
Health Tips: ನೈಸರ್ಗಿಕವಾಗಿ ಸಿಗುವ ಆಹಾರಗಳನ್ನು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಂಡರೆ, ಆಗ ಖಂಡಿತವಾಗಿಯೂ ಇದರಿಂದ ಬೆಳಗ್ಗೆ ನಿದ್ರೆಯಿಂದ ಎದ್ದ ಕೂಡಲೇ ಕಾಡುವಂತಹ ನಿಶ್ಯಕ್ತಿ ಮತ್ತು ಬಳಲಿಕೆ ದೂರ ಮಾಡಬಹುದು. ಒಂದು ವೇಳೆ ದೇಹದಲ್ಲಿ ಅತಿಯಾಗಿ ನಿಶ್ಯಕ್ತಿ ಉಂಟಾದರೆ ಆಗ ಯಾವುದೇ ಕೆಲಸ ಮಾಡಲು ಮನಸ್ಸು ಬಾರದು ಆರೋಗ್ಯವು ಉತ್ತಮವಾಗಿದ್ದರೆ, ಆಗ ದೇಹವು ಯಾವುದೇ ಕೆಲಸ ಕಾರ್ಯಗಳನ್ನು ಮಾಡಲು ಹಿಂದುಮುಂದು ನೋಡಲ್ಲ, ಹೀಗಾಗಿ ನಿಶ್ಯಕ್ತಿ ಹೋಗಲಾಡಿಸುವಂತಹ ಸಮತೋಲನವಾಗಿರುವ ಆಹಾರಗಳನ್ನು ಸೇವನೆ ಮಾಡಬೇಕು.

ಬೆಳಗ್ಗೆ ಎದ್ದ ಕೂಡಲೇ ಪ್ರತಿಯೊಬ್ಬರೂ ತುಂಬಾ ಉಲ್ಲಾಸದಿಂದ ಇರುವುದು ಸಹಜ. ಆದರೆ ಇನ್ನು ಕೆಲವರಿಗೆ ಬೆಳಿಗ್ಗೆ ಎದ್ದ ಬಳಿಕ ತುಂಬಾ ಆಯಾಸ, ಬಳಲಿಕೆ ಕಂಡುಬರುವುದು. ಸರಿಯಾಗಿ ನಿದ್ರೆ ಮಾಡಿದರೂ ಅವರು ಇದು ಸಾಮಾನ್ಯವಾಗಿರುವುದು. ಇದಕ್ಕೆ ಮುಖ್ಯ ಕಾರಣ ಅವರ ಆಹಾರ ಕ್ರಮದಲ್ಲಿ ಸರಿಯಾದ ಪೋಷಕಾಂಶಗಳು ಇಲ್ಲದೆ ಇರುವುದು. ಆದರೆ ಕೆಲವೊಂದು ಆಹಾರಗಳನ್ನು ಸೇವನೆ ಮಾಡಿದರೆ, ಆಗ ಇದರಿಂದ ಈ ಸಮಸ್ಯೆಯನ್ನು ನಿವಾರಣೆ ಮಾಡಬಹುದು.

ಶಕ್ತಿ ಮಟ್ಟ ಹೆಚ್ಚಿಸಲು ತಜ್ಞರು ಕೆಲವು ಬಗ್ಗೆ ಒಣಫಲಗಳನ್ನು ಇಲ್ಲಾಂದ್ರೆ ಹಣ್ಣುಗಳ ಸೇವನೆಯನ್ನು ಸೂಚಿಸುವರು. ಬಾದಾಮಿ, ಪಿಸ್ತಾ, ಅಕ್ರೋಟ ಅಥವಾ ವಾಲ್ ನಟ್ಸ್, ಚಿಯಾ ಮತ್ತು ಕುಂಬಳಕಾಯಿ ಬೀಜವನ್ನು ಬೆಳಗ್ಗೆ ಸೇವನೆ ಮಾಡಿದರೆ, ಆಗ ಇದರಿಂದ ಸಂಪೂರ್ಣ ಆರೋಗ್ಯವು ಉತ್ತಮವಾಗಿರುವುದು. ಬೆಳಗ್ಗೆ ಎದ್ದ ಬಳಿಕ ಕೆಲವು ಒಣ ಬೀಜಗಳನ್ನು ಸೇವನೆ ಮಾಡಿದರೆ ಆಗ ಇದರಿಂದ ದಿನವಿಡಿ ಶಕ್ತಿಯಿಂದ ಇರಲು ಸಾಧ್ಯವಾಗಲಿದೆ. ನಿದ್ರೆಯಿಂದ ಎದ್ದ ಕೂಡಲೇ ನಿಶ್ಯಕ್ತಿ, ಬಳಲಿಕೆಯಾಗುತ್ತಿದ್ದರೆ ಈ ಲೇಖನ ಓದಿಕೊಳ್ಳಿ.

ಉಪಾಹಾರದಲ್ಲಿ ಏನು ಸೇರಿಸಿಕೊಳ್ಳಬೇಕು?

ನಿದ್ರೆಯಿಂದ ಎದ್ದ ಬಳಿಕ ಕೂಡ ದೇಹದಲ್ಲಿ ನಿಶ್ಯಕ್ತಿ, ಬಳಲಿಕೆ ಕಂಡು ಬರುತ್ತಲಿದ್ದರೆ, ಆಗ ಬೆಳಗ್ಗಿನ ಉಪಾಹಾರದಲ್ಲಿ ಪೋಷಕಾಂಶ ಗಳಿಂದ ಸಮೃದ್ಧವಾಗಿರುವಂತಹ ಗಂಜಿ ಸೇವನೆ ಮಾಡಿದರೆ ಒಳ್ಳೆಯದು. ಗ್ರೀನ್ ಟೀ ಮತ್ತು ಬ್ಲ್ಯಾಕ್ ಟೀ ಕೂಡ ಈ ರೀತಿಯ ನಿಶ್ಯಕ್ತಿ ದೂರ ಮಾಡಲು ಸಹಕಾರಿ ಆಗಿರುವುದು. ಬೆಳಗ್ಗೆ ಮೊಟ್ಟೆ ಸೇವಿಸಿದರೆ, ಆಗ ಇದರಿಂದ ದಿನವಿಡಿ ಒಳ್ಳೆಯ ಶಕ್ತಿಯು ಸಿಗುವುದು. ಸರಿಯಾದ ಪ್ರಮಾಣ ಹಾಗೂ ವಿಧಾನಗಳಿಂದ ಈ ಆಹಾರಗಳನ್ನು ಸೇವನೆ ಮಾಡಿದರೆ, ಆಗ ದಿನವಿಡಿ ದೇಹವು ಉಲ್ಲಾಸ ಹಾಗೂ ಶಕ್ತಿಯುತವಾಗಿರಲು ಸಹಕಾರಿ ಆಗಿರುವುದು.
ಹಣ್ಣುಗಳನ್ನು ಸೇವಿಸಿ

ದಿನದ ಆರಂಭವನ್ನು ಸೇಬು, ಬ್ಲೂಬೆರ್ರಿ, ಪಿಯರ್ಸ್, ಬಾಳೆಹಣ್ಣು, ಕಿತ್ತಳೆ ತಿನ್ನುವ ಮೂಲಕ ಆರಂಭಿಸಿದರೆ, ಆಗ ಇದರಿಂದ ದಿನವಿಡಿ ದೇಹವು ಶಕ್ತಿಯಿಂದ ಕೂಡಿರುವುದು. ನಿಶ್ಯಕ್ತಿ ಮತ್ತು ಬಳಲಿಕೆ ದೂರ ಮಾಡಲು ನೆಲ್ಲಿಕಾಯಿ ಸೇವಿಸಿದರೂ ಇದು ತುಂಬಾ ಲಾಭಕಾರಿ ಆಗಿರುವುದು. ಅವಕಾಡೊ ಮತ್ತು ಮಶ್ರೂಮ್ ನ್ನು ಆಹಾರ ಕ್ರಮದಲ್ಲಿ ಸೇರ್ಪಡೆ ಮಾಡಿಕೊಂಡರೆ ಆಗ ಇದರಿಂದ ದೇಹದಲ್ಲಿ ಶಕ್ತಿಯು ಸಿಗುವುದು.
ಬೇಯಿಸಿದ ಮೊಟ್ಟೆ ಸೇವನೆ ಮಾಡಿ

- ಮೊಟ್ಟೆಯು ಅನಾರೋಗ್ಯಕರ ಎಂದು ಹೆಚ್ಚಿನ ಜನರು ಭಾವಿಸುವರು. ಆದರೆ ಇದನ್ನು ಆಹಾರ ಕ್ರಮದಲ್ಲಿ ಸೇರ್ಪಡೆ ಮಾಡಿದರೆ, ಆಗ ಇದರಿಂದ ಹೆಚ್ಚು ಲಾಭವಾಗಲಿದೆ. ಮೊಟ್ಟೆಯ ಹಳದಿ ಭಾಗದಲ್ಲಿ ಹಲವಾರು ರೀತಿಯ ಮೈಕ್ರೋ ನ್ಯೂಟ್ರಿಯೆಂಟ್ ಗಳಿವೆ ಮತ್ತು ಮೊಟ್ಟೆಯ ಬಿಳಿ ಭಾಗದಲ್ಲಿ ಇರುವಂತಹ ಕೆಲವೊಂದು ಪೋಷಕಾಂಶಗಳ ಬಗ್ಗೆ ಕೂಡ ಅಧ್ಯಯನಗಳು ನಡೆಯುತ್ತಿದೆ.
- 2014ರಲ್ಲಿ ಮೊಟ್ಟೆಯ ಬಗ್ಗೆ ನಡೆದಿರುವ ಅಧ್ಯಯನ ವರದಿ ಪ್ರಕಾರ, ಮೊಟ್ಟೆಯಲ್ಲಿ ಅಧಿಕ ಪ್ರಮಾಣದ ಆ್ಯಂಟಿಆಕ್ಸಿಡೆಂಟ್ ಮತ್ತು ನಿಶ್ಯಕ್ತಿ ದೂರ ಮಾಡುವಂತಹ ಅಂಶಗಳು ಇವೆ. ಇದರಲ್ಲಿನ ಪೆಪ್ಟೈಡ್ ಗಳು ಅಮಿನೋ ಆಮ್ಲವನ್ನು ನೀಡಿ ಪ್ರೋಟೀನ್ ನಿರ್ಮಾ ಣದಲ್ಲಿ ಪ್ರಮುಖ ಪಾತ್ರ ವಹಿಸುವುದು. ಮೊಟ್ಟೆಯ ಪೆಪ್ಟೈಡ್ ಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಶೇ. 40ರಷ್ಟು ಹೆಚ್ಚಿಸಬಹುದು.
ಓಟ್ ಮೀಲ್

ಉಪಾಹಾರಕ್ಕೆ ಓಟ್ ಮೀಲ್ ಸೇವನೆ ಮಾಡಿದರೆ, ಆಗ ಇದರಿಂದ ದೇಹಕ್ಕೆ ಶಕ್ತಿ ಒದಗುವುದು. ಓಟ್ ಮೀಲ್ ನಲ್ಲಿ ಅಧಿಕ ಪ್ರಮಾಣದ ಕಾರ್ಬೋ ಹೈಡ್ರೇಟ್ಸ್ ಮತ್ತು ಪ್ರೋಟೀನ್ ಇದೆ. ನೂರು ಗ್ರಾಂನಲ್ಲಿ ಕೇವಲ 71ರಷ್ಟು ಕ್ಯಾಲರಿ ಮಾತ್ರ ಇದೆ. ಆರೋಗ್ಯಕಾರಿ ಲಿಪಿಡ್ ಮತ್ತು ಆಹಾರದ ನಾರಿ ನಾಂಶವು ಇದರಲ್ಲಿದೆ. ಇದರಿಂದಾಗಿ ದಿನವಿಡಿ ಶಕ್ತಿಯನ್ನು ಕಾಪಾಡಲು ಸಹಕಾರಿ ಆಗುವುದು. ಓಟ್ ಮೀಲ್ ನಲ್ಲಿ ಮಧ್ಯಮ ಪ್ರಮಾಣದ ಗ್ಲೈಸೆಮಿಕ್ ಇದ್ದು, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ದೀರ್ಘಕಾಲ ಹೆಚ್ಚಾಗಿರುವಂತೆ ಮಾಡುವುದು.
ಬೆಳಗ್ಗೆ ಕಂಪಕ್ಕಿಯ ಗಂಜಿ ಊಟ ಮಾಡುವ ಅಭ್ಯಾಸ ಮಾಡಿಕೊಳ್ಳಿ

ನಮ್ಮಲ್ಲಿ ಹೆಚ್ಚಿನವರಿಗೆ ಕಂಪಕ್ಕಿಯ ಗಂಜಿಯ ಬಗ್ಗೆ ಅಷ್ಟಾಗಿ ಗೊತ್ತಿ ರಲಿಕ್ಕಿಲ್ಲ! ಆದರೆ ಇದರಲ್ಲಿರುವ ಪೌಷ್ಟಿಕ ಸತ್ವಗಳು, ಆರೋಗ್ಯಕ್ಕೆ ಬಹಳ ಒಳ್ಳೆಯದು. ಪ್ರಮುಖವಾಗಿ ಈ ಅನ್ನದಿಂದ ಮಾಡಿದ ಗಂಜಿಯಲ್ಲಿ ಅತ್ಯಧಿಕ ಪ್ರಮಾಣದ ಕಾರ್ಬೋಹೈಡ್ರೇಟ್ಸ್ ಅಂಶ ಕಂಡು ಬರುವುದರಿಂದ ದೇಹದ ಸುಸ್ತು ಬಳಲಿಕೆ ಸಮಸ್ಯೆಯನ್ನು ದೂರ ಮಾಡಲು ನೆರವಾಗುತ್ತದೆ.
ಅಷ್ಟೇ ಅಲ್ಲದೆ ಈ ಕೆಂಪಕ್ಕಿಯ ಗಂಜಿಯಲ್ಲಿ ಪ್ರೋಟೀನ್ ನ ದೊಡ್ಡ ಆಗರ ಮತ್ತು ದಿನವಿಡಿ ಇದು ದೇಹವನ್ನು ಕ್ರಿಯಾಶೀಲವಾಗಿಡುವುದು. ಕಂದು ಅಕ್ಕಿಯಲ್ಲಿ ಪಿಷ್ಠದ ಪ್ರಮಾಣವು ತುಂಬಾ ಕಡಿಮೆ ಇದೆ ಮತ್ತು ನಾರಿ ನಾಂಶವು ಅತ್ಯಧಿಕ ಮಟ್ಟದಲ್ಲಿ ಇದೆ. ಇದರಿಂದ ಇದು ಜೀರ್ಣವಾಗಲು ಹೆಚ್ಚು ಸಮಯ ಬೇಕಾಗುವುದು. ಇದು ದೇಹಕ್ಕೆ ಶಕ್ತಿ ನೀಡಿ, ತ್ರಾಣದ ಮಟ್ಟ ಏರಿಸುವುದು.
Source: Vijaya Karnataka
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1