ನವದೆಹಲಿ : ಸೌಂದರ್ಯ ಸ್ಪರ್ಧೆಗಳಲ್ಲಿ ವಿಜೇತರಾಗಲು 16ರಿಂದ 28 ವರ್ಷ ವಯಸ್ಸಿನವರ ಅಗತ್ಯವಿಲ್ಲ ಎಂದು 60 ವರ್ಷದ ಮಹಿಳೆಯೊಬ್ಬರು ಸಾಬೀತುಪಡಿಸಿದ್ದಾರೆ. 60ರ ಹರೆಯದಲ್ಲೂ ಸೌಂದರ್ಯ ಸ್ಪರ್ಧೆಗಳಲ್ಲಿ ವಿಜೇತರಾಗಿ ಇತಿಹಾಸ ಸೃಷ್ಟಿಸಿದ್ದಾರೆ .
![](https://samagrasuddi.co.in/wp-content/uploads/2024/04/image-236.png)
ಅರ್ಜೆಂಟೀನಾದ ಬ್ಯೂನಸ್ ಐರಿಸ್ ಪ್ರಾಂತ್ಯದ ರಾಜಧಾನಿ ಲಾ ಪ್ಲಾಟಾದಿಂದ ಅಲೆಜಾಂಡ್ರಾ ಮಾರಿಸಾ ರೋಡ್ರಿಗಸ್ ಅವರು ವಿಶ್ವ ಸುಂದರಿ ಬ್ಯೂನಸ್ ಐರಿಸ್ 2024 ಪ್ರಶಸ್ತಿಯನ್ನು ಗೆದ್ದಿದ್ದಾರೆ. ಆಕೆಯ ನಗು ಮತ್ತು ಆಕರ್ಷಕ ವರ್ತನೆಯು ತೀರ್ಪುಗಾರರ ಮತ್ತು ಪ್ರೇಕ್ಷಕರ ಹೃದಯಗಳನ್ನು ಗೆದ್ದಿದೆ .
ಅಲೆಜಾಂಡ್ರಾ ಮಾರಿಸಾ ರೋಡ್ರಿಗಸ್ ಅವರು ಸೌಂದರ್ಯ ರಾಣಿ ಮಾತ್ರವಲ್ಲದೆ, ಹಿರಿಯ ವಕೀಲರು ಮತ್ತು ಪತ್ರಕರ್ತೆಯೂ ಹೌದು. ಈ ಮಧ್ಯೆ ಆಕೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಸ್ಪರ್ಧೆಯಲ್ಲಿ ವಿಜೇತರಾದ ನಂತರ ಅಲೆಜಾಂಡ್ರಾ ಮಾರಿಸಾ ರೋಡ್ರಿಗಸ್ ಅವರು ಈ ಸ್ಪರ್ಧೆಯಲ್ಲಿ ವಿಜೇತರಾಗಲು ತುಂಬಾ ಸಂತೋಷವಾಗಿದೆ. ಸೌಂದರ್ಯ ಸ್ಪರ್ಧೆಗಳಲ್ಲಿ ಈ ಹೊಸ ಮಾದರಿಯನ್ನು ಪ್ರತಿನಿಧಿಸಲು ನಾನು ರೋಮಾಂಚನಗೊಂಡಿದ್ದೇನೆ. ಯಾಕೆಂದರೆ ಹೆಣ್ಣಿನ ದೈಹಿಕ ಸೌಂದರ್ಯವಷ್ಟೇ ಅಲ್ಲ ಇತರ ಮೌಲ್ಯಗಳೊಂದಿಗೆ ಹೊಸ ವೇದಿಕೆಯನ್ನು ಆರಂಭಿಸುತ್ತಿದ್ದೇವೆ ಎಂದಿದ್ದಾರೆ .
ಬ್ಯೂನೆಸ್ ಐರಿಸ್ ಪ್ರಾಂತ್ಯದ ಪರವಾಗಿ ಮೇ 2024ರಲ್ಲಿ ನಡೆಯಲಿರುವ ಮಿಸ್ ಯೂನಿವರ್ಸ್ ಅರ್ಜೆಂಟಿನ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ವಿಶ್ವ ಸುಂದರಿ ವಿಶ್ವವೇದಿಕೆಯಲ್ಲಿ ರೋಡ್ರಿಗಸ್ ಅರ್ಜೆಂಟೀನಾದ ಧ್ವಜವನ್ನು ಹಾರಿಸುತ್ತಾರೆ. ಈ ಸ್ಪರ್ಧೆಗಳು 2024 ಸೆಪ್ಟೆಂಬರ್ 28 ರಂದು ಮೆಕ್ಸಿಕೋದಲ್ಲಿ ನಡೆಯಲಿದೆ.
ವಿಶ್ವ ಸುಂದರಿ ಸ್ಪರ್ಧೆಗಳಲ್ಲಿ ಭಾಗವಹಿಸಲು ವಯಸ್ಸಿನ ಮಿತಿಯಿತ್ತು 18 ರಿಂದ 28 ವರ್ಷದೊಳಗಿನ ಅವಿವಾಹಿತ ಮತ್ತು ಮಕ್ಕಳಿಲ್ಲದ ಜನರು ಮಾತ್ರ ಭಾಗವಹಿಸಬೇಕಾಗಿತ್ತು. ಇದೀಗ 18 ವರ್ಷ ಮೇಲ್ಪಟ್ಟ ಯಾವುದೇ ಮಹಿಳೆ ಸ್ಪರ್ಧಿಸಲು ಭಾಗವಹಿಸಲು ಅರ್ಹರಾಗಿರುತ್ತಾರೆ.
Source : https://www.vijayavani.net/60-year-old-woman-wins-miss-universe-buenos-aires-pageant
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group: https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1