ಮಕ್ಕಳನ್ನು ಕನ್ನಡಕದಿಂದ ದೂರವಿರಿಸಲು, ದೃಷ್ಟಿ ಸುಧಾರಣೆಗೆ ಡಯಟ್ನಲ್ಲಿ ಇರಲೇಬೇಕು ಈ ಆಹಾರಗಳು

Health Tips: : ಬದಲಾದ ಜೀವನಶೈಲಿಯಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳು ಕನ್ನಡಕ ಧರಿಸುತ್ತಾರೆ. ಇದಕ್ಕೆ ಮುಖ್ಯ ಕಾರಣ ಗ್ಯಾಜೆಟ್ಗಳ ಅತಿಯಾದ ಬಳಕೆಯಿಂದಾಗಿ ಕಣ್ಣುಗಳು ದುರ್ಬಲಗೊಳ್ಳುತ್ತದೆ. ಹಾಗಾಗಿಯೇ, ಕನ್ನಡಕ ಅನಿವಾರ್ಯವಾಗಿರುತ್ತದೆ. ಆದರೆ, ನಿಮ್ಮ ಡಯಟ್ನಲ್ಲಿ ಕೆಲವು ಆಹಾರ ಪದಾರ್ಥಗಳನ್ನು ಸೇರಿಸುವ ಮೂಲಕ ದೃಷ್ಟಿಯನ್ನು ಸುಧಾರಿಸಬಹುದು ಎಂದು ನಿಮಗೆ ತಿಳಿದಿದೆಯೇ? 

ಪ್ರಸ್ತುತ, ಗ್ಯಾಜೆಟ್ ಗಳ ಅತಿಯಾದ ಬಳಕೆಯಿಂದಾಗಿ ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಕನ್ನಡಕ ಧರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ದುರ್ಬಲ ದೃಷ್ಟಿಯಿಂದಾಗಿ ಉದ್ಭವಿಸಿರುವ ಈ ಸಮಸ್ಯೆಗಳ ಬಗ್ಗೆ ಸರಿಯಾಗಿ ಕಾಳಜಿ ವಹಿಸದಿದ್ದರೆ, ಸಾರ್ವಕಾಲಿಕವಾಗಿ ಕನ್ನಡಕ ಧರಿಸಬೇಕಾಗುತ್ತದೆ. ಇದನ್ನು ತಪ್ಪಿಸಲು ಡಯಟ್ನಲ್ಲಿ ಕೆಲವು ಆಹಾರಗಳನ್ನು ಸೇರಿಸುವುದು ತುಂಬಾ ಅಗತ್ಯವಾಗಿದೆ. ಅಂತಹ ಆಹಾರಗಳೆಂದರೆ… 

ಕ್ಯಾರೆಟ್:  ಮಕ್ಕಳ ದಿನ ನಿತ್ಯದ ಡಯಟ್ನಲ್ಲಿ ಕ್ಯಾರೆಟ್ ಅನ್ನು ಸೇವಿಸುವುದರಿಂದ ದೃಷ್ಟಿ ದೋಷವನ್ನು ನಿವಾರಿಸಬಹುದು. ಕ್ಯಾರೆಟ್‌ನಿಂದ ತಯಾರಿಸಿದ ವಸ್ತುಗಳನ್ನು ಮಕ್ಕಳ ಆಹಾರದಲ್ಲಿ ಸೇರಿಸಬೇಕು. ವಾಸ್ತವವಾಗಿ, ಕ್ಯಾರೆಟ್ ನಲ್ಲಿ ವಿಟಮಿನ್ ಎ ಕಂಡು ಬರುತ್ತದೆ. ಇದು ಕಣ್ಣಿನ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. 

ಕಿತ್ತಳೆ ಹಣ್ಣು: ಕಣ್ಣಿನ ತಜ್ಞರ ಪ್ರಕಾರ, ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಹೇರಳವಾಗಿ ಕಂಡು ಬರುತ್ತದೆ. ಇದರಲ್ಲಿರುವ ಪೋಷಕಾಂಶಗಳು ದೃಷ್ಟಿಯನ್ನು ಸುಧಾರಿಸಲು ಸಹಕಾರಿ ಆಗಿರುವುದರಿಂದ ನಿತ್ಯ ನಿಮ್ಮ ಆಹಾರದಲ್ಲಿ ಅದರಲ್ಲೂ ವಿಶೇಷವಾಗಿ ಮಕ್ಕಳ ಆಹಾರದಲ್ಲಿ ಕಿತ್ತಳೆಹಣ್ಣನ್ನು ಸೇರಿಸುವುದರಿಂದ ದೃಷ್ಟಿಯನ್ನು ಬಳಪಡಿಸಬಹುದು.

ಪರಂಗಿ ಹಣ್ಣು:  ಪರಂಗಿ ಹಣ್ಣಿನಲ್ಲಿ  ವಿಟಮಿನ್ ಎ ಮತ್ತು ವಿಟಮಿನ್ ಸಿ ಹೇರಳವಾಗಿ ಕಂಡು ಬರುತ್ತದೆ. ಹಾಗಾಗಿ, ಮಕ್ಕಳಲ್ಲಿ ದೃಷ್ಟಿ ದೋಷವನ್ನು ನಿವಾರಿಸಿ, ಅವರ ದೃಷ್ಟಿಯನ್ನು ಸುಧಾರಿಸಲು ಪರಂಗಿ ಹಣ್ಣು ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು. 

ಬೀನ್ಸ್:  ಬೀನ್ಸ್ ನಲ್ಲಿ ಕಂಡು ಬರುವ ಕೆಲವು ಪೋಷಕಾಂಶಗಳು ದೃಷ್ಟಿ ದೋಷವನ್ನು ನಿವಾರಿಸಲು ತುಂಬಾ ಪ್ರಯೋಜನಕಾರಿ ಆಗಿದೆ. 

ಬ್ರೊಕೊಲಿ:  ಬ್ರೊಕೊಲಿಯಲ್ಲಿ ವಿಟಮಿನ್ ಗಳು ಉತ್ತಮ ಪ್ರಮಾಣದಲ್ಲಿ ಕಂಡು ಬರುತ್ತದೆ. ಪ್ರತಿ ದಿನ ಬ್ರೊಕೊಲಿ ಸೇವಿಸುವುದರಿಂದ ಇದು ತೂಕ ಇಳಿಕೆಯನ್ನು ಉತ್ತೇಜಿಸುವ ಜೊತೆಗೆ ದೃಷ್ಟಿಯನ್ನು ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ. 

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *