ಬಾಂಗ್ಲಾ ಪ್ರವಾಸಕ್ಕೆ Team India ಪ್ರಕಟ: ಈ 3 ಕ್ರಿಕೆಟಿಗರ ಭವಿಷ್ಯಕ್ಕೇ ಅಂತ್ಯ ಹೇಳಿದ ಆಯ್ಕೆ ಸಮಿತಿ!

India Tour Of Bangladesh: ವೇಗಿ ರೇಣುಕಾ ಸಿಂಗ್ ಮತ್ತು ವಿಕೆಟ್ ಕೀಪರ್ ರಿಚಾ ಘೋಷ್ ಹೊರತುಪಡಿಸಿ ಯುವ ಆಫ್ ಸ್ಪಿನ್ನರ್ ಶ್ರೇಯಂಕಾ ಪಾಟೀಲ್ ಅವರನ್ನು ಕಡೆಗಣಿಸಲಾಗಿದೆ. ಭಾರತ ತಂಡವು ಬಾಂಗ್ಲಾದೇಶದ ವಿರುದ್ಧ ಮೂರು T20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಮತ್ತು ಅಷ್ಟೇ ODI ಪಂದ್ಯಗಳನ್ನು ಆಡಬೇಕಾಗಿದೆ.

India Tour Of Bangladesh: ಭಾರತದ ಬಾಂಗ್ಲಾದೇಶ ಪ್ರವಾಸಕ್ಕೆ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದೆ. ಇದರಲ್ಲಿ ಕೆಲವು ಆಟಗಾರರ ಭವಿಷ್ಯವನ್ನು ತೆರೆಯುವಂತಹ ಕೆಲಸವನ್ನು ಆಯ್ಕೆದಾರರು ಮಾಡಿದ್ದಾರೆ. ಜುಲೈ 9 ರಂದು ಮೀರ್‌ಪುರದಲ್ಲಿ ಪ್ರಾರಂಭವಾಗುವ ಬಾಂಗ್ಲಾದೇಶದ ಸೀಮಿತ ಓವರ್‌ ಗಳ ಪ್ರವಾಸಕ್ಕಾಗಿ ಭಾರತವು 18 ಸದಸ್ಯರ ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು ಘೋಷಿಸಿದೆ. ಆದರೆ ಬಲಗೈ ವೇಗದ ಬೌಲರ್ ರೇಣುಕಾ ಸಿಂಗ್ ಮತ್ತು ವಿಕೆಟ್‌ಕೀಪರ್ ರಿಚಾ ಘೋಷ್ ಅವರನ್ನು ಕೈಬಿಟ್ಟಿದೆ.

ವೇಗಿ ರೇಣುಕಾ ಸಿಂಗ್ ಮತ್ತು ವಿಕೆಟ್ ಕೀಪರ್ ರಿಚಾ ಘೋಷ್ ಹೊರತುಪಡಿಸಿ ಯುವ ಆಫ್ ಸ್ಪಿನ್ನರ್ ಶ್ರೇಯಂಕಾ ಪಾಟೀಲ್ ಅವರನ್ನು ಕಡೆಗಣಿಸಲಾಗಿದೆ. ಭಾರತ ತಂಡವು ಬಾಂಗ್ಲಾದೇಶದ ವಿರುದ್ಧ ಮೂರು T20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಮತ್ತು ಅಷ್ಟೇ ODI ಪಂದ್ಯಗಳನ್ನು ಆಡಬೇಕಾಗಿದೆ.

ಎಲ್ಲಾ ಆರು ಪಂದ್ಯಗಳು ಮೀರ್‌ಪುರದ ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ (SBNCS) ನಲ್ಲಿ ನಡೆಯಲಿವೆ. ಹರ್ಮನ್‌ಪ್ರೀತ್ ಕೌರ್ ತಂಡವನ್ನು ಮುನ್ನಡೆಸಲಿದ್ದು, ಸ್ಮೃತಿ ಮಂಧಾನ ಉಪನಾಯಕಿಯಾಗಿದ್ದಾರೆ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಘೋಷ್ ಅವರನ್ನು ಹೊರಹಾಕಿರುವುದು ಅಚ್ಚರಿ ಮೂಡಿಸಿದೆ. ಇದಕ್ಕೆ ಕಾರಣವನ್ನೂ ನೀಡಿಲ್ಲ.

ಭಾರತೀಯ T20 ತಂಡ:

ಹರ್ಮನ್‌ಪ್ರೀತ್ ಕೌರ್ (c), ಸ್ಮೃತಿ ಮಂಧಾನ, ದೀಪ್ತಿ ಶರ್ಮಾ, ಶೆಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಯಾಸ್ತಿಕಾ ಭಾಟಿಯಾ (WK), ಹರ್ಲೀನ್ ಡಿಯೋಲ್, ದೇವಿಕಾ ವೈದ್ಯ, ಉಮಾ ಛೆಟ್ರಿ (WK), ಅಮನ್ಜೋತ್ ಕೌರ್, ಎಸ್ ಮೇಘನಾ, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ಅಂಜಲಿ ಸರ್ವಾನಿ , ಮೋನಿಕಾ ಪಟೇಲ್, ರಾಶಿ ಕನೋಜಿಯಾ, ಅನುಷಾ ಬರಡ್ಡಿ, ಮಿನ್ನು ಮಣಿ.

ಭಾರತ ODI ತಂಡ:

ಹರ್ಮನ್‌ಪ್ರೀತ್ ಕೌರ್ (ನಾ), ಸ್ಮೃತಿ ಮಂಧಾನ, ದೀಪ್ತಿ ಶರ್ಮಾ, ಶೆಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಯಾಸ್ತಿಕಾ ಭಾಟಿಯಾ (ವಿ ಕೀ), ಹರ್ಲೀನ್ ಡಿಯೋಲ್, ದೇವಿಕಾ ವೈದ್ಯ, ಉಮಾ ಛೆಟ್ರಿ (ವಿ ಕೀ), ಅಮಾನ್‌ಜೋತ್ ಕೌರ್, ಪ್ರಿಯಾ ಪುನಿಯಾ, ಪೂಜಾ ವಸ್ತ್ರಾಕರ್, ಮೇಘನಾ ಸಿಂಗ್, ಅಂಜಲಿ ಸರ್ವಾನಿ , ಮೋನಿಕಾ ಪಟೇಲ್, ರಾಶಿ ಕನೋಜಿಯಾ, ಅನುಷಾ ಬರಡ್ಡಿ, ಸ್ನೇಹ ರಾಣಾ.

Source : https://zeenews.india.com/kannada/sports/team-india-announced-for-bangladesh-tour-selectors-revealed-the-fate-of-these-players-143245

Leave a Reply

Your email address will not be published. Required fields are marked *