ರಾತ್ರಿ ಮಲಗುವ ಮುನ್ನ ಮೊಬೈಲ್ ಡೇಟಾ ಆಫ್ ಮಾಡಬೇಕಾದ ಪ್ರಮುಖ ಕಾರಣಗಳು.

(ಆ. 30): ರಾತ್ರಿ ಮಲಗುವ ಮುನ್ನ ಅಂದರೆ ನಿದ್ದೆಗೆ ಜಾರುವ ಮುನ್ನ ಮೊಬೈಲ್ ಡೇಟಾವನ್ನು (Mobile Data) ಏಕೆ ಆಫ್ ಮಾಡಬೇಕು?. ಈಗ ನೀವು ವೈಫೈ ಅಥವಾ ಅನಿಯಮಿತ ಡೇಟಾ ಪ್ಲಾನ್ ಇರುವಾಗ ಅದನ್ನು ಏಕೆ ಬಳಸಬಾರದು ಎಂದು ಯೋಚಿಸುತ್ತಿರಬಹುದು. ಆದರೆ ಇತ್ತೀಚೆಗೆ ಟ್ವಿಟರ್ ಎಂಜಿನಿಯರ್ ಒಬ್ಬರು ಟ್ವೀಟ್‌ನಲ್ಲಿ ನಮ್ಮ ಫೋನ್​ನಲ್ಲಿರುವ ಕೆಲ ಬ್ಯಾಕ್​ಗ್ರೌಂಡ್ ಆ್ಯಪ್​ಗಳಲ್ಲಿ ಮೈಕ್ರೊಫೋನ್ ಬಳಸಲಾಗುತ್ತಿದೆ ಎಂದು ಹೇಳಿರುವ ಪ್ರಕರಣ ಬೆಳಕಿಗೆ ಬಂದಿದೆ.

ಈ ಸಮಸ್ಯೆಗೆ ವಾಟ್ಸ್​ಆಯಪ್ ಆಂಡ್ರಾಯ್ಡ್ ಅನ್ನು ದೂಷಿಸಿದೆ, ಗೂಗಲ್ ಈ ದೋಷವನ್ನು ಒಪ್ಪಿಕೊಂಡಿದೆ ಕೂಡ.

ನೀವು ಫೋನ್‌ನ ನೆಟ್ ಅಥವಾ ವೈಫೈ ಅನ್ನು ಆನ್‌ನಲ್ಲಿ ಇರಿಸಿದರೆ, ಫೋನ್‌ನಲ್ಲಿರುವ ಎಲ್ಲಾ ಅಪ್ಲಿಕೇಶನ್‌ಗಳು ಸಕ್ರಿಯವಾಗಿರುತ್ತವೆ, ಇದು ನಿಮ್ಮ ಗೌಪ್ಯತೆಯನ್ನು ಅಪಾಯಕ್ಕೆ ಸಿಲುಕಿಸುತ್ತದೆ. ರಾತ್ರಿಯಲ್ಲಿ ಮೊಬೈಲ್ ಡೇಟಾ ಆನ್ ಆಗಿರುವಾಗ, ಅದು ನಿಮ್ಮ ಸಾಧನವನ್ನು ಮಾಲ್‌ವೇರ್, ವೈರಸ್‌ಗಳು ಮತ್ತು ಹ್ಯಾಕರ್‌ಗಳಿಗೆ ಗುರಿಯಾಗಿಸುತ್ತದೆ, ಅವರು ನಿಮ್ಮ ಫೋನ್ ಅನ್ನು ಸುಲಭವಾಗಿ ಹ್ಯಾಕ್ ಮಾಡಬಹುದು. ಏಕೆಂದರೆ ನಿಮ್ಮ ಫೋನ್ ಯಾವಾಗಲೂ ಇಂಟರ್ನೆಟ್‌ಗೆ ಸಂಪರ್ಕದಲ್ಲಿರುತ್ತದೆ ಮತ್ತು ನಿಮ್ಮ ಫೋನ್ ಅಥವಾ ಅಪ್ಲಿಕೇಶನ್‌ಗಳ ಮೂಲಕ ನಿಮ್ಮ ಇಂಟರ್ನೆಟ್‌ನ ಲಾಭವನ್ನು ಪಡೆಯಬಹುದು.

ಸ್ಥಳ ಅಥವಾ ವೈಯಕ್ತಿಕ ಮಾಹಿತಿ ಟ್ರ್ಯಾಕಿಂಗ್ ಸಮಸ್ಯೆ: ಮೊಬೈಲ್ ಡೇಟಾ ಯಾವಾಗಲೂ ಆನ್ ಆಗಿರುವಾಗ, ನಿಮ್ಮ ಸಾಧನವು ನಿರಂತರವಾಗಿ ಡೇಟಾವನ್ನು ಕಳುಹಿಸುತ್ತಿರುತ್ತದೆ ಮತ್ತು ಸ್ವೀಕರಿಸುತ್ತಿರುತ್ತದೆ, ಇದನ್ನು ನಿಮ್ಮ ಸ್ಥಳವನ್ನು ಟ್ರ್ಯಾಕ್ ಮಾಡಲು, ನಿಮ್ಮ ಆನ್‌ಲೈನ್ ಚಟುವಟಿಕೆಗಳನ್ನು ಟ್ರ್ಯಾಕ್ ಮಾಡಲು ಮತ್ತು ನಿಮ್ಮ ಬಗ್ಗೆ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಲು ಬಳಸಬಹುದು.

ರಾತ್ರಿ ವೇಳೆ ನಿಮ್ಮ ಫೋನ್ ನ ಡೇಟಾವನ್ನು ಆಫ್ ಮಾಡಿದರೆ, ಅದು ನಿಮ್ಮ ಗೌಪ್ಯತೆಯನ್ನು ನಿಯಂತ್ರಿಸುವುದಲ್ಲದೆ, ನಿಮಗೆ ಇನ್ನೂ ಅನೇಕ ಪ್ರಯೋಜನಗಳು ಸಿಗುತ್ತವೆ. ಇದರ ಮೊದಲ ಪ್ರಯೋಜನವೆಂದರೆ ನಿಮ್ಮ ಡೇಟಾ ಉಳಿತಾಯವಾಗುತ್ತದೆ, ಅಂದರೆ ಅನಗತ್ಯವಾಗಿ ಡೇಟಾವನ್ನು ಬಳಸುವುದಕ್ಕಿಂತ ಅದನ್ನು ಉಳಿಸುವುದು ಉತ್ತಮ.

ಸಾಮಾಜಿಕ ಮಾಧ್ಯಮ ಅಪ್ಲಿಕೇಶನ್‌ಗಳಿಂದ ಬರುವ ಅಧಿಸೂಚನೆಗಳು ನಿಮ್ಮನ್ನು ಆಗಾಗ್ಗೆ ತೊಂದರೆಗೊಳಿಸುವುದಿಲ್ಲ ಮತ್ತು ನೀವು ನೆಮ್ಮದಿಯಿಂದ ಮಲಗಲು ಸಾಧ್ಯವಾಗುವುದಿಲ್ಲ. ಮೊಬೈಲ್ ಡೇಟಾ ಯಾವಾಗಲೂ ಆನ್ ಆಗಿರುವುದರಿಂದ, ನೋಟಿಫಿಕೇಷನ್ಸ್, ಮೆಸೇಜ್ ಮತ್ತು ಸಾಮಾಜಿಕ ಮಾಧ್ಯಮ ನವೀಕರಣಗಳಿಂದ ನಿಮ್ಮ ನಿದ್ರೆಗೆ ತೊಂದರೆಯಾಗಬಹುದು.

ವಾಸ್ತವವಾಗಿ, ಇದು ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ, ಉದಾಹರಣೆಗೆ ನೀವು ಇಂಟರ್ನೆಟ್‌ನಿಂದಾಗಿ ಆಗಾಗ್ಗೆ ನೋಟಿಫಿಕೇಷನ್ಸ್ ಪರಿಶೀಲಿಸುತ್ತಿದ್ದರೆ, ನಿಮಗೆ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ, ಇದು ನಿಮ್ಮ ಆರೋಗ್ಯಕ್ಕೂ ಹಾನಿ ಮಾಡುತ್ತದೆ.

ಬ್ಯಾಟರಿ ಖಾಲಿಯಾಗುವಿಕೆ: ಮೊಬೈಲ್ ಡೇಟಾವನ್ನು ಯಾವಾಗಲೂ ಆನ್‌ನಲ್ಲಿ ಇಡುವುದರಿಂದ ನಿಮ್ಮ ಫೋನ್‌ನ ಬ್ಯಾಟರಿ ಬೇಗನೆ ಖಾಲಿಯಾಗಬಹುದು. ಮುಖ್ಯವಾಗಿ ನೀವು ನಿಯಮಿತವಾಗಿ ಇಂಟರ್ನೆಟ್ ಬಳಸುವ ಅಪ್ಲಿಕೇಶನ್‌ಗಳನ್ನು ಬ್ಯಾಕ್​ಗ್ರೌಂಡ್ ರನ್ನಿಂಗ್​ನಲ್ಲಿ ಇಟ್ಟಿದ್ದರೆ ಬ್ಯಾಟರಿ ಬೇಗನೆ ಖಾಲಿ ಆಗುತ್ತದೆ.

ಡೇಟಾ ಬಳಕೆ: ಮೊಬೈಲ್ ಡೇಟಾ ಯಾವಾಗಲೂ ಆನ್‌ನಲ್ಲಿರುವುದರಿಂದ ನಿಮ್ಮ ಡೇಟಾ ಪ್ಲಾನ್ ಅಂದುಕೊಂಡ ಸಮಯಕ್ಕಿಂತ ಬೇಗನೆ ವೇಗವಾಗಿ ಖಾಲಿಯಾಗಬಹುದು. ಅಲ್ಲದೆ, ಅನೇಕ ಅಪ್ಲಿಕೇಶನ್‌ಗಳು ಮೆಸೇಜ್ ಅಥವಾ ನೋಟಿಫಿಕೇಷನ್ ಮೂಲಕ ಡೇಟಾವನ್ನು ಬಳಸುತ್ತವೆ ಮತ್ತು ಅನೇಕ ಫೋನ್‌ಗಳು ಅಟೊಮೆಟಿಕ್ ಆಗಿ ಅಪ್ಲಿಕೇಶನ್‌ಗಳು ಮತ್ತು ಸಾಫ್ಟ್‌ವೇರ್‌ಗಳನ್ನು ಅಪ್ಡೇಟ್ ಮಾಡುತ್ತವೆ, ಹೀಗಾಗಿ ನಿಮ್ಮ ಫೋನ್‌ನ ಇಂಟರ್ನೆಟ್ ಬೇಗನೆ ಮುಗಿಯಬಹುದು.

Views: 78

Leave a Reply

Your email address will not be published. Required fields are marked *