UPI ATM Cardless Cash WithDraw: ಒಂದೊಮ್ಮೆ ನೀವು ನಿಮ್ಮ ಕ್ರೆಡಿಟ್-ಬೇಬಿಟ್ ಕಾರ್ಡ್ ಅನ್ನು ಮನೆಯಲ್ಲಿಯೇ ಮರೆತು ಬಂದಿದ್ದರೆ ಹಣ ವಿತ್ ಡ್ರಾ ಮಾಡಲು ಯೋಚಿಸುವುದೇ ಬೇಡ. ಯುಪಿಐ ಅಪ್ಲಿಕೇಶನ್ಗಳ ಮೂಲಕ ಕಾರ್ಡ್‌ರಹಿತ ನಗದು ವಿತ್ ಡ್ರಾ ಮಾಡಬಹುದು.

- ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ಯುಪಿಐ-ಸಕ್ರಿಯಗೊಳಿಸಿದ ಹಿಂಪಡೆಯುವಿಕೆಯನ್ನು ಅನುಮೋದಿಸಿದೆ.
- ಇದರ ಸಹಾಯದಿಂದ ಭೌತಿಕವಾಗಿ ಡೆಬಿಟ್ ಕಾರ್ಡ್‌ಗಳನ್ನು ಹೊಂದಿಲ್ಲದಿದ್ದರೂ ಕೂಡ ಎಟಿಎಂನಿಂದ ಹಣವನ್ನು ಹಿಂಪಡೆಯಬಹುದು.
- ಕಾರ್ಡ್‌ರಹಿತ ನಗದು ಹಿಂಪಡೆಯುವಿಕೆಯನ್ನು ಬಳಸಲು ಇಲ್ಲಿದೆ ಹಂತ-ಹಂತದ ಪ್ರಕ್ರಿಯೆ
UPI ATM Cardless Cash WithDraw: ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ವಹಿವಾಟುಗಳ ಜನಪ್ರಿಯತೆ ಹೆಚ್ಚಾಗಿದೆ. ಇದೀಗ ಇದನ್ನೇ ಬಳಸಿಕೊಂಡು ನೀವು ಇಂಟರ್‌ಆಪರೇಬಲ್ ಕಾರ್ಡ್‌ಲೆಸ್ ಕ್ಯಾಶ್ ಹಿಂಪಡೆಯುವಿಕೆ (ICCW) ಸೇವೆ ಎಂದು ಕರೆಯಲ್ಪಡುವ ಯುಪಿಐ-ಎಟಿಎಂ ಸಹಾಯದಿಂದ ಎಟಿಎಂ ಕಾರ್ಡ್ ಇಲ್ಲದಿದ್ದರೂ ಹಣ ವಿತ್ ಡ್ರಾ ಮಾಡಬಹುದು.
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ), ಯುಪಿಐನಿಂದ ಹಣವನ್ನು ಹಿಂಪಡೆಯುವ ಸೌಲಭ್ಯವನ್ನು ಅನುಮೋದಿಸಿದೆ ಎಂದು MySmartPrice ವರದಿ ಮಾಡಿದ್ದು, ಇದರ ಸಹಾಯದಿಂದ ಈಗ ಗ್ರಾಹಕರು ಭೌತಿಕ ಕಾರ್ಡ್‌ಗಳಿದ್ದರೂ ಸ್ಮಾರ್ಟ್‌ಫೋನ್ ಬಳಸಿ ಸುಲಭವಾಗಿ ಹಣ ವಿತ್ ಡ್ರಾ ಮಾಡಬಹುದು. ಇದಕ್ಕಾಗಿ ನಿಮ್ಮ ಸ್ಮಾರ್ಟ್‌ಫೋನ್ನಲ್ಲಿ ಎಟಿಎಂ ವಹಿವಾಟುಗಳಿಗೆ (ATM transactions on smartphones) ಸಕ್ರಿಯಗೊಳಿಸಲಾದ ಯುಪಿಐ ಅಪ್ಲಿಕೇಷನ್ ಹೊಂದಿರುವುದು ಅಗತ್ಯ.
ವರದಿಗಳ ಪ್ರಕಾರ, ಪ್ರಾಯೋಗಿಕವಾಗಿ ಮುಂಬೈನಲ್ಲಿ ಕಾರ್ಡ್‌ಲೆಸ್ ವಿತ್ ಡ್ರಾ ಪರೀಕ್ಷಿಸುವಾಗ ಇದು ಕಾರ್ಡ್ ಬಳಸಿ ಹಣ ವಿತ್ ಡ್ರಾ (Money Withdraw) ಮಾಡುವುದಕ್ಕಿಂತ ಕೊಂಚ ಕ್ಲಿಷ್ಟಕರವಾಗಿತ್ತು. ಕೆಲವು ಪ್ರಯೋಗಗಳ ಬಳಿಕ, ಯುಪಿಐ ಅಪ್ಲಿಕೇಶನ್ ಮೂಲಕ ಎಟಿಎಂನಿಂದ ಹಣ ಹಿಂಪಡೆಯುವುದು ಡೆಬಿಟ್ ಕಾರ್ಡ್ (Debit Card) ಬಳಸುವುದಕ್ಕಿಂತಲೂ ಸುಲಭವಾಗಿದೆ ಎಂದು ತಿಳಿದುಬಂದಿದೆ.
ಎಟಿಎಂಗಳಿಂದ ಕಾರ್ಡ್‌ಲೆಸ್ ಹಣ ಹಿಂಪಡೆಯುವಿಕೆಗಾಗಿ ಯುಪಿಐ ಅಪ್ಲಿಕೇಶನ್‌ಗಳನ್ನು ಬಳಸಲು ಇಲ್ಲಿದೆ ಹಂತ-ಹಂತದ ಪ್ರಕ್ರಿಯೆ:-
ಹಂತ 1 : ಗ್ರಾಹಕರು ಎಟಿಎಂನಲ್ಲಿ ‘ ಯುಪಿಐ ನಗದು ಹಿಂಪಡೆಯುವಿಕೆ ‘ ಆಯ್ಕೆಯನ್ನು ಆರಿಸಿ.
ಹಂತ 2: ಅಲ್ಲಿ ನೀವು ಎಷ್ಟು ಹಣವನ್ನು ಹಿಂಪಡೆಯಲು ಬಯಸುತ್ತಿರೋ ಆ ಮೊತ್ತವನ್ನು ನಮೂದಿಸಬೇಕು.
ಹಂತ 3 : ಮೊತ್ತ ನಮೂದಿಸಿದ ಬಳಿಕ ಎಟಿಎಂ ಸ್ಕ್ರೀನ್ ಮೇಲೆ ವಿಶಿಷ್ಟ ಡೈನಾಮಿಕ್ QR ಕೋಡ್ (ಸಹಿ) ಕಾಣಿಸಿಕೊಳ್ಳುತ್ತದೆ.
ಹಂತ 4 : ವಹಿವಾಟು ಮುಂದುವರಿಸಲು, ಗ್ರಾಹಕರು ಯುಪಿಐ ಅಪ್ಲಿಕೇಷನ್ ಬಳಸಿ ಈ QR ಕೋಡ್ ಅನ್ನು ಸ್ಕ್ಯಾನ್ ಮಾಡಬೇಕು.
ಹಂತ 5 : ಎಟಿಎಂನಿಂದ ಹಣವನ್ನು ಪ್ರವೇಶಿಸಲು ಯುಪಿಐ ಅಪ್ಲಿಕೇಶನ್ ಅನ್ನು ಬಳಸಿಕೊಂಡು ವಹಿವಾಟನ್ನು ದೃಢೀಕರಿಸುವ ಅಗತ್ಯವಿದೆ. ಹಾಗಾಗಿ, ಸ್ಕ್ಯಾನ್ ನಂತರ, ಗ್ರಾಹಕರು ತಮ್ಮ ಮೊಬೈಲ್ ಸಾಧನದಲ್ಲಿ ಯುಪಿಐ ಪಿನ್ ಅನ್ನು ನಮೂದಿಸಿ ದೃಢೀಕರಿಸಿ.
ವಿಶೇಷ ಸೂಚನೆ: ಈ ರೀತಿಯಾಗಿ ಕಾರ್ಡ್‌ರಹಿತ ವಹಿವಾಟು ನಡೆಸಲು ಸುಮಾರು 30 ಸೆಕೆಂಡುಗಳ ಸಮಯಾವಕಾಶ ಬೇಕಾಗಬಹುದು. ಹಾಗಾಗಿ, ತಕ್ಷಣ ಹಣ ಬರದಿದ್ದಾಗ ಗಾಬರಿಯಾಗಬೇಡಿ.
ಯುಪಿಐ-ಎಟಿಎಂ ನಗದು ಹಿಂಪಡೆಯುವಿಕೆ ಮಿತಿ:
ಯುಪಿಐ-ಎಟಿಎಂ ಕಾರ್ಡ್‌ಲೆಸ್ ಕ್ಯಾಶ್ ವಿತ್ ಡ್ರಾ ಸೌಲಭ್ಯದಲ್ಲಿ ನಿರ್ದಿಷ್ಟ ಬ್ಯಾಂಕ್‌ನ ನಿಯಮಗಳೊಂದಿಗೆ ಗರಿಷ್ಠ 10,000 ವರೆಗೆ ಹಣ ವಿತ್ ಡ್ರಾ ಮಾಡಬಹುದು. ಈ ಮಿತಿಯು ಒಂದು ಬ್ಯಾಂಕ್‌ನಿಂದ ಮತ್ತೊಂದು ಬ್ಯಾಂಕ್‌ಗೆ ಭಿನ್ನವಾಗಿರುತ್ತದೆ ಎಂಬುದನ್ನೂ ನೆನಪಿನಲ್ಲಿಡಿ.