ಸಾಲ ಪಡೆಯಲು ಸತ್ತ ವ್ಯಕ್ತಿಯನ್ನು ಬ್ಯಾಂಕ್​ಗೆ ಕರೆದುಕೊಂಡು ಬಂದ ಮಹಿಳೆ! ನಂತರ ನಡೆದಿದ್ದಿಷ್ಟು.

ಸತ್ತ ವ್ಯಕ್ತಿಯ ಹೆಸರಲ್ಲಿ ಮಹಿಳೆ ಸಾಲ ಪಡೆಯಲು ಮುಂದಾಗಿದ್ದಳು. ಆತ ಇನ್ನೂ ಬದುಕಿದ್ದಾನೆ ಮತ್ತು ಅನಾರೋಗ್ಯದಿಂದ ಬಳಲುತ್ತಿದ್ದಾನೆ ಎಂದು ಬಿಂಬಿಸಲು ಹೋಗಿ ಸಿಕ್ಕಿಬಿದ್ದಿದ್ದಾಳೆ ಎಂದು ತಿಳಿದುಬಂದಿದೆ. ಈ ಘಟನೆ ಬ್ರೆಜಿಲ್​ನ ರಿಯೋ ಡಿ ಜನೈರೊದಲ್ಲಿ ನಡೆದಿದೆ.

ಬ್ಯಾಂಕ್​ನಲ್ಲಿದ್ದ ವ್ಯಕ್ತಿಯೊಬ್ಬರು ವ್ಹೀಲ್​ಚೇರ್​ ಮೇಲೆ ಕುಳಿತಿದ್ದ ವ್ಯಕ್ತಿಯ ಕಳೆಗುಂದಿದ ಮುಖ ಮತ್ತು ಮಹಿಳೆಯ ಅನುಮಾನಾಸ್ಪದ ವರ್ತನೆಯನ್ನು ಗಮನಿಸಿ, ತುರ್ತು ಸೇವೆ ಮತ್ತು ಪೊಲೀಸರಿಗೆ ಮಾಹಿತಿ ತಿಳಿಸಿ, ಆಕೆಯ ಚಲನಾವಲನವನ್ನು ವಿಡಿಯೋ ರೆಕಾರ್ಡ್​ ಮಾಡಲು ಆರಂಭಿಸಿದರು.

ಮಹಿಳೆಯು ಮೃತ ವ್ಯಕ್ತಿಯ ತಲೆಯನ್ನು ಹಿಡಿದುಕೊಂಡು ಕಾಗದದ ಮೇಲೆ ಸಹಿ ಹಾಕುವಂತೆ ಒತ್ತಾಯಿಸುತ್ತಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ. ಸತ್ತ ವ್ಯಕ್ತಿ ಸಹಿ ಹಾಕುವುದು ಅಸಾಧ್ಯ ಎಂಬುದು ಗೊತ್ತಿದ್ದರೂ ಸಹಿಯನ್ನು ಪಡೆಯುವ ತನ್ನ ವ್ಯರ್ಥ ಪ್ರಯತ್ನದಲ್ಲಿ ಮೃತನ ಬೆರಳುಗಳ ನಡುವೆ ಪೆನ್ನನ್ನು ಸಹ ಇರಿಸುತ್ತಾಳೆ. ಮಹಿಳೆಯ ವರ್ತನೆ ನೋಡಿ, ಅನುಮಾನ ಜಾಸ್ತಿಯಾಗುತ್ತಿದ್ದಂತೆ ವ್ಹೀಲ್​​ಚೇರ್​ ಮೇಲೆ ಕುಳಿತಿರುವ ವ್ಯಕ್ತಿಯ ಯೋಗಕ್ಷೇಮದ ಬಗ್ಗೆ ಬ್ಯಾಂಕ್​ ಉದ್ಯೋಗಿಯೊಬ್ಬಳು ಕಾಳಜಿ ವ್ಯಕ್ತಪಡಿಸುತ್ತಾಳೆ. ಈ ವೇಳೆ ಏನು ಆಗಿಲ್ಲವಂತೆ ನಟಿಸುವ ಮಹಿಳೆ, ಸತ್ತ ವ್ಯಕ್ತಿಯನ್ನು ತನ್ನೊಂದಿಗೆ ಆಸ್ಪತ್ರೆಗೆ ಕರೆದೊಯ್ಯಲು ಸಹಾಯ ಮಾಡುವಂತೆ ಮನವೊಲಿಸಲು ಪ್ರಯತ್ನಿಸುತ್ತಾಳೆ.

ಈ ವೇಳೆ ವೈದ್ಯರನ್ನು ಸ್ಥಳಕ್ಕೆ ಕರೆಸಲಾಗುತ್ತದೆ. ಪರೀಕ್ಷಿಸಿದ ವೈದ್ಯರು ಆತ ಸ್ವಲ್ಪ ಸಮಯದ ಮುಂಚೆಯೇ ಮೃತಪಟ್ಟಿರುವುದಾಗಿ ತಿಳಿಸುತ್ತಾರೆ. ಮೃತನನ್ನು ಪೌಲೋ ರಾಬರ್ಟೋ ಬ್ರಾಗಾ (68) ಎಂದು ಗುರುತಿಸಲಾಗಿದೆ. ಆತನನ್ನು ಬ್ಯಾಂಕ್​ಗೆ ಕರೆದುಕೊಂಡ ಬಂದ ಮಹಿಳೆಯ ಹೆಸರು ಎರಿಕಾ ಡಿಸೋಜಾ ವೇರಿ ನನ್ಸ್​. ತಾನು ಮೃತ ವ್ಯಕ್ತಿಯ ಸೊಸೆ. ನಾನೇ ಆತನನ್ನು ಆರೈಕೆ ಮಾಡುತ್ತಿದ್ದೆ ಎಂದು ಹೇಳಿದ್ದಾಳೆ.

ಸದ್ಯ ಅಧಿಕಾರಿಗಳು ಘಟನೆಯ ಕುರಿತು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಮಹಿಳೆಗೆ ಯಾರಾದರೂ ಸಹಚರರು ಇದ್ದಾರೆಯೇ? ಇದರ ಹಿಂದೆ ಯಾವುದಾದರೂ ಸಂಚು ಅಡಗಿದೆಯೇ ಎಂದು ನಿರ್ಧರಿಸಲು ಬ್ಯಾಂಕ್ ಒಳಗೆ ಮತ್ತು ಹೊರಗೆ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸುತ್ತಿದ್ದಾರೆ. 

Source : https://m.dailyhunt.in/news/india/kannada/vijayvani-epaper-vijaykan/saala+padeyalu+satta+vyaktiyannu+byaank+ge+karedukondu+bandha+mahile+nantara+nadediddishtu+-newsid-n601180044?listname=topicsList&index=36&topicIndex=0&mode=pwa&action=click

 

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *