‘ಬಡವರ ಸೇಬು’ ಬಾರೆ ಹಣ್ಣಿನಲ್ಲಿ ಅಡಗಿದೆ ಅಪಾರ ಆರೋಗ್ಯದ ಗುಟ್ಟು.

  • ಬಯಲು ಸೀಮೆಯ ಜನರಿಗೆ ಪ್ರಿಯವಾಗಿರುವ ‘ಬಡವರ ಸೇಬು’ ಎಂದೇ ಖ್ಯಾತಿ ಪಡೆದಿರುವ ಬಾರೆ ಹಣ್ಣಿನಲ್ಲಿ ಅಡಗಿದೆ ಅಪಾರ ಆರೋಗ್ಯದ ಗುಟ್ಟು.
  • ಬಾರೆ ಹಣ್ಣಿನಲ್ಲಿ ಎ, ಬಿ ಮತ್ತು ಸಿ ಜೀವಸತ್ವಗಳು ಮತ್ತು ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಮೇಗ್ನೇಶಿಯಂ, ಸತು ಅಂಶಗಳು ಹೇರಳವಾಗಿ ಸಿಗುತ್ತದೆ.

Jujube Fruit Benefits: ಚಳಿಗಾಲ ಆರಂಭವಾಗುತ್ತಿದ್ದಂತೆ ಗ್ರಾಹಕರನ್ನು ತನ್ನತ್ತ ಕೈಬೀಸಿ ಕರೆಯುವ ಹಣ್ಣು ‘ಬಾರೆ ಹಣ್ಣು’. ಅರಿಶಿನ, ಹಸಿರು ಕದ್ದು ಬಣ್ಣಗಳಲ್ಲಿ ವಿವಿಧ (ಮೊಟ್ಟೆ, ಗುಂಡಗೆ ಮತ್ತು ಚಪ್ಪಟೆ) ಆಕಾರದಲ್ಲಿರುವ ಈ ಹಣ್ಣನ್ನು ‘ಬಡವರ ಸೇಬು’ ಎಂತಲೇ ಕೆರೆಯಲಾಗುತ್ತದೆ.  

ಬಯಲು ಸೀಮೆಯ ಜನರಿಗೆ ಪ್ರಿಯವಾಗಿರುವ ‘ಬಡವರ ಸೇಬು‘ ಎಂದೇ ಖ್ಯಾತಿ ಪಡೆದಿರುವ ಬಾರೆ ಹಣ್ಣಿನಲ್ಲಿ ಅಡಗಿದೆ ಅಪಾರ ಆರೋಗ್ಯದ ಗುಟ್ಟು. ಬಾರೆ ಹಣ್ಣಿನಲ್ಲಿ ಎ, ಬಿ ಮತ್ತು ಸಿ ಜೀವಸತ್ವಗಳು ಮತ್ತು ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಮೇಗ್ನೇಶಿಯಂ,  ಸತು ಅಂಶಗಳು ಹೇರಳವಾಗಿ  ಸಿಗುತ್ತದೆ.

ಈ ಹಣ್ಣಿನಲ್ಲಿ ದೇಹಕ್ಕೆ ಬೇಕಾಗಿರುವ ಅತಿ ಮುಖ್ಯವಾದ ನೀರಿನಾಂಶ ಮತ್ತು ನಾರಿನಾಂಶಗಳು ಅಡಕವಾಗಿದ್ದು ಇದು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ.

ಉತ್ತಮ ಆರೋಗ್ಯಕ್ಕೆ ಚಳಿಗಾಲದಲ್ಲಿ ತಿನ್ನಲೇಬೇಕು ಬಾರೆ ಹಣ್ಣು: 
ಜ್ವರಕ್ಕೆ ಮದ್ದು: 

ಜ್ವರವಿದ್ದಾಗ ಬಾರೆ ಹಣ್ಣಿನ ಬೇರಿನ ಪುಡಿಯನ್ನು ಜೇನು ತುಪ್ಪ ಅಥವಾ ಹಾಲಿನೊಂದಿಗೆ ಬೆರೆಸಿ ಕುಡಿಯುವುದರಿಂದ ಸಮಸ್ಯೆ ಪರಿಹಾರವಾಗುತ್ತದೆ.

ನರ ದೌರ್ಬಲ್ಯ: 
ನರ ದೌರ್ಬಲ್ಯ ಇರುವವರಿಗೆ ಈ ಹಣ್ಣು ಉತ್ತಮವಾಗಿ ಕೆಲಸ ಮಾಡುತ್ತದೆ . 

ವಾಂತಿ: 
ವಾತ, ಪಿತ್ತ ಹೆಚ್ಚಾಗಿ ವಾಂತಿಯಾಗುತ್ತಿದ್ದಲ್ಲಿ ಬಾರೆ ಹಣ್ಣು ಮತ್ತು ಕಾಳು ಮೆಣಸು ಸೇರಿಸಿ ಕಷಾಯ ತಯಾರಿಸಿ ಅದಕ್ಕೆ ಕಲ್ಲು ಸಕ್ಕರೆ ಬೆರೆಸಿ ಕುಡಿದರೆ ಆರೋಗ್ಯ ಸುಧಾರಿಸುತ್ತದೆ.

ಹೃದ್ರೋಗ: 
ಹೃದ್ರೋಗದಿಂದ ಬಳಲುವವರಿಗೆ ಬಾರೆಹಣ್ಣು ಉತ್ತಮ ಟ್ಯಾನಿಕ್‌ ಆಗಿದ್ದು ಇದು ಹೃದಯದ ಕಾಯಿಲೆಗಳಿಂದ ದೂರ ಉಳಿಸುತ್ತದೆ. 

ತಲೆನೋವಿಗೆ ಪರಿಹಾರ: 
ಕೆಲಸದ ಒತ್ತಡ ಮತ್ತು ಬಿಡುವಿಲ್ಲದ ಜೀವನ ಶೈಲಿಯಿಂದಾಗಿ ತಲೆನೋವಿನಿಂದ ಬಳಲುತ್ತಿದ್ದರೆ ಈ ಹಣ್ಣು  ಇದಕ್ಕೆ ಮನೆಮದ್ದಾಗಿ ಕೆಲಸ ಮಾಡುತ್ತದೆ. ಈ ಹಣ್ಣನ್ನು ಹರೆದು ತಲೆಗೆ ಹಚ್ಚುವುದರಿಂದ ತಲೆನೋವು ನಿವಾರಣೆಯಾಗುತ್ತದೆ.

ಬಾಯಿಯ ಹುಣ್ಣು, ಒಸಡಿನ ರಕ್ತಸ್ರಾವಕ್ಕೆ ಮದ್ದು: 
ಬಾಯಿ ಹುಣ್ಣಿನ ಸಮಸ್ಯೆಗೂ ಕೂಡ ಈ ಹಣ್ಣು ರಾಮಬಾಣವಿದ್ದಂತೆ.   ಬಾರೆ ಹಣ್ಣು ಮತ್ತು ಎಲೆಗಳ ಕಷಾಯವನ್ನು ಉಪ್ಪಿನೊಂದಿಗೆ ಬೆರೆಸಿ ಬಾಯಿ ಮುಕ್ಕಳಿಸುವುದರಿಂದ ಬಾಯಿಯ ಹುಣ್ಣುಗಳು, ಒಸಡುಗಳಿಂದ ರಕ್ತಸ್ರಾವ ಮತ್ತು ಗಂಟಲು ನೋವು ಕಡಿಮೆಯಾಗುತ್ತದೆ.

ನೆಗಡಿ ಮತ್ತು ಕೆಮ್ಮಿಗೆ ಪರಿಹಾರ: 
ನೆಗಡಿ ಮತ್ತು ಕೆಮ್ಮಿನಿಂದ ಬಳಲುತ್ತಿರುವವರು ಬಾರೆ ಹಣ್ಣಿನ ರಸ ಅತ್ಯುತ್ತಮ ಟಾನಿಕ್ ಆಗಿ ಕಾರ್ಯ ನಿರ್ವಹಿಸುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಸಮಗ್ರ ಸುದ್ದಿ ಇದನ್ನು ಖಚಿತಪಡಿಸುವುದಿಲ್ಲ. 

Source : https://zeenews.india.com/kannada/health/wondeful-health-benefits-of-jujube-fruit-266998

Leave a Reply

Your email address will not be published. Required fields are marked *