ಮಳೆಗಾಲದಲ್ಲಿ ಕಾಡುವ ನೆಗಡಿ, ಕೆಮ್ಮಿಗೆ ರಾಮಬಾಣ ಈ ಆಯುರ್ವೇದ ಕಷಾಯ.

ಬೇಸಿಗೆ ಕಾಲ ಕಳೆದು ಈಗಾಗಲೇ ಮಳೆಗಾಲ ಪ್ರಾರಂಭವಾಗಿರುವುದರಿಂದ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಶುರುವಾಗುತ್ತವೆ. ಮುಖ್ಯವಾಗಿ ನೆಗಡಿ, ಕೆಮ್ಮು ಇಂತಹ ಸಮಸ್ಯೆಗಳು ಇದ್ದೇ ಇರುತ್ತವೆ. ಯಾರಿಗೆ ರೋಗ ನಿರೋಧಕ ಶಕ್ತಿಯ ಕೊರತೆ ಇರುತ್ತದೆ, ಅವರಿಗೆ ಈ ಸಮಸ್ಯೆಗಳು ಬೇಗನೆ ಕಾಡುತ್ತವೆ. ಆದರೆ ಇದಕ್ಕೆಲ್ಲ ಆಯುರ್ವೇದದಲ್ಲಿ ಸುಲಭ ಪರಿಹಾರವಿದೆ.

ಗಿಡಮೂಲಿಕೆಗಳು ಮತ್ತು ಮಸಾಲೆ ಪದಾರ್ಥಗಳು

ಮನೆಯಲ್ಲಿ ಹಲವು ಬಗೆಯ ಗಿಡಮೂಲಿಕೆಗಳು ಮತ್ತು ಮಸಾಲೆ ಪದಾರ್ಥಗಳನ್ನು ಮಿಕ್ಸ್ ಮಾಡಿ ತಯಾರು ಮಾಡುವ ಆಯುರ್ವೇದ ಚಹಾ ಇದಾಗಿದ್ದು, ವಿವಿಧ ರೀತಿಯ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಅತ್ಯಂತ ಕಡಿಮೆ ಖರ್ಚಿನಲ್ಲಿ ಇದನ್ನು ತಯಾರಿಸಿ, ಸೇವಿಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡು ಕಾಯಿಲೆಗಳನ್ನು ದೂರ ಮಾಡಿಕೊಳ್ಳಬಹುದು.

ಕೆಮ್ಮು ಮತ್ತು ನೆಗಡಿಗೆ ಇದೊಂದು ಆಯುರ್ವೇದ ಡ್ರಿಂಕ್ ಸಾಕು

ಇಲ್ಲಿ ತಿಳಿಸಿರುವ ಆಯುರ್ವೇದ ಡ್ರಿಂಕ್ ಕೆಮ್ಮು ಹಾಗೂ ನೆಗಡಿಯಿಂದ ನಮ್ಮನ್ನು ರಕ್ಷಿಸುವುದರ ಜೊತೆಗೆ ಗಂಟಲಿನ ಆರೋಗ್ಯಕ್ಕೆ ಸಂಬಂಧಪಟ್ಟ ಹಾಗೆ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.

ಈ ಆಯುರ್ವೇದ ಚಹಾದ ಬಗ್ಗೆ ಮತ್ತಷ್ಟು ತಿಳಿದುಕೊಳ್ಳಬೇಕು ಎಂದರೆ

  • ಇದೊಂದು ಆಂಟಿ ವೈರಲ್ ಗುಣಲಕ್ಷಣಗಳನ್ನು ಒಳಗೊಂಡಿರುವ ವಿಶೇಷವಾಗಿ ಮಳೆಗಾಲ ಹಾಗೂ ಚಳಿಗಾಲದಲ್ಲಿ ನೆಗಡಿ ಕೆಮ್ಮಿನ ವಿರುದ್ಧ ಹೋರಾಡುವ ಆರೋಗ್ಯಕರ ಡ್ರಿಂಕ್ ಆಗಿದೆ.
  • ಇದರಲ್ಲಿ ಬಳಕೆ ಮಾಡುವ ಆಯುರ್ವೇದ ಗಿಡಮೂಲಿಕೆಗಳು ನಮ್ಮ ದೇಹದಲ್ಲಿ ಸಿಂಬಳವನ್ನು ಕಡಿಮೆ ಮಾಡುತ್ತವೆ.
  • ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಾಗಿಸಲು ಅನುಕೂಲಕ್ಕೆ ಬರುವ ಆಯುರ್ವೇದ ಮನೆ ಮದ್ದು ಇದಾಗಿದ್ದು, ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಸೋಂಕುಗಳನ್ನು ದೂರ ಮಾಡಲು ನೆರವಾಗುತ್ತದೆ.
  • ಅತ್ಯಂತ ಬೇಗ ನೆಗಡಿ, ಕೆಮ್ಮು ಮತ್ತು ಸೋಂಕಿಗೆ ಒಳಗಾದ ಗಂಟಲಿನ ಸಮಸ್ಯೆ ಪರಿಹಾರವಾಗುತ್ತದೆ.
  • ಮೇಲೆ ಹೇಳಿದ ಎಲ್ಲ ಗುಣಲಕ್ಷಣಗಳ ಜೊತೆಗೆ ಇದೊಂದು ಆಂಟಿ ಇಂಪ್ಲಾಮೆಟರಿ ಮತ್ತು ಆಂಟಿ ಸೆಪ್ಟಿಕ್ ಗುಣಲಕ್ಷಣಗಳನ್ನು ಒಳಗೊಂಡಿರುವ ಗಿಡಮೂಲಿಕೆ ಚಹಾ ಆಗಿದೆ.
  • ನೆಗಡಿ, ಕೆಮ್ಮಿನ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ಕುಡಿಯುವಂತಹ ಈ ಆಯುರ್ವೇದ ಚಹಾ ನಮ್ಮ ದೇಹವನ್ನು ಮುಂದಿನ ದಿನಗಳಲ್ಲಿ ಶೀತದ ಪ್ರಭಾವಕ್ಕೆ ಒಳಗಾಗದಂತೆ ನೋಡಿಕೊಳ್ಳುತ್ತದೆ.

ಈ ಆಯುರ್ವೇದ ಚಹಾವನ್ನು ಮನೆಯಲ್ಲಿ ತಯಾರಿಸುವುದು ಹೇಗೆ?

ಅತ್ಯಂತ ಸುಲಭವಾಗಿ ಈ ಆಯುರ್ವೇದ ಚಹಾವನ್ನು ತಯಾರಿಸ ಬಹುದು. ಅದಕ್ಕೆ ಬೇಕಾಗಿರುವ ಸಾಮಗ್ರಿಗಳು ಎಂದರೆ, ನೀರು, ತುರಿದ ತಾಜಾ ಶುಂಠಿ, ಲವಂಗ, ಕಾಳುಮೆಣಸು, ತುಳಸಿ ಎಲೆಗಳು, ಜೇನುತುಪ್ಪ ಹಾಗೂ ದಾಲ್ಚಿನ್ನ

ಆರೋಗ್ಯಕರವಾದ ಈ ಆಯುರ್ವೇದ ಚಹಾವನ್ನು ತಯಾರು ಮಾಡುವ ಬಗೆ

  • ಮೊದಲಿಗೆ ಒಂದು ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ಎರಡು ಕಪ್ ನೀರು ಹಾಕಿ ಕುದಿಯಲು ಬಿಡಿ.
  • ಈಗ ಶುಂಠಿ, ಲವಂಗ, ಕಪ್ಪು ಕಾಳುಮೆಣಸು ಮತ್ತು ದಾಲ್ಚಿನ್ನಿ ಯನ್ನು ಜಜ್ಜಿ ಪೇಸ್ಟ್ ತರಹ ಮಾಡಿಕೊಳ್ಳಿ.
  • ಈಗ ಕುದಿಯುವ ನೀರಿಗೆ ತುಳಸಿ ಎಲೆಗಳ ಜೊತೆ ಈ ಪೇಸ್ಟನ್ನು ಸೇರಿಸಿ.
  • ಈ ಮಿಶ್ರಣವನ್ನು ಸ್ವಲ್ಪ ಹೊತ್ತು ಕುದಿಸಿ.
  • ಮೀಡಿಯಂ ಉರಿಯಲ್ಲಿ 20 ನಿಮಿಷಗಳ ಕಾಲ ಎಲ್ಲವನ್ನು ಚೆನ್ನಾಗಿ ಕುದಿಸಿ.
  • ಈಗ ಇದನ್ನು ಒಂದು ಗ್ಲಾಸ್ ಗೆ ಸೋಸಿಕೊಂಡು ಅದಕ್ಕೆ ಕೆಲವು ಹನಿಗಳಷ್ಟು ಜೇನುತುಪ್ಪ ಸೇರಿಸಿ​

Source : https://vijaykarnataka.com/lifestyle/home-remedies/drink-this-ayurvedic-kadha-to-get-rid-of-cold-and-cough-in-monsoon-season/articleshow/111165726.cms?story=5

Views: 0

Leave a Reply

Your email address will not be published. Required fields are marked *