ಶೇಂಗಾ ಸೇವನೆಯಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳು..

Peanuts Benefits: ಪ್ರಯಾಣ ಮಾಡುವಾಗ ಅಥವಾ ಒಬ್ಬರೇ ಇದ್ದಾಗ ‘ಟೈಂ ಪಾಸ್ ಗೆ ಬೆಸ್ಟ್‌ ಎಂದರೆ  ಶೇಂಗಾ(ಕಡ್ಲೆ ಕಾಯಿ’).  ಎಳೆ ಮಕ್ಕಳಿಂದ ದೊಡ್ಡವರವರೆಗೂ ಸೇವಿಸಬಹುದಾಗಿದೆ. ಇದು ರುಚಿ ಮಾತ್ರವಲ್ಲದೇ ಆರೋಗ್ಯಕ್ಕೂ ಸಹಕಾರಿ. 

ಪ್ರಯಾಣ ಮಾಡುವಾಗ ಅಥವಾ ಒಬ್ಬರೇ ಇದ್ದಾಗ ‘ಟೈಂ ಪಾಸ್ ಗೆ ಬೆಸ್ಟ್‌ ಎಂದರೆ  ಶೇಂಗಾ(ಕಡ್ಲೆ ಕಾಯಿ’).  ಎಳೆ ಮಕ್ಕಳಿಂದ ದೊಡ್ಡವರವರೆಗೂ ಸೇವಿಸಬಹುದಾಗಿದೆ. ಇದು ರುಚಿ ಮಾತ್ರವಲ್ಲದೇ ಆರೋಗ್ಯಕ್ಕೂ ಸಹಕಾರಿ.

ಹುರಿದು ಅಥವಾ ಬೇಯಿಸಿ ತಿನ್ನಬಹುದಾಗಿದೆ. ಇದನ್ನು ಕನ್ನಡದಲ್ಲಿ  ಶೇಂಗಾ ಎಂದು ಕರೆದರೇ ಇಂಗ್ಲಿಷ್‌ ನಲ್ಲಿಪೀನಟ್ಸ್  ಎಂದು ಕರೆಯುತ್ತಾರೆ.  ಶೇಂಗಾ ಬೀಜದಲ್ಲಿ ರಂಜಕ,  ವಿಟಮಿನ್ನು, ಕ್ಯಾಲ್ಸಿಯಂ,ಮೆಗ್ನೀಸಿಯಮ್ ಕಾರ್ಬೋಹೈಡ್ರೇಟುಗಳು, ಕರಗದ ನಾರು, ಸತು, ಸೋಡಿಯಂ ಒಳಗೊಂಡಿದೆ.

ಶೇಂಗಾಬೀಜದಲ್ಲಿ ಫೈಬರ್ ಅಂಶ ಹೇರಳವಾಗಿರುವುದರಿಂದ ಇದರ ನಿಯಮಿತ್ತ ಸೇವನೆಯಿಂದ ತೂಕ ಇಳಿಕೆಗೆ ಸಹಕಾರಿಯಾಗಿದೆ. ​ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. 

ಶೇಂಗಾಬೀಜ ತಿನ್ನುವುದರಿಂದ  ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸುತ್ತದೆ. ಕಡಲೆಕಾಯಿ ಸೇವನೆಯು ದೇಹಕ್ಕೆ ಶಕ್ತಿ ನೀಡುತ್ತದೆ.
ಕಡಲೆಕಾಯಿ ಅಲರ್ಜಿ ಇರುವವರು ಅದನ್ನು ತಿನ್ನುವುದನ್ನು ಎಲ್ಲಾ ರೀತಿಯಿಂದ ತಿನ್ನುವುದನ್ನು ತಪ್ಪಿಸಬೇಕು.

ಇದು ಅವರಿಗೆ ನೋಯುತ್ತಿರುವ ಗಂಟಲು, ಚರ್ಮದ ಸಮಸ್ಯೆ ಜೀರ್ಣಕಾರಿ ಸಮಸ್ಯೆ, ಉಸಿರಾಟ ತೊಂದರೆ ಸಮಸ್ಯೆ ಉಂಟು ಮಾಡಬಹುದು. ಕಡಲೆಕಾಯಿ ಸೇವನೆಯನ್ನು ಹೆಚ್ಚು ತಿನ್ನುವುದರಿಂದ ದೇಹದ ಪಿತ್ತ ಹೆಚ್ಚಾಗಬಹುದು. 

ಪ್ರಯಾಣದ ವೇಳೆ ವಾಂತಿ ಮಾಡುವ ಅಭ್ಯಾಸವಿದ್ದರೇ ಅಂಥವರು ಇದರ ಸೇವನೆಯಿಂದ ದೂರ ಇರಬೇಕು. ಮೂಗು ಅಲರ್ಜಿ, ಉಸಿರಾಟದ ತೊಂದರೆ ಗಂಟಲು ನೋವು, ಸೋರುವ, ಚರ್ಮದ ತೊಂದರೆ, ಜೀರ್ಣಕಾರಿ ಸಮಸ್ಯೆ, ಇದು ಮಾರಕವಾಗಿದೆ. 

Source: https://zeenews.india.com/kannada/lifestyle/there-are-many-health-benefits-of-consuming-peanuts-146939

Leave a Reply

Your email address will not be published. Required fields are marked *