ಬ್ರಿಟೀಷ್ ಇತಿಹಾಸದಲ್ಲಿ 950 ವರ್ಷದ ಹಿಂದಿನ ಅತಿದೊಡ್ಡ ನಿಧಿ ಪತ್ತೆ!

ಬ್ರಿಟಿಷ್ ಇತಿಹಾಸದಲ್ಲಿ ಸಿಕ್ಕ ಅತಿದೊಡ್ಡ ನಿಧಿಯಲ್ಲಿ 2,584 ಬೆಳ್ಳಿ ನಾಣ್ಯಗಳಿವೆ. ಅದೂ 950 ವರ್ಷ ಹಳೆಯ ಅಪರೂಪದ ನಾಣ್ಯಗಳು. ಇಂಗ್ಲೆಂಡ್‌ನ ಸೋಮರ್‌ಸೆಟ್‌ನ ಚ್ಯೂ ಕಣಿವೆಯಲ್ಲಿ ನಿಧಿ ಶೋಧಕರು ಮೆಟಲ್ ಡಿಟೆಕ್ಟರ್ ಹಿಡಿದು ನಡೆಯುವಾಗ ಈ ನಿಧಿಯನ್ನು ಪತ್ತೆ ಹಚ್ಚಿದ್ದಾರೆ.

ಈ ನಿಧಿಯನ್ನು ಸೌತ್ ವೆಸ್ಟ್ ಹೆರಿಟೇಜ್ ನಾಲ್ವತ್ತಾರು ಕೋಟಿ ಇಪ್ಪತ್ನಾಲ್ಕು ಲಕ್ಷ ರೂಪಾಯಿಗೆ (46.24 ಕೋಟಿ ರೂ.)  ಖರೀದಿಸಿದೆ. ಇಂಗ್ಲೆಂಡ್‌ನ ನಾರ್ಮನ್ ಆಕ್ರಮಣ ಕಾಲದ ನಾಣ್ಯಗಳಿವು. ಹೇಸ್ಟಿಂಗ್ಸ್ ಯುದ್ಧದಲ್ಲಿ ಗೆದ್ದು ಇಂಗ್ಲೆಂಡ್‌ನಲ್ಲಿ ನಾರ್ಮನ್ ಆಳ್ವಿಕೆ ಸ್ಥಾಪಿಸಿದ ಇಂಗ್ಲೆಂಡ್‌ನ ಕೊನೆಯ ರಾಜ ಹರೋಲ್ಡ್ II ಮತ್ತು ವಿಲಿಯಂ Iರ ಚಿತ್ರಗಳನ್ನು ಹೊಂದಿರುವ ನಾಣ್ಯಗಳೂ ಇವೆ. ಇಂಗ್ಲಿಷ್ ಇತಿಹಾಸದ ಮಹತ್ವದ ಈ ನಾಣ್ಯಗಳು ಇದೇ ನವೆಂಬರ್‌ನಿಂದ ಯುಕೆಯಾದ್ಯಂತ ವಸ್ತುಸಂಗ್ರಹಾಲಯಗಳಲ್ಲಿ ಪ್ರದರ್ಶನಗೊಳ್ಳಲಿವೆ. 

ಈ ನಾಣ್ಯಗಳನ್ನು ಭೂಮಿಯಲ್ಲಿ ಕ್ರಿ.ಶ. 1022 ಮತ್ತು 1068ರ ನಡುವೆ ಹೂಳಲಾಗಿದೆಯೆಂದು ಅಂದಾಜಿಸಲಾಗಿದೆ. ಈ ನಾಣ್ಯಗಳು ವಿಲಿಯಂ ದಿ ಕಾಂಕರರ್ ನೇತೃತ್ವದ ಆಕ್ರಮಣದ ನಂತರ ಸ್ಯಾಕ್ಸನ್ ಆಳ್ವಿಕೆಯಿಂದ ನಾರ್ಮನ್ ಆಳ್ವಿಕೆಗೆ ಬ್ರಿಟನ್‌ನ ಪರಿವರ್ತನೆಯ ಆರಂಭಿಕ ಪುರಾವೆಗಳಾಗಿವೆ. ಈ ಸಮಯದಲ್ಲಿ ನಡೆದ ದಂಗೆಯ ಸಮಯದಲ್ಲಿ ಸುರಕ್ಷತೆಗಾಗಿ ಈ ನಾಣ್ಯಗಳನ್ನು ಹೂಳಿರಬಹುದೆಂದು ಊಹಿಸಲಾಗಿದೆ. ಯುಕೆ 7 ಹವ್ಯಾಸಿ ನಿಧಿ ಶೋಧಕರು ಈ ಅಮೂಲ್ಯ ನಿಧಿಯನ್ನು ಪತ್ತೆ ಹಚ್ಚಿದ್ದಾರೆ. ಯುರೋಪ್ ಮತ್ತು ಇಂಗ್ಲೆಂಡ್‌ನಲ್ಲಿ ಆಧುನಿಕ ಲೋಹ ಪತ್ತೆ ತಂತ್ರಜ್ಞಾನವನ್ನು ಬಳಸುವ ಹವ್ಯಾಸಿ ನಿಧಿ ಬೇಟೆಗಾರರ ಸಂಖ್ಯೆ ಹೆಚ್ಚುತ್ತಿದೆ.

Source : https://kannada.asianetnews.com/world-news/950-year-old-british-coins-found-in-britain-and-largest-treasure-unearthed-sat-smw3ae

Leave a Reply

Your email address will not be published. Required fields are marked *