Diabetes Signs: ದೇಹದಲ್ಲಿ ಕೆಲವೊಂದು ಬದಲಾವಣೆಗಳು ಕಾಣಿಸಿಕೊಂಡರೆ ಅವು ಮಧುಮೇಹದ ಮುನ್ಸೂಚನೆ ಎಂಬುದನ್ನು ತಿಳಿಯಬೇಕು. ಅಂತಹ ಬದಲಾವಣೆಗಳು ಯಾವುವು ಎಂಬುದನ್ನು ತಿಳಿಯೋಣ.
- ದೇಹದಲ್ಲಿ ಕೆಲವೊಂದು ಬದಲಾವಣೆಗಳು ಕಾಣಿಸಿಕೊಂಡರೆ ಅವು ಮಧುಮೇಹದ ಮುನ್ಸೂಚನೆ
- ಭಾರತವನ್ನು ಮಧುಮೇಹದ ರಾಜಧಾನಿ ಎಂದು ಕರೆಯಲಾಗುತ್ತದೆ.
- ಹಠಾತ್ ಕಣ್ಣಿನ ನೋವು ಡಯಾಬಿಟಿಕ್ ರೆಟಿನೋಪತಿಯ ಸಂಕೇತ
Diabetes Signs: ಮಧುಮೇಹವು ಗಂಭೀರ ಕಾಯಿಲೆಯಾಗಿದ್ದು, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಇನ್ಸುಲಿನ್ ಒಂದು ಹಾರ್ಮೋನ್ ಆಗಿದ್ದು, ಇದು ರಕ್ತದಲ್ಲಿನ ಸಕ್ಕರೆಯನ್ನು ಜೀವಕೋಶಗಳಿಗೆ ಪ್ರವೇಶಿಸಲು ಸಹಾಯ ಮಾಡುತ್ತದೆ. ಅಂದಹಾಗೆ ಭಾರತವನ್ನು ಮಧುಮೇಹದ ಪ್ರಮಾಣ ಹೆಚ್ಚಾಗಿದ್ದು, ಇದೇ ಕಾರಣಕ್ಕೆ ಭಾರತವನ್ನು ಮಧುಮೇಹದ ರಾಜಧಾನಿ ಎಂದು ಕರೆಯಲಾಗುತ್ತದೆ. ಇನ್ನು ದೇಹದಲ್ಲಿ ಕೆಲವೊಂದು ಬದಲಾವಣೆಗಳು ಕಾಣಿಸಿಕೊಂಡರೆ ಅವು ಮಧುಮೇಹದ ಮುನ್ಸೂಚನೆ ಎಂಬುದನ್ನು ತಿಳಿಯಬೇಕು. ಅಂತಹ ಬದಲಾವಣೆಗಳು ಯಾವುವು ಎಂಬುದನ್ನು ತಿಳಿಯೋಣ.
ಮಂದ ದೃಷ್ಟಿ
ಮಧುಮೇಹವು ಕಣ್ಣುಗಳ ಸ್ನಾಯುಗಳು ಮತ್ತು ನರಗಳಿಗೆ ಹಾನಿಯನ್ನುಂಟುಮಾಡುತ್ತದೆ, ಇದು ಮಂದ ದೃಷ್ಟಿಗೆ ಕಾರಣವಾಗಬಹುದು. ಈ ಮಸುಕು ತಾತ್ಕಾಲಿಕ ಅಥವಾ ಶಾಶ್ವತವಾಗಿರಬಹುದು.
ಕಣ್ಣು ನೋವು
ಹಠಾತ್ ಕಣ್ಣಿನ ನೋವು ಡಯಾಬಿಟಿಕ್ ರೆಟಿನೋಪತಿಯ ಸಂಕೇತವಾಗಿರುವ ಸಾಧ್ಯತೆ ಇದೆ. ಇದು ಕಣ್ಣುಗಳ ರಕ್ತನಾಳಗಳನ್ನು ಹಾನಿಗೊಳಿಸುತ್ತದೆ.
ಕಪ್ಪು ಕಲೆಗಳು
ಕಣ್ಣುಗಳಲ್ಲಿ ಕಪ್ಪು ಕಲೆಗಳು ಕಾಣಿಸಿಕೊಳ್ಳುವುದು ಕೂ ಮಧುಮೇಹದ ಸಂಕೇತವಾಗಿದೆ, ಇದು ಕಣ್ಣುಗಳಲ್ಲಿ ರಕ್ತಸ್ರಾವದ ವಿಧವಾಗಿದ್ದು, ಎಚ್ಚರ ವಹಿಸುವುದು ಅತೀ ಅಗತ್ಯ.
ಬಣ್ಣಲ್ಲಿ ಬದಲಾವಣೆ
ಮಧುಮೇಹವು ಬಣ್ಣಗಳನ್ನು ನೋಡುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ, ಇದರಿಂದಾಗಿ ಬಣ್ಣಗಳು ಮಂದ ಅಥವಾ ಕಡಿಮೆ ಪ್ರಕಾಶಮಾನವಾಗಿ ಕಾಣುತ್ತವೆ.
ಒಣ ಕಣ್ಣುಗಳು
ಮಧುಮೇಹ ವಕ್ಕರಿಸುವ ಮುನ್ಸೂಚನೆಗಳಲ್ಲಿ ಡ್ರೈ ಐ ಸಮಸ್ಯೆಯೂ ಒಂದು. ಇದು ಕಣ್ಣುಗಳಲ್ಲಿ ಒಣಗುವಿಕೆ ಮತ್ತು ತುರಿಕೆಯನ್ನುಂಟು ಮಾಡುತ್ತದೆ.
ಕಣ್ಣಿನ ಆಯಾಸ
ಮಧುಮೇಹದಿಂದಾಗಿ, ಕಣ್ಣಿನ ಸ್ನಾಯುಗಳು ಆಯಾಸವನ್ನು ಅನುಭವಿಸುತ್ತವೆ. ಜೊತೆಗೆ ತಲೆನೋವಿನಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.
ಈ ಯಾವುದೇ ರೋಗಲಕ್ಷಣಗಳನ್ನು ನೀವು ಗಮನಿಸಿದರೆ, ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ. ಮಧುಮೇಹವನ್ನು ನಿಯಂತ್ರಿಸುವ ಮೂಲಕ ಮತ್ತು ನಿಮ್ಮ ಕಣ್ಣುಗಳನ್ನು ನಿಯಮಿತವಾಗಿ ಪರೀಕ್ಷಿಸುವ ಮೂಲಕ ಈ ಸಮಸ್ಯೆಗಳ ಅಪಾಯದಿಂದ ತಪ್ಪಿಸಿಕೊಳ್ಳಬಹುದು.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಪರ್ಯಾಯವಾಗಿಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಈ ಮಾಹಿತಿಯ ಹೊಣೆಯನ್ನು ಸಮಗ್ರ ಸುದ್ದಿ ಖಚಿತಪಡಿಸಿಕೊಳ್ಳುವುದಿಲ್ಲ.
Source : https://zeenews.india.com/kannada/health/these-changes-in-the-eye-are-a-sign-of-diabetes-223575