ಪೋಷಕರಾದವರು ಮಕ್ಕಳ ಬಗ್ಗೆ ಕಾಳಜಿವಹಿಸಬೇಕಾದ ಅಂಶಗಳಿವು.

Parenting Tips:ಸರಿಯಾದ ರೀತಿಯಲ್ಲಿ ಮಕ್ಕಳನ್ನು (Childrens) ಬೆಳೆಸುವುದು, ಅವರ ಸರ್ವತೋಮುಖ ಅಭಿವೃದ್ಧಿಗೆ ನೆರವಾಗುವುದು ಸುಲಭದ ಮಾತಲ್ಲ. ಇದು ಬಹಳಷ್ಟು ತಾಳ್ಮೆಯನ್ನು, ಪರಿಶ್ರಮವನ್ನು ಕೇಳುತ್ತದೆ. ಚಿಕ್ಕ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವ, ಅವರಲ್ಲಿ ಧನಾತ್ಮಕ ಮನೋಭಾವ ಬೆಳೆಸುವ, ವಿದ್ಯೆಗೆ ನೆರವಾಗುವ ಜವಾಬ್ದಾರಿಯುತ ಕೆಲಸ ಪೋಷಕರದ್ದು (Parents).

ನಾವು ಅಂದರೆ ಪೋಷಕರು, ನಮ್ಮ ಮಕ್ಕಳಿಗೆ ಎಲ್ಲದರಲ್ಲೂ ಉತ್ತಮವಾದದ್ದನ್ನು ಒದಗಿಸಲು ಬಯಸುತ್ತೇವೆ. ಅವರಿಗೆ ಶಿಸ್ತು, ಜೀವನ ಮೌಲ್ಯಗಳು ಮತ್ತು ಜೀವನದ ಮೂಲಕ ನ್ಯಾವಿಗೇಟ್ ಮಾಡಲು ಅಗತ್ಯವಾದ ಕೌಶಲ್ಯಗಳನ್ನು (Skill) ಕಲಿಸಲು ಪ್ರಯತ್ನಿಸುತ್ತೇವೆ. ಸುರಕ್ಷಿತವಾದ ಮತ್ತು ಒಳ್ಳೆಯ ಮಕ್ಕಳನ್ನು ಬೆಳೆಸಲು, ನಾವು ಅವರಿಗೆ ಚಿಕ್ಕ ವಯಸ್ಸಿನಲ್ಲೇ ಸಹಾನುಭೂತಿಯ ಪ್ರಾಮುಖ್ಯತೆಯನ್ನು ಕಲಿಸುವುದು ಅಗತ್ಯವಾಗಿದೆ.

“ನಮ್ಮ ಮಕ್ಕಳೊಂದಿಗೆ ಸುರಕ್ಷಿತ ಸಂಬಂಧವನ್ನು ಬೆಳೆಸುವುದು ನಾವು ಅವರಿಗೆ ಜೀವನದಲ್ಲಿ ನೀಡಬಹುದಾದ ಅತ್ಯಮೂಲ್ಯ ಕೊಡುಗೆಯಾಗಿದೆ ಎನ್ನುವ ಚಿಕಿತ್ಸಕ ಎಲಿ ಹಾರ್ವುಡ್‌ ಮಕ್ಕಳ ಮೆದುಳಿನ ಅಭಿವೃದ್ಧಿಯಲ್ಲಿ ಪೋಷಕರ ಕೊಡುಗೆಗಳ ಬಗ್ಗೆ ವಿವರಿಸಿದ್ದಾರೆ. ಹಾಗೆ ಮಕ್ಕಳನ್ನು ಸುರಕ್ಷಿತವಾಗಿ ಬೆಳೆಸಬೇಕಾದ ನೆನಪಿನಲ್ಲಿಡಬೇಕಾದ ಅಂಶಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

  • ಭಾವನೆಗಳು ಆಯ್ಕೆಗಳಲ್ಲ: ಭಾವನೆಗಳು ನರ-ರಾಸಾಯನಿಕ ಪ್ರತಿಕ್ರಿಯೆಗಳು. ಮಕ್ಕಳಿಗೆ ಅದರ ಮೇಲೆ ನಿಯಂತ್ರಣವಿರುವುದಿಲ್ಲ. ಆದ್ದರಿಂದ ಅವರು ನಕಾರಾತ್ಮಕ ಅಥವಾ ಕಷ್ಟಕರವಾದ ಭಾವನೆಯೊಂದಿಗೆ ನಮ್ಮ ಬಳಿ ಬಂದಾಗ ಅವರನ್ನು ಅವಮಾನಿಸುವ ಬದಲು, ನಾವು ಅವರಿಗೆ ಆರೋಗ್ಯಕರ ರೀತಿಯಲ್ಲಿ ಪ್ರತಿಕ್ರಿಯಿಸಬೇಕು. ಹಾಗೆ ಮಾಡಿದಾಗ ಕಷ್ಟಕರವಾದ ಭಾವನೆಗಳನ್ನ ಹೇಗೆ ನ್ಯಾವಿಗೇಟ್‌ ಮಾಡಬೇಕು..? ಅಂಥ ಪರಿಸ್ಥಿತಿಗಳನ್ನು ಹೇಗೆ ಎದುರಿಸಬೇಕು ಎಂದು ಮಕ್ಕಳು ಕಲಿಯುತ್ತಾರೆ.
  • ಪೋಷಕರೊಂದಿಗಿನ ಸಂಬಂಧ : ಮಕ್ಕಳ ಮೆದುಳಿನ ಕಾರ್ಯಚಟುವಟಿಕೆಗಳ ಮೇಲೆ ಪೋಷಕರ ಪ್ರಭಾವ ಹೆಚ್ಚಾಗಿರುತ್ತದೆ. ಮಕ್ಕಳು ತಮ್ಮ ಪೋಷಕರೊಂದಿಗೆ ಹಂಚಿಕೊಳ್ಳುವ ಸಂಬಂಧದ ಆಧಾರದ ಮೇಲೆ ಅವರ ಮೆದುಳು ಮತ್ತು ಮೆದುಳಿನ ಕಾರ್ಯಗಳು ಅಭಿವೃದ್ಧಿ ಹೊಂದುತ್ತವೆ. ಅವರ ಮನಸ್ಸಿನ ಮೇಲೆ ಆರೋಗ್ಯಕರ ಪರಿಣಾಮ ಬೀರಲು ನಾವು ಅವರೊಂದಿಗೆ ಪ್ರೀತಿ, ಕಾಳಜಿ ಮತ್ತು ವಾತ್ಸಲ್ಯದಿಂದ ನಡೆದುಕೊಳ್ಳುವುದು ಮುಖ್ಯ. ನಾವು ಹೇಳಿಕೊಡುವ ಪಾಠಗಳೇ ಅವರ ಮನಸ್ಸಿನಲ್ಲಿ ಬೇರೂರುತ್ತವೆ.
  • ಉದ್ವೇಗ ನಿಯಂತ್ರಣ ಕೌಶಲ್ಯ: ಜನರು ಉದ್ವೇಗ ನಿಯಂತ್ರಣ ಕೌಶಲ್ಯವನ್ನು ಬೆಳೆಸಿಕೊಳ್ಳಲು ವರ್ಷಗಳನ್ನು ತೆಗೆದುಕೊಳ್ಳುತ್ತಾರೆ. ಅದರಲ್ಲೂ ಮಕ್ಕಳು ತಮ್ಮ ಭಾವನೆಗಳನ್ನು, ಉದ್ವೇಗಗಳನ್ನು ನಿಯಂತ್ರಿಸಲು ಕಷ್ಟಪಡಬಹುದು. ಇದು ಅವರ ಭಾವನಾತ್ಮಕ ಮತ್ತು ದೈಹಿಕ ಸ್ಥಿತಿಯನ್ನು ಅವಲಂಬಿಸಿರುತ್ತದೆ ಎಂದು ಅರ್ಥ ಮಾಡಿಕೊಳ್ಳಬೇಕು. ಅದನ್ನು ಬೆಳೆಸಿಕೊಳ್ಳುವಲ್ಲಿ ನಾವು ಅವರಿಗೆ ನೆರವಾಗಬೇಕು.
  • ಪರಿಪೂರ್ಣತೆಗಿಂತ ಸರಿಪಡಿಸುವುದು ಮುಖ್ಯ: ನಾವು ಪರಿಪೂರ್ಣ ಪೋಷಕರಾಗಬೇಕು ಎಂದುಕೊಂಡಾಗ ಅದರತ್ತಲೇ ಗಮನ ಹರಿಸುತ್ತೇವೆ. ಆದರೆ ಪರಿಪೂರ್ಣತೆಗಿಂತ ಮಕ್ಕಳನ್ನು ಸರಿಪಡಿಸುವುದು ಮುಖ್ಯ ಎಂದು ನಾವು ಅರಿತುಕೊಳ್ಳಬೇಕು. ಅವರಿಗೆ ಪರಾನುಭೂತಿ ಕಲಿಸಬೇಕು. ತಪ್ಪುಗಳನ್ನು ಮಾಡುವುದು ಸಹಜವಾದರೂ ಅದನ್ನು ಸರಿಪಡಿಸುವ ಮಾರ್ಗವನ್ನು ಕಂಡುಹಿಡಿಯುವುದು ಹೆಚ್ಚು ಮುಖ್ಯವಾಗಿದೆ.
  • ನಮ್ಮ ಕೆಲಸಗಳನ್ನು ನೋಡಿ ಕಲಿಯುತ್ತಾರೆ ಮಕ್ಕಳು :ನಮ್ಮ ಮಕ್ಕಳಿಗೆ ಭರವಸೆಗಳನ್ನು ನೀಡುವ ಬದಲು, ನಾವು ಮಾಡುವ ಕಾರ್ಯಗಳತ್ತ ಗಮನ ಹರಿಸಬೇಕು. ಮಕ್ಕಳು ತಮ್ಮ ಹೆತ್ತವರನ್ನು ಗಮನಿಸುವುದರ ಮೂಲಕ ಬಹಳಷ್ಟು ಕಲಿಯುತ್ತಾರೆ. ನಮ್ಮ ಮಕ್ಕಳು ಗೌರವಾನ್ವಿತರಾಗಬೇಕು, ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು, ನಯವಾಗಿ ಮಾತನಾಡಬೇಕು… ನಿಯಂತ್ರಣದಲ್ಲಿರಬೇಕೆಂದು ನಾವು ಬಯಸಿದರೆ, ನಾವು ಅದೇ ರೀತಿ ಅಭ್ಯಾಸ ಮಾಡಲು ಪ್ರಾರಂಭಿಸಬೇಕು.

ಒಟ್ಟಾರೆಯಾಗಿ ಸರಿಯಾದ ರೀತಿಯಲ್ಲಿ ಮಕ್ಕಳನ್ನು ಬೆಳೆಸುವುದು ಸುಲಭವಲ್ಲ. ನಮ್ಮ ನಡೆ ನುಡಿಯನ್ನು ಮಕ್ಕಳು ಅನುಸರಿಸುವಾಗ ನಮ್ಮ ಪ್ರತಿ ಹೆಜ್ಜೆಯಲ್ಲೂ ಅಷ್ಟೇ ಎಚ್ಚರಿಕೆ ಮುಖ್ಯ. ಅವರೊಂದಿಗೆ ನಾವು ತಾಳ್ಮೆಯಿಂದ, ಗೌರವದಿಂದ ಇದ್ದರೆ ಅವರೂ ನಮ್ಮೊಂದಿಗೆ ಹಾಗೆಯೇ ನಡೆದುಕೊಳ್ಳುತ್ತಾರೆ ಎಂಬುದನ್ನು ಪೋಷಕರು ಅರ್ಥ ಮಾಡಿಕೊಳ್ಳಬೇಕು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *