
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ಚಿತ್ರದುರ್ಗ ಜೂ. 19 ರೈತರಿಗೆ ವಿತರಿಸಿರುವ ಕಳಪೆ ಅವಧಿ ಮೀರಿದ ಗೊಬ್ಬರ ಸರಬರಾಜಿನಲ್ಲಿ ಭ್ರಷ್ಟಾಧಿಕಾರಿಗಳು ಶಾಮೀಲಾಗಿದ್ದು ಸಂಪೂರ್ಣ ತನಿಖೆ ಮೂಲಕ ಜೆ.ಡಿ.ಯನ್ನು ಅವನತ್ತುಗೊಳಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧಿಕಾರಿಗಳ ಮೂಲಕ ಕೃಷಿ ಸಚಿವರನ್ನು ಒತ್ತಾಯಿಸಿದೆ.
ಚಿತ್ರದುರ್ಗ ನಗರದ ಕೃಷಿ ಇಲಾಖೆಯ ಮುಂಭಾಗದಲ್ಲಿ ಪ್ರತಿಭಟನೆಯನ್ನು ನಡೆಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹೆಸರು ಸೇನೆ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಿದ್ದಾರೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 6 ವರ್ಷದ ಹಳೇ ಕಳಪೆ ರಸ ಗೊಬ್ಬರವನ್ನು ಸಹಕಾರ ಸಂಘಗಳ ಸೊಸೈಟಿ ಮೂಲಕ ರೈತರಿಗೆ ವಿತರಿಸಿ ರೈತರ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ ಎಂದು ರೈತರು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ಚಿತ್ರದುರ್ಗ ತಾಲ್ಲೂಕು, ಸೇರಿದಂತೆ 6 ವರ್ಷದ ಹಳೇ ಕಳಪೆ 20.20.013 ರಸ ಗೊಬ್ಬರವನ್ನು ಸಹಕಾರ ಸಂಘಗಳ ಸೊಸೈಟಿ ಮೂಲಕ ರೈತರಿಗೆ ವಿತರಿಸಿದ್ದು ರೈತರು ಬೆಳೆಗೆ ಗೊಬ್ಬರ ಹಾಕಿದ ಮೇಲೆ ಚೀಲದ ಮೇಲೆ ಇರುವ ದಿನಾಂಕವನ್ನು ರೈತರು ನೋಡಿ ಚಿತ್ರದುರ್ಗ ಜಂಟಿ ಕೃಷಿ ನಿರ್ದೇಶಕರನ್ನು ರೈತರು ವಿಚಾರಸಲು ಹೋದಾಗ ರೈತರಿಗೆ ಅವಾಚ್ಯ ಶಬ್ದಗಳಿಂದ ಅವಮಾನ ಮಾಡಿದ್ದು ಈ ಬಗ್ಗೆ ಜಿಲ್ಲಾಧಿಕಾರಿಯನ್ನು ಗಮನಕ್ಕೂ ತಂದಿದ್ದರು ಯಾವುದೇ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ತೆಗೆದು ಕೊಂಡಿಲ್ಲ ಹಾಗೂ ಅವಧಿ ಮೀರಿದ ಗೊಬ್ಬರ ಹಾಕಿ ರೈತರಿಗೆ ಬೆಳೆನಷ್ಟವಾಗುತ್ತಿದ್ದರು ಸ್ಥಳ ಪರೀಶೀಲನೆ ಮಾಡಿ ಅಧಿಕಾರಿಗಳು ಬೇಟಿ ನೀಡಿಲ್ಲ. ಸೊಸೈಟಿಯಲ್ಲಿ ದಾಸ್ಥಾನು ಇರುವ ಗೊಬ್ಬರ ಮಾತ್ರ ವಾಪಾಸ್ಸು ಪಡೆದಿದ್ದಾರೆ ಎಂದು ದೂರಿದ್ದಾರೆ.
ಭರಮಸಾಗರ ಹೋಬಳಿ, ಚಿಕ್ಕಬೆನ್ನೂರು, ಕೋಗುಂಡೆ, ಕೊಡಿಹಳ್ಳಿ, ಬಹದ್ದೂರುಘಟ್ಟ, ಬಿತ್ತನೆ ಮಾಡಿದ ಮೇಕ್ಕೆಜೋಳ ಪೈನ್ ಇಯರು 34-07 ಹಾಗೂ ಅಡ್‍ವಂಟ ಕಂಪನಿಯ ಬೀಜ ಹುಟ್ಟಿರುವುದಿಲ್ಲ. ಆದರಿಂದ ತಕ್ಷಣ ಬೀಜ, ಗೊಬ್ಬರ ಮತ್ತು ಪರಿಹಾರ ನೀಡಬೇಕು. ಮತ್ತು ಕಳಪೆ ಬೀಜ ಮಾರಾಟ ಮಾಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳಬೇಕು. ಡಿ..ಎ.ಪಿ.ಗೊಬ್ಬರ ಕೇಳಿದರೆ ರೈತನಿಗೆ ಬೇಕಿಲ್ಲದ ಬೀಜ ತೆಗೆದುಕೊಂಡರೆ ಮಾತ್ರ ಅಂಗಡಿಯವರು ಡಿ.ಎ.ಪಿ ಗೊಬ್ಬರ ಕೊಡುತ್ತೇವೆ ಎಂದು ಹೇಳುತ್ತಾರೆ. ಇದರ ವಿರುದ್ಧ ಇಲಾಖೆಯವರು ಕ್ರಮವಹಿಸಿರುವುದಿಲ್ಲ ಅಂಗಡಿ ಮುಂದೆ ದಾಸ್ತಾನು ದರ ಸೌಲಭ್ಯವಿರುವ ಗೊಬ್ಬರದ ಹೆಸರನ್ನು ನಪಫಲಕದಲ್ಲಿ ನಮೂದಿಸಿ. ಅಂಗಡಿ ಮುಂದೆ ಸಾರ್ವನಿಕವಾಗಿ ಫಲಕ ಅಳವಡಿಸಬೇಕೆಂದು ಕೆಳಿದ್ದರೂ ಕಾರ್ಯ ರೂಪಕ್ಕೆ ಬಂದಿಲ್ಲ ಎಂದು ಆರೋಪಿಸಿದರು.
ಕೃಷಿ ಇಲಾಖೆ ಅಧಿಕಾರಿಗಳ ನಿರ್ಲಕ್ಷದಿಂದ ಬೇಳೆ ನಷ್ಟ ಪರಿಹಾರ, ಬೆಳೆ ವಿಮೆ ರೈತರಿಗೆ ಬಂದಿಲ್ಲ ಅವೈಜ್ಞಾನಿಕ ಸಮೀಕ್ಷೆಯಿಂದ ರೈತರಿಗೆ ಬೆಳೆ ನಷ್ಟಕ್ಕೆ ವಿಮಾ ಹಣ ದೊರೆತಿಲ್ಲ. ಕಾನೂನುಗಳೆಲ್ಲಾ ಬೆಳೆ ವಿಮೆ ಕಂಪನಿಗಳ ಪರವಾಗಿದ್ದು ಸರ್ಕಾರಗಳು ಮತ್ತು ಅಧಿಕಾರಿಗಳು ಕಂಪನಿಯೊಂದಿಗೆ ಶಾಮೀಲಾಗಿ ಕಂಪನಿಗೆ ಸಾವಿರಾರು ಕೋಟಿ ಲಾಭ ಮಾಡಿಕೊಡುತ್ತಿದ್ದಾರೆ. ರೈತರು ವಿಮೆ ಹಣ ಪ್ರತಿ ವರ್ಷ ಕಟ್ಟಿ ಮೋಸ ಹೋಗುತ್ತಿದ್ದಾರೆ. ಕೃಷಿ ಇಲಾಖೆ ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು 5-6 ಬಾರಿ ಸಭೆ ಕರೆದು ಸಭೆಗೆ ಅಧಿಕಾರಿಗಳು ಗೈರಾಗಿ ಸಭೆ ನಡೆಸದೇ ರೈತರನ್ನು ಕರೆಸಿ ಅವಮಾನ ಮಾಡಿದ್ದಾರೆ. ಕೃಷಿ ಇಲಾಖೆ ಅಧಿಕಾರಿಗಳಿಗೆ ರೈತರ ಬಗ್ಗೆ ಕಾಳಜಿಯಿಲ್ಲ ಬರೀ ಪತ್ರಿಕಾ ಹೇಳಿಕೆ, ಅಧಿಕಾರಿಗಳ ಸಭೆ ಮಾಡಿ ಸರ್ಕಾರಕ್ಕೆ ವರದಿ ನೀಡುತ್ತಾ ಸುಳ್ಳು ಹೇಳಿ ರೈತರ ಹೆಸರಿನಲ್ಲಿ ನೂರಾರು ಕೋಟಿ ಅನುದಾನ ನುಂಗುತ್ತಿದ್ದಾರೆ ಎಂದಿದ್ದಾರೆ.
ಕೃಷಿ ಇಲಾಖೆ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರದೇ ಕಛೇರಿಗಳಿಗೆ 100-200 ಕಿ.ಮೀ. ದೂರದಿಂದ ಬರುತ್ತಾರೆ. ಕಛೇರಿಯಲ್ಲಿ ಅಧಿಕಾರಿಗಳನ್ನು ಕೇಳಿದರೆ ಮಿಟಿಂಗ್ ಹೋಗಿದ್ದಾರೆಂದು ಸಿದ್ದ ಉತ್ತರ ಕಛೇರಿಯಲ್ಲಿ ನೀಡುತ್ತಾರೆ. ಶೇಂಗಾ ಬೀಜದಲ್ಲಿಯೂ ಕಳಪೆ ಬೀಜ ಕಂಡುಬಂದಿದ್ದು ತಕ್ಷಣ ವಾಪಾಸ್ಸು ಪಡೆದು ಉತ್ತಮ ಗುಣಪಟ್ಟದ ಶೇಂಗಾ ಬೀಜವನ್ನು ರೈತರಿಗೆ ವಿತರಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜನ್ ವಹಿಸಿದ್ದರು. ಈ ಪ್ರತಿಭಟನೆಯಲ್ಲಿ ಚಿಕ್ಕಹಳ್ಳಿ ತಿಪ್ಪೇಸ್ವಾಮಿ, ರವಿಕೊಗುಂಡೆ, ಸೂರಪ್ಪ ನಾಯಕ, ಮಾಲಮ್ಮ, ಉಮ್ಮಕ್ಕ, ಸರೋಜಮ್ಮ, ಜಯ್ಯಮ್ಮ, ಪೆದ್ದಮ್ಮ, ಅಂಜಿನಮ್ಮ, ಕುಶಲಮ್ಮ, ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಚಂದ್ರೇಶೇಖರ್ ನಾಯ್ಕ್, ಮಲಸಮುದ್ರ ಗಂಗಾಧರ, ಪ್ರಶಾಂತ ರೆಡ್ಡಿ, ತಿಮ್ಮಯ್ಯ, ಚಂದ್ರಣ್ಣ, ಕೋಡಿಹಳ್ಳಿ ಹನುಮಂತಪ್ಪ, ಕೆಂಚವೀರಮ್ಮ ಈಶ್ವರಮ್ಮ, ರವಿಕುಮಾರ್, ಹನುಮಂತಪ್ಪ, ಮಂಜುನಾಥ್, ಗಂಗಾಧರ್ ಆಡನೂರು ಶಿವಕುಮಾರ್ ವಿನಾಯಕ ಸೇರಿದಂತೆ ಇತರರು ಭಾಗವಹಿಸಿದ್ದರು.