸಿರುವುದಾಗಿ ಹೇಳಿ ಪತ್ನಿಯನ್ನು ಮಹಡಿಯಲ್ಲಿನ ಕಿಟಕಿಯಿಂದ ಕೆಳಗೆ ತಳ್ಳಿದ್ದಾನೆ.

ಈ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಡ್ಗಿಚ್ಚಿನಂತೆ ವೈರಲ್ ಆಗಿದೆ. ಈ ಘಟನೆ ಪಾಕಿಸ್ತಾನದ ಲಾಹೋರ್‌ದಲ್ಲಿ ನಡೆದಿದೆ.

ಪತಿ ಪತ್ನಿಯ ನಡುವೆ ನಡೆದ ಜಗಳ ಮನೆಯ ಹೊರಗಿನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಜಗಳ ತೀವ್ರಗೊಳ್ಳುತ್ತಿದ್ದಂತೆ ಪತಿ ಪತ್ನಿಯನ್ನು ಕಿಟಕಿಯಿಂದ ಹೊರಗೆ ತಳ್ಳಿದ್ದಾನೆ. ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಆಕೆ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾಳೆ ಎನ್ನಲಾಗಿದೆ.

ಇದೇ ವೇಳೆ ಪಕ್ಕದ ಮನೆಯ ಬಾಲಕಿ ಮನೆ ಬಾಗಿಲು ತೆಗೆಯುತ್ತಾಳೆ. ತಕ್ಷಣ ಮಹಡಿ ಮೇಲಿಂದ ಜಗಳ ತೀವ್ರಗೊಳ್ಳುವುದು ಕೇಳಿ ಭಯದಿಂದ ಬಾಲಕಿ ಮತ್ತೆ ಬಾಗಿಲನ್ನು ಹಾಕಿಕೊಳ್ಳುತ್ತಾಳೆ. “ಕೋಳಿ ಮಾಂಸದ ಆಹಾರ ತಯಾರಿಸುವಾಗ ಖಾರ ಹಾಕಿಲ್ಲ ಎನ್ನುವ ಕಾರಣಕ್ಕೆ ಕೋಪಗೊಂಡ ಆಕೆಯ ಪತಿ ಮತ್ತು ಅತ್ತೆ ಬಲವಂತವಾಗಿ ಆಕೆಯನ್ನು ಕಿಟಕಿಯಿಂದ ಹೊರಗೆ ಎಸೆದಿದ್ದಾರೆ” ಎಂದು ವೀಡಿಯೊ ಹೇಳುತ್ತದೆ.

ಮಹಿಳೆ ಕಾಲಿಗೆ ಪಟ್ಟು:

ಕಾಲಿಗೆ ಗಂಭೀರವಾದ ಗಾಯಗಳಿಂದ ಬಳಲುತ್ತಿದ್ದ ಮಹಿಳೆಗೆ ಹಲವಾರು ಜನರು ಸಹಾಯ ಮಾಡುತ್ತಾರೆ. ಆಕೆಯನ್ನು ಎತ್ತಿಕೊಂಡು ಆಸ್ಪತ್ರೆಗೆ ಸಾಗಿಸುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ನಾನಾ ಊಹಾಪೋಹಗಳು ಹರಿದಾಡುತ್ತಿವೆ.

ಮಾರ್ಚ್ 9 ರಂದು ಪಾಕಿಸ್ತಾನಿ ವೆಬ್‌ಸೈಟ್ ಎಆರ್‌ವೈ ನ್ಯೂಸ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ ಮಹಿಳೆಯ ಅತ್ತೆ ಹಾಗೂ ಪತಿ ಕಟ್ಟಡದಿಂದ ಆಕೆಯನ್ನು ಹೊರಗೆ ತಳ್ಳಿದ್ದಾರೆ ಎಂದು ಹೇಳಲಾಗಿದೆ. ಈ ಘಟನೆಯ ಬಳಿಕ ಪಂಜಾಬ್ (ಪಾಕಿಸ್ತಾನ) ಮುಖ್ಯಮಂತ್ರಿ ಮರ್ಯಮ್ ನವಾಜ್ ಷರೀಫ್ ಕೂಡ ಸಂತ್ರಸ್ತೆಯ ಪತಿಯ ಚಿತ್ರಗಳೊಂದಿಗೆ ಸುದ್ದಿಯನ್ನು ಪೋಸ್ಟ್ ಮಾಡಿದರು. ಉತ್ತಮ ಆಹಾರ ನೀಡದ ಕಾರಣ ಮಹಿಳೆಯನ್ನು ಹೊರಹಾಕಲಾಗಿದೆ. ಇದಾದ ಬಳಿಕ ಪತಿ ಹಾಗೂ ಅತ್ತೆಯನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.

ಮಸಾಲೆಯುಕ್ತ ಕೋಳಿ ಮಾಂಸ ತಯಾರಿಸದೇ ಇದ್ದದ್ದಕ್ಕಾಗಿ ಮಹಿಳೆಯನ್ನು ತಳ್ಳಲಾಯಿಯ್ತಾ?

ಪಾಕಿಸ್ತಾನದ ಮಾಧ್ಯಮ ವರದಿಗಳ ಪ್ರಕಾರ, ಈ ದುರಂತ ಘಟನೆಯು ಲಾಹೋರ್‌ನ ನೊನಾರಿಯನ್ ಚೌಕ್‌ನಲ್ಲಿರುವ ಶಾಲಿಮಾರ್ ರಸ್ತೆಯ ಬಳಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿರುವ ಮಹಿಳೆಯನ್ನು ಮರ್ಯಮ್ ಎಂದು ಗುರುತಿಸಲಾಗಿದೆ. ಎಫ್‌ಐಆರ್ ದಾಖಲಾಗಿದ್ದು, ಆಕೆಯ ಪತಿ ಶೆಹಜಾದ್, ಮಾವ ರೋಮನ್ ಮತ್ತು ಅತ್ತೆ ಶಾಜಿಯಾ ಅವರನ್ನು ಪ್ರಕರಣದಲ್ಲಿ ಹೆಸರಿಸಲಾಗಿದೆ.

ಆದರೆ ಈ ಭೀಕರ ಘಟನೆಗೆ ಕಾರಣ ಚಿಕನ್ ಅಡುಗೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿಲ್ಲ. ಆದರೆ ಸಂತ್ರಸ್ತ ಮಹಿಳೆಯನ್ನು ವಿಚಾರಣೆಗೊಳಪಡಿಸಿದ ಸ್ಥಳೀಯ ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಪಾಕಿಸ್ತಾನದ ಮಾಧ್ಯಮಗಳು, ಮಹಿಳೆ ಕಟ್ಟಡದಿಂದ ಹಾರಿ ಸ್ವತ: ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎಂದು ಬರೆದಿದ್ದಾರೆ. ಆದಾಗ್ಯೂ, ಘಟನೆಗೆ ಸಂಬಂಧಿಸಿದಂತೆ ವಿವಿಧ ಕೋನಗಳಿಂದ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

Source: https://m.dailyhunt.in/news/india/kannada/oneindia+kannada-epaper-thatskannada/chikange+khaara+kadime+haakidalendu+patniyannu+mahadiyindha+tallidha+pati+vidiyo+vairal-newsid-n596448024?sm=Y

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *