ಮಹಿಳೆಯರಿಗೆ ತೂಕ ಇಳಿಸಿಕೊಳ್ಳಲು ಅತ್ಯುತ್ತಮ ಯೋಗಾಸನಗಳಿವು

Yoga For Weight Loss: ಇತ್ತೀಚಿನ ದಿನಗಳಲ್ಲಿ ತೂಕ ಹೆಚ್ಚಳ ಎಲ್ಲರನ್ನೂ ಬಾಧಿಸುತ್ತಿರುವ ಅತಿ ದೊಡ್ಡ ಸಮಸ್ಯೆ. ಅದರಲ್ಲೂ ಹೆಚ್ಚಿನ ಮಹಿಳೆಯರು ತಾವು ಎಷ್ಟೇ ಪ್ರಯತ್ನಿಸಿದರೂ ಕೂಡ ತೂಕ ಇಳಿಸಿಕೊಳ್ಳಲು ಸಾಧ್ಯವಾಗದೆ ಹೆಣಗಾಡುತ್ತಿರುತ್ತಾರೆ. ನೀವೂ ಅಂತಹವರಲ್ಲಿ ಒಬ್ಬರಾಗಿದ್ದರೆ ಈ ಕೆಲವು ಯೋಗಾಸನಗಳು ನೀವು ತೂಕ ಇಳಿಸಿಕೊಳ್ಳಲು ಸಹಕಾರಿ ಎಂದು ಸಾಬೀತು ಪಡಿಸಲಿವೆ.

ಹಲಗೆ ಭಂಗಿ ಅಥವಾ ಫಲಕಾಸನವು ತೂಕ ಇಳಿಸಿಕೊಳ್ಳಲು ಬಯಸುವ ಮಹಿಳೆಯರಿಗೆ ತುಂಬಾ ಪ್ರಯೋಜನಕಾರಿ ಆಗಿದೆ. ಈ ಆಸನವನ್ನು ನಿತ್ಯ ಮಾಡುವುದರಿಂದ ಅದು ಸ್ಟ್ರೆಚಿಂಗ್‌ಗೆ ಹೆಚ್ಚಿನ ಒತ್ತು ನೀಡುವುದಿಲ್ಲ. ಈ ಆಸನದ ಅಭ್ಯಾಸವು ಕೋರ್ ಸ್ನಾಯುಗಳು ಮತ್ತು ಭುಜಗಳ ಮೇಲೆ ಉತ್ತಮ ಪರಿಣಾಮವನ್ನು ಬೀರುತ್ತದೆ.

ನಿತ್ಯ ಧನುರಾಸನ ಮಾಡುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಇದು ಬೊಜ್ಜು ಕಡಿಮೆ ಮಾಡಿ ದೇಹವನ್ನು ಸಮತೋಲನದಲ್ಲಿಡುತ್ತದೆ. ಮಾತ್ರವಲ್ಲ, ಕಿಬ್ಬೊಟ್ಟೆಯ ಸ್ನಾಯುಗಳನ್ನು ಬಲಪಡಿಸುವಲ್ಲಿಯೂ ಸಹಕಾರಿ ಆಗಿದೆ. 

ಆರೋಗ್ಯ ತಜ್ಞರ ಪ್ರಕಾರ, ದೈಹಿಕ ಮತ್ತು ಮಾನಸಿಕ ಸ್ಥಿರತೆಯನ್ನು ಹೆಚ್ಚಿಸಲು ಸಹಾಯ ಮಾಡುವ  ತ್ರಿಕೋನಾಸನವನ್ನು ಮಾಡುವುದರಿಂದ ಹಲವು ರೋಗಗಳು ದೂರವಾಗುತ್ತವೆ.  ಈ ಆಸನದಿಂದ, ನೀವು ನಿಮ್ಮ ಸೊಂಟವನ್ನು ಬಲಪಡಿಸಬಹುದು. ಜೊತೆಗೆ ಸೊಂಟದ ಸುತ್ತಲಿನ ಕೊಬ್ಬನ್ನು ಕರಗಿಸಬಹುದು. 

ಸರ್ವಾಂಗಾಸನವು ಮಹಿಳೆಯರಿಗೆ ತೂಕ ಇಳಿಕೆಗೆ ಸಹಾಯಕವಾಗಿರುವುದಿಲ್ಲ. ಮಾತ್ರವಲ್ಲ ಬಂಜೆತನ ಮತ್ತು ಗರ್ಭಪಾತದಂತಹ ಸಮಸ್ಯೆಗಳನ್ನು ನಿವಾರಿಸುತ್ತದೆ. ವಿಶೇಷವೆಂದರೆ ಇದು ಮುಟ್ಟಿನ ಸಮಸ್ಯೆಗಳನ್ನು ದೂರ ಮಾಡುತ್ತದೆ.

ಅಧೋ ಮುಖ ಸ್ವನಾಸನ ಅಥವಾ ಕೆಳಮುಖವಾಗಿರುವ ನಾಯಿ ಭಂಗಿಯು ಅತ್ಯಂತ ಜನಪ್ರಿಯ ಯೋಗಾಸನಗಳಲ್ಲಿ ಒಂದಾಗಿದೆ. ಕೆಳಮುಖವಾಗಿರುವ ನಾಯಿಯ ಭಂಗಿಯು ನಿಮ್ಮ ಬೆನ್ನನ್ನು ಹಿಗ್ಗಿಸುತ್ತದೆ ಮತ್ತು ಬೆನ್ನು ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜೊತೆಗೆ ಇದು ಆರೋಗ್ಯಕರ ತೂಕ ಇಳಿಕೆಗೂ ಪ್ರಯೋಜನಕಾರಿ ಆಗಿದೆ. 

ಕುರ್ಚಿ ಭಂಗಿಯನ್ನು ಮಾಡುವುದರಿಂದ ತೂಕ ಇಳಿಕೆಗೆ ಮಾತ್ರವಲ್ಲದೆ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಅಷ್ಟೇ ಅಲ್ಲ, ಇದು ಮಲಬದ್ಧತೆ, ಅಜೀರ್ಣದಂತಹ ಸಮಸ್ಯೆ ನಿವಾರಿಸುವಲ್ಲಿಯೂ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. 

ವಾರಿಯರ್ಸ್ ಭಂಗಿಯನ್ನು ವೀರಭದ್ರಾಸನ ಎಂತಲೂ ಕರೆಯಲಾಗುತ್ತದೆ. ‘ವೀರ್’ ಎಂದರೆ ಧೈರ್ಯಶಾಲಿ (ನಾಯಕ), ಭದ್ರ ಎಂದರೆ ಸ್ನೇಹಿತ. ಯೋಗ ವಿಜ್ಞಾನದಲ್ಲಿ, ವೀರಭದ್ರಾಸನವನ್ನು ಯೋಧರ ಭಂಗಿ ಎಂದು ಕರೆಯಲಾಗುತ್ತದೆ. ಈ ಆಸನವನ್ನು ಪವರ್ ಯೋಗದ ಆಧಾರವೆಂದು ಪರಿಗಣಿಸಲಾಗಿದೆ. ವೀರಭದ್ರಾಸನ ನಿಯಮಿತ ಅಭ್ಯಾಸವು ಮಹಿಳೆಯರಿಗೆ ತುಂಬಾ ಪ್ರಯೋಜನಕಾರಿ ಆಗಿದೆ. 

ನೌಕಾಸನ ಅಥವಾ ದೋಣಿ ಭಂಗಿಯನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ನಿಮ್ಮ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತದೆ. 

ಉತ್ತನಾಸನ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ ಮತ್ತು ಮನಸ್ಸಿಗೆ ಶಾಂತಿ ಸಿಗುತ್ತದೆ. ಇದು ಕೆಳ ಬೆನ್ನಿನ ಸ್ನಾಯುಗಳು, ಮಂಡಿರಜ್ಜುಗಳು, ಕರುಗಳು ಮತ್ತು ಸೊಂಟವನ್ನು ಬಲವಾಗಿ ಮತ್ತು ಹೊಂದಿಕೊಳ್ಳುವಂತೆ ಮಾಡಲು ಸಹಾಯ ಮಾಡುತ್ತದೆ

ಮೇಲ್ಮುಖ ಶ್ವಾನ ಭಂಗಿಯನ್ನು “ಬಹಿರ್ಮುಖಿ” ಭಂಗಿಗಳು ಎಂದು ಪರಿಗಣಿಸಲಾಗುತ್ತದೆ. ಇದು ಮಹಿಳೆಯರಲ್ಲಿ ತೂಕ ಇಳಿಕೆಗೂ ಪ್ರಯೋಜನಕಾರಿ ಆಗಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. SAMAGRASUDDI ಇದನ್ನು ಖಚಿತಪಡಿಸುವುದಿಲ್ಲ. ನಿಮಗೇನಾದರೂ ಆರೋಗ್ಯ ಸಮಸ್ಯೆಗಳಿದ್ದರೆ ವೈದ್ಯರ ಸಲಹೆ ಮೇರೆಗೆ ಮಾತ್ರವೇ ಯೋಗಾಸನವನ್ನು ಮಾಡಿ. 

Source : https://zeenews.india.com/kannada/photo-gallery/these-are-the-best-yoga-poses-for-women-to-lose-weight-154397/%E0%B2%AE%E0%B3%87%E0%B2%B2%E0%B3%8D%E0%B2%AE%E0%B3%81%E0%B2%96%E0%B2%B5%E0%B2%BE%E0%B2%97%E0%B2%BF-%E0%B2%A8%E0%B2%BE%E0%B2%AF%E0%B2%BF-%E0%B2%AD%E0%B2%82%E0%B2%97%E0%B2%BF-154398

Leave a Reply

Your email address will not be published. Required fields are marked *