ಸುರೇಶ್ ಪಟ್ಟಣ್ ಸುದ್ದಿ ಮತ್ತು ಪೋಟೋ.

ಚಿತ್ರದುರ್ಗ ಏ. 30 ಚಿತ್ರದುರ್ಗ ನಗರದ ವೀರಶೈವ ಅರ್ಬನ್ ಕೋ-ಆಪರೇಟಿವ್ ಸೊಸೈಟಿಯವತಿಯಿಂದ 25ನೇ ವರ್ಷದ ಅಂಗವಾಗಿ ದವಳಗಿರಿ ಬಡಾವಣೆಯಲ್ಲಿ ನೂತನವಾಗಿ ವಿರಶೈವ ಸಮುದಾಯ ಭವನ ನಿರ್ಮಾಣಕ್ಕೆ ಮುಂದಾಗಿದ್ದು ಇದರ ಭೂಮಿ ಪೂಜೆಯನ್ನು ಇಂದು ನಡೆಸಲಾಯಿತು.
ಸೊಸೈಟಿಯ ಅಧ್ಯಕ್ಷರಾದ ಪಟೇಲ್ ಶಿವಕುಮಾರ್ ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು ಭೂಮಿ ಪೂಜೆಯಲ್ಲಿ ಭಾಗವಹಿಸಿದ್ದು ಅಭಿಮಾನಿಗಳು ಹಿತೈಷಿಗಳು, ಸ್ನೇಹಿತರು ಆಗಮಿಸಿ ಸಮುದಾಯ ಭವನ ನಿರ್ಮಾಣಕ್ಕೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸೊಸೈಟಿಯ ಅಧ್ಯಕ್ಷರಾದ ಪಟೇಲ್ ಶಿವಕುಮಾರ್ ಸೊಸೈಟಿಯ ಷೇರುದಾರರಿಗೆ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ನಗರಾಭೀವೃದ್ಧಿ ಪ್ರಾಧಿಕಾರದಿಂದ ದೂರೆತ್ತಿದ್ದು, ದಾವಣಗೆರೆ ಇಂಜಿನಿಯರ್ ಶಿವಕುಮಾರ್ ರವರು ನೀಲಿ ನಕಾಶೆಯನ್ನು ತಯಾರು ಮಾಡಿದ್ದಾರೆ. ಸುಮಾರು 60*180ಅಡಿ ಅಳತೆಯಲ್ಲಿ ಸುಮಾರು 2.50 ಕೋಟಿ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣವಾಗಲಿದ್ದು, ಇದರಲ್ಲಿ 300 ರಿಂದ 400 ಜನ ಕುಳಿತುಕೊಳ್ಳುವ ಹಾಲು ಅಡುಗೆ ಮನೆ, ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯ, 5 ಕೊಠಡಿಗಳು, ಊಟದ ಮನೆಯನ್ನು ಸೇರಿದಂತೆ ಇತರೆ ಸೌಲಭ್ಯಗಳನ್ನು ಹೊಂದಿದೆ. ಇದರಲ್ಲಿ ನಮ್ಮ ಸೊಸೈಟಿಯ ಸಮಾರಂಭಗಳನ್ನು ಸಹಾ ಮುಂದಿನ ದಿನದಲ್ಲಿ ಮಾಡಲಾಗುವುದು. ಈ ಭಾಗದಲ್ಲಿ ಈ ರೀತಿಯಾದ ಸಮುದಾಯ ಭವನ ಇರಲ್ಲಿಲ್ಲ ಇಲ್ಲಿಗೆ ಅಗತ್ಯವಾಗಿತ್ತು ಇದನ್ನು ಮನಗಂಡು ಸೊಸೈಟಿ ವತಿಯಿಂದ ನಿರ್ಮಾಣ ಮಾಡಲು ಆಡಳಿತ ಮಂಡಳಿ ಮುಂದಾಗಿದೆ ಮುಂದಿನ ಒಂದು ತಿಂಗಳೊಳಗಾಗಿ ಕಟ್ಟಡದ ಕಾಮಗಾರಿಯನ್ನು ಪ್ರಾರಂಭಮಾಡಲಾಗುವುದು ಅಲ್ಲದೆ ಮುಂದಿನ ಆರು ತಿಂಗಳೊಳಗಾಗಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು.
ವೀರಶೈವ ಅರ್ಬನ್ ಕೋ-ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷರಾದ ಜಿ.ಟಿ.ಸುರೇಶ್ ನಿರ್ದೇಶಕರುಗಳಾದ ಎಸ್.ಪರಮೇಶ್ವರಪ್ಪ, ಟಿ.ಮಹಾಂತೇಶ್, ಎಸ್.ವಿ.ನಾಗರಾಜಪ್ಪ, ಎಸ್.ಷಣ್ಮುಖಪ್ಪ, ಡಿ.ಎಸ್.ಮಲ್ಲಿಕಾರ್ಜನ್, ಜಿ.ಎಂ.ಕರಿಬಸವಯ್ಯ, ಸಿ.ಚಂದ್ರಪ್ಪ, ಶ್ರೀಮತಿ ಜಯಶ್ರೀ, ಆರ್, ಶೈಲಜಾ ಸೇರಿದಂತೆ ಸೊಸೈಟಿಯ ಸಿಬ್ಬಂದಿ ವರ್ಗ ಹಾಜರಿದ್ದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಕೆಡಿಪಿ ಸದಸ್ಯರಾದ ನಾಗರಾಜ್, ಜಂಗಮ ಸಮಾಜದ ಅಧ್ಯಕ್ಷರಾದ ಮಲಿಕಾರ್ಜನಯ ವೀರಶೈವ
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಕೆಡಿಪಿ ಸದಸ್ಯರಾದ ನಾಗರಾಜ್, ಜಂಗಮ ಸಮಾಜದ ಅಧ್ಯಕ್ಷರಾದ ಮಲ್ಲಿಕಾರ್ಜನಯ್ಯ, ವೀರಶೈವ ಸಮಾಜದ ಅಧ್ಯಕ್ಷರಾದ ತಿಪ್ಪೇಸ್ವಾಮಿ, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಮಹಡಿ ಶಿವಮೂರ್ತಿ, ನಿರ್ದೇಶಕರಾದ ಶ್ರೀಮತಿ ನಿರ್ಮಲ ಬಸವರಾಜು, ಮಹಿಳಾ ಘಟಕದ ಕಾರ್ಯದರ್ಶಿ ಉಮಾರಮೇಶ್, ವೀರಶೈವ ಸಮಾಜದ ಮುಖಂಡರಾದ ಕವಿತಾ ಶಿವಕುಮಾರ್, ಮಲ್ಲಿಕಾರ್ಜನ್, ಕೊಟ್ರೇಶ್, ನಗರಸಭಾ ಸದಸ್ಯರಾದ ಬಿ.ಸುರೇಶ್, ಶ್ರೀಮತಿ ರೀನಾ ವೀರಭದ್ರಪ್ಪ, ಜಯ್ಯಣ್ಣ, ಕೆ.ಎನ್.ವಿಶ್ವನಾಥಯ್ಯ, ಜಯಕುಮಾರ್, ಸರೋಜಮ್ಮ ನಾಗಣ್ಣ, ಕೆ.ವಿ.ಪ್ರಭಾಕರ್, ಶಶಿಕಲಾ ಪರಮೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.