ಬೆರಳೆಣಿಕೆಯಷ್ಟೇ ದಿನಗಳು ಬಾಕಿ ! ಹೆಚ್ಚಳವಾಗುವುದು ಸರ್ಕಾರಿ ನೌಕರರ ವೇತನ

7th Pay Commission DA Hike:ಮುಂದಿನ ಡಿಎಯನ್ನು ಮೇ ಮತ್ತು ಜೂನ್ ಅಂಕಿಅಂಶಗಳ ಆಧಾರದ ಮೇಲೆ ಕ್ಯಾಬಿನೆಟ್ ಘೋಷಿಸುತ್ತದೆ. ಆದರೆ ಜುಲೈ 2023 ರಿಂದ  ತುಟ್ಟಿಭತ್ಯೆ ಶೇ.4ರಷ್ಟು ಹೆಚ್ಚಳವಾಗುವುದು ಖಚಿತವಾಗಿದೆ.  

7th Pay Commission DA Hike : ಜುಲೈ 1 ರಿಂದ ಕೇಂದ್ರ ನೌಕರ ಡಿಎ ಹೆಚ್ಚಳವಾಗಲಿದೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಸರ್ಕಾರ ಈ ಬಗ್ಗೆ ಘೋಷಣೆ ಮಾಡಲಿದೆ. ಏಪ್ರಿಲ್ ತಿಂಗಳವರೆಗಿನ AICPI ಸೂಚ್ಯಂಕದ ಡೇಟಾ ಹೊರ ಬಂದಿದೆ. ಮುಂದಿನ ಡಿಎಯನ್ನು ಮೇ ಮತ್ತು ಜೂನ್ ಅಂಕಿಅಂಶಗಳ ಆಧಾರದ ಮೇಲೆ ಕ್ಯಾಬಿನೆಟ್ ಘೋಷಿಸುತ್ತದೆ. ಆದರೆ ಜುಲೈ 2023 ರಿಂದ  ತುಟ್ಟಿಭತ್ಯೆ ಶೇ.4ರಷ್ಟು ಹೆಚ್ಚಳವಾಗುವುದು ಖಚಿತವಾಗಿದೆ.

 46 ಪ್ರತಿಶತ ದಾಟುತ್ತದೆ ಡಿಎ :
ತುಟ್ಟಿ ಭತ್ಯೆ ಹೆಚ್ಚಳವನ್ನು ಒಂದು ಸೂತ್ರದ ಆಧಾರದ ಮೇಲೆ ಮಾಡಲಾಗುತ್ತದೆ. ಈ ಸೂತ್ರದ ಲೆಕ್ಕಾಚಾರದ ಪ್ರಕಾರ  ಈ ಬಾರಿ  ಶೇ.4ರಷ್ಟು ಡಿಎ ಏರಿಕೆಯಾಗುವುದು ಬಹುತೇಕ ಸ್ಪಷ್ಟ. ತಜ್ಞರ ಪ್ರಕಾರ, ಬೆಲೆ ಸೂಚ್ಯಂಕ ಅನುಪಾತದ ಆಧಾರದಲ್ಲಿ ಡಿಎ 42 ಪ್ರತಿಶತದಿಂದ 46 ಪ್ರತಿಶತಕ್ಕೆ ಹೆಚ್ಚಾಗುತ್ತದೆ. ಇದೀಗ ಏಪ್ರಿಲ್ ಅಂಕಿ ಅಂಶಗಳು ಹೊರ ಬಿದ್ದಿದ್ದು, AICPI ಸೂಚ್ಯಂಕವು 134.2 ಅಂಕಗಳನ್ನು ತಲುಪಿದೆ.  ಮುಂದಿನ ಎರಡು ತಿಂಗಳಲ್ಲಿ ಸೂಚ್ಯಂಕ 46.40 ತಲುಪುವ ನಿರೀಕ್ಷೆಯಿದೆ. ಇದರರ್ಥ ಡಿಎಯಲ್ಲಿ 4% ಹೆಚ್ಚಳವನ್ನು ನಿಗದಿಪಡಿಸಲಾಗಿದೆ. 

ಎಐಸಿಪಿಐ ಸೂಚ್ಯಂಕ ಡಿಸೆಂಬರ್‌ನಲ್ಲಿ 132.3 ಪಾಯಿಂಟ್‌ಗಳಷ್ಟಿತ್ತು. ಡಿಸೆಂಬರ್ 2023 ರಲ್ಲಿ, ಎಐಸಿಪಿಐ ಸೂಚ್ಯಂಕದ ಅಂಕಿ ಅಂಶವು 132.3 ಪಾಯಿಂಟ್‌ಗಳಷ್ಟಿತ್ತು. ಈ ಕಾರಣದಿಂದಾಗಿ ಡಿಎ ಶೇಕಡಾ 42.37 ಆಗಿತ್ತು. ಜನವರಿಯಲ್ಲಿ ಸೂಚ್ಯಂಕವು 132.8 ತಲುಪಿದಾಗ, ಡಿಎ ಸ್ಕೋರ್ 43.08 ಕ್ಕೆ ಏರಿದೆ. ಅಂದರೆ 0.71 ಅಂಕಗಳ ಜಿಗಿತ ಕಂಡಿದೆ.  ಇದರ ನಂತರ, ಫೆಬ್ರವರಿಯಲ್ಲಿ ಕೂಡಾ ಡಿಎ  0.71 ಪಾಯಿಂಟ್‌ಗಳಷ್ಟು ಹೆಚ್ಚಾಗಿದೆ. ಈ ಅಂಕಿ ಅಂಶವು ಮಾರ್ಚ್‌ನಲ್ಲಿ 0.67 ಮತ್ತು ಏಪ್ರಿಲ್‌ನಲ್ಲಿ 0.60 ರಷ್ಟಿತ್ತು. ನಾವು ಸರಾಸರಿ ಅಂಕಿಅಂಶವನ್ನು ನೋಡಿದರೆ, ಸೂಚ್ಯಂಕ ಮತ್ತು ಡಿಎಯಲ್ಲಿ 0.6725 ಪಾಯಿಂಟ್‌ಗಳ ಜಿಗಿತ ಕಂಡುಬಂದಿದೆ.

ಮೇಲಿನ ಲೆಕ್ಕಾಚಾರದ ಪ್ರಕಾರ, 7 ನೇ ವೇತನ ಆಯೋಗದ ಅಡಿಯಲ್ಲಿ  ಡಿಎಯಲ್ಲಿ ಮತ್ತೆ ಶೇಕಡಾ 4 ರಷ್ಟು ಹೆಚ್ಚಳವಾಗುತ್ತದೆ. ಇದರೊಂದಿಗೆ ಡಿಎ ಹೆಚ್ಚಳ ಶೇ.46ಕ್ಕೆ ಏರಿಕೆಯಾಗಲಿದೆ.  ಜುಲೈ ತಿಂಗಳ ಡಿಎಯನ್ನು   ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಘೋಷಿಸಲಾಗುವುದು.  ಆದರೆ ಇದು 1 ಜುಲೈ 2023 ರಿಂದಲೇ ಅನ್ವಯವಾಗಲಿದೆ. 

Source : https://zeenews.india.com/kannada/business/within-few-days-central-govt-employees-will-get-hike-in-salary-139347

Leave a Reply

Your email address will not be published. Required fields are marked *