ರೋಟರಿ ಕ್ಲಬ್ ಸಮಾಜಮುಖಿಯಾದ ಕೆಲಸವನ್ನು ಮಾಡುತ್ತಿದೆ: ಜಿಲ್ಲಾ ಗವರ್ನರ್ ಡಾ. ಸಾಧು ಗೋಪಾಲ ಕೃಷ್ಣ.

ಚಿತ್ರದುರ್ಗ ಏ. 30 ರೋಟರಿ ಕ್ಲಬ್ ಸಮಾಜಮುಖಿಯಾದ ಕೆಲಸವನ್ನು ಮಾಡುತ್ತಿದೆ ಜನರಿಗೆ ಅತಿ ಅಗತ್ಯವಾಗಿ ಬೇಕಾದ ಆರೋಗ್ಯದ ಬಗ್ಗೆ ಕಾಳಜಿಯನ್ನುವಹಿಸಿ ಅದಕ್ಕೆ ಬೇಕಾದ ಸೌಲಭ್ಯ ಹಾಗೂ ಸಹಕಾರವನ್ನು ನೀಡುತ್ತಾ ಜನರ ಮನದಲ್ಲಿ ನಿಂತಿದೆ ಎಂದು ಜಿಲ್ಲಾ ಗವರ್ನರ್ ಡಾ. ಸಾಧು ಗೋಪಾಲ ಕೃಷ್ಣ ರೋಟರಿ ಕ್ಲಬ್‍ನ ಈ ಕಾರ್ಯವನ್ನು ಪ್ರಶಂಸಿದರು.
ಚಳ್ಳಕೆರೆ ರಸ್ತೆಯಲ್ಲಿನ ಕೃಷ್ಣಪ್ಪ ಲೇ ಔಟ್‍ನಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ ರೋಟರಿ ಕ್ಲಬ್ ಆಫ್ ಚಿತ್ರದುರ್ಗ ನಗರದಲ್ಲಿ ಹತ್ತು ಹಾಸಿಗೆಗಳ ಡಯಾಲಿಸಿಸ್ ಕೇಂದ್ರ, ಕೌಶಲ್ಯಾಭಿವೃದ್ಧಿ ಕೇಂದ್ರ ಪಿಸಿಯೋಥೆರಪಿ ಸೆಂಟರ್, ಲ್ಯಾಬೋರೇಟರಿ ಕೇಂದ್ರಗಳನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ರೋಟರಿ ಕ್ಲಬ್ ಪ್ರಾರಂಭದಿಂದಲೂ ಸಹಾ ಉತ್ತಮವಾದ ಕಾರ್ಯವನ್ನು ಮಾಡುತ್ತಾ ಬಂದಿದೆ ಜನರಿಗೆ ಆರೋಗ್ಯದ ಬಗ್ಗೆ ಅರಿವೂ ಮೂಡಿಸುವುದ್ದಲ್ಲದೆ ಇದಕ್ಕೆ ಬೇಕಾದ ಶಿಬಿರಗಳನ್ನು ಸಹಾ ನೀಡುವುದರೊಂದಿಗೆ ನೆರವಿನ ಹಸ್ತವನ್ನು ಚಾಚಿದೆ. ಚಿತ್ರದುರ್ಗದ ರೋಟರಿ ಕ್ಲಬ್ ರೋಟರಿ ಸೇವಾ ಭವನವನ್ನು ದಾನಿಗಳಿಂದ ನಿರ್ಮಾಣ ಮಾಡುವುದರ ಮೂಲಕ ಬಡ ರೋಗಿಗಳಿಗೆ ನೆರವಾಗಿದೆ ಇದರಿಂದ ಎಷ್ಟೋ ರೋಗಿಗಳಿಗೆ ಸಹಾಯವಾಗಲಿದೆ ಎಂದರು.
ರೋಟರಿ ಟ್ರಸ್ಟ್‍ನ ಕಾರ್ಯದರ್ಶಿ ಕೆ.ಮಧುಪ್ರಸಾದ್ ಮಾತನಾಡಿ, ರೋಟರಿ ಕ್ಲಬ್ ಚಿತ್ರದುರ್ಗದಲ್ಲಿ ಪ್ರಾರಂಭವಾಗಿ 60 ವರ್ಷ ತುಂಬಿದ ಈ ಶುಭ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲೆಯ ಜನತೆಗೆ ಒಂದು ವಿಶಿಷ್ಟ ಕೊಡುಗೆ ನೀಡುವ ಸದುದ್ದೇಶದಿಂದ ಕಿಡ್ನಿ ರೋಗಿಗಳಿಗೆ ಉತ್ತಮ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ರೋಟರಿ ಕ್ಲಬ್ ಆಫ್ ಚಿತ್ರದುರ್ಗವನ್ನು ನಿರ್ಮಾಣ ಮಾಡಲಾಗಿದೆ. ರೋಟರಿ ಕ್ಲಬ್ ಆಫ್ ಚಿತ್ರದುರ್ಗ ನಗರದಲ್ಲಿ ಹತ್ತು ಹಾಸಿಗೆಗಳ ಡಯಾಲಿಸಿಸ್ ಕೇಂದ್ರವನ್ನು ಸ್ಥಾಪಿಸಿದೆ ಮತ್ತು ಯಂತ್ರಗಳು, ಕಟ್ಟಡಗಳು, ಸೋಲಾರ್ ಪ್ಯಾನಲ್‍ಗಳ ಸಂಪೂರ್ಣ ವೆಚ್ಚವನ್ನು ನಗರದ ರೋಟರಿ ಕ್ಲಬ್ ಸದಸ್ಯರು ಭರಿಸಿದ್ದಾರೆ. ಚಿತ್ರದುರ್ಗ ಜಿಲ್ಲೆ ಮತ್ತು ಅಕ್ಕಪಕ್ಕದ ಪಟ್ಟಣಗಳ ಪಾಲಕರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ನಾವು ನಗರದಲ್ಲಿ ಹತ್ತು ಡಯಾಲಿಸಿಸ್ ಯಂತ್ರೋಪಕರಣಗಳನ್ನು ಸ್ಥಾಪಿಸಲಾಗಿದ್ದು, ಎಸ್.ಆರ್.ಬಿ.ಎಂ.ಎಸ್.ನ ಮಾಲೀಕರಾದ ಲಕ್ಷಿಕಾಂತರೆಡ್ಡಿ ಹಾಗೂ ಎಸ್. ವೀರೇಶ್ ದೇಣಿಗೆಯಿಂದ ಚಳ್ಳಕೆರೆ ರಸ್ತೆಯಲ್ಲಿನ ಕೃಷ್ಣಪ್ಪ ಲೇ ಔಟ್‍ನಲ್ಲಿ ಸ್ಥಳವನ್ನು ಪಡೆಯಲಾಗಿದೆ. ಕೌಶಲ್ಯ ಅಭಿವೃದ್ಧಿ ಕೇಂದ್ರಕ್ಕೆ ಶಿರಸಿಯ ಯುವಜಯ ಪೌಂಡೇಷನ್‍ನ ಸಹಯೋಗ ಪಡೆದಿದ್ದು ಇದರಲ್ಲಿ ಬಿ.ಎ.ಬಿಕಾಂ,ಬಿಎಸ್ಸಿ ಪಧವೀದರದಿಗೆ 2-3 ತಿಂಗಳ ತರಬೇತಿಯನ್ನು ಸಂವಹನ ಕಲೆ. ಟೀಮ್ ವರ್ಕ್ ಇಂಗ್ಲಿಷ್ ಸಂಭಾಷಣೆ ಹಾಗೂ ಇತರ ವಿಷಯಗಳಲ್ಲಿ ನೀಡಿ ಅವರಿಗೆ ಉದ್ಯೋಗ ಕೊಡಿಸುವ ಪ್ರಯತ್ನ ಮಾಡಲಾಗುವುದು. ಡಯಾಲಿಸಿಸ್ ಸೆಂಟರ್ ಕೌಶಲ್ಯಾಭಿವೃದ್ಧಿ ಕೇಂದ್ರ, ಪಿಸಿಯೋಥೆರಪಿ ಸೆಂಟರ್, ಲ್ಯಾಬೋರೇಟರಿ, ಕ್ಲಿನಿಕ್ ಹಾಗೂ ಫಾರ್ಮಸಿ ಸೌಲಭ್ಯವನ್ನು ಹೊಂದಿದೆ ಎಂದರು. 

ಈ ಸಂದರ್ಭದಲ್ಲಿ ಪರಿಷತ್ ಸದಸ್ಯರಾದ ಕೆ.ಎಸ್. ನವೀನ್, ಮರ್ಚೆಂಟ್ಸ್ ಬ್ಯಾಂಕ್ ಅಧ್ಯಕ್ಷರಾದ ಎಸ್.ಆರ್. ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಅರೋಗ್ಯ ಅಧಿಕಾರಿ ರೇಣುಪ್ರಸಾದ್, ರೋಟೇರಿಯನ್ ಪಿಡಿಜಿ. ರವಿ ವಡ್ಲಮಣಿ, ಡಿಇಜಿ ರವೀಂದ್ರ, ಪಿಡಿಜಿ ರಮೇಶ್ ವಂಗಲ, ರೋಟರಿ ಟ್ರಸ್ಟ್‍ನ ಅಧ್ಯಕ್ಷರಾದ ಪಿ.ಎಸ್ ಶಂಭುಲಿಂಗಪ್ಪ ರೋಟರಿ ಕ್ಲಬ್‍ನ ಅಧ್ಯಕ್ಷರಾದ ಜಿ.ಎನ್ ವೀರಣ್ಣ, ಎಸ್,ವೀರೇಶ್, ಕೆ.ಎಸ್.ಚಂದ್ರಮೋಹನ್, ಶ್ರೀಮತಿ ಜಯಶ್ರೀಷಾ, ತರುಣ್‍ಷಾ, ಮೂರ್ತಿ, ವೆಂಕಟೇಶ್, ವಿಶ್ವನಾಥ್, ಸೂರ್ಯನಾರಾಯಣ ಭಾಗವಹಿಸಿದ್ದರು. 

Leave a Reply

Your email address will not be published. Required fields are marked *