ಕೀಲು, ಮೊಣಕಾಲು ನೋವಿನಿಂದ ಬಳಲುತ್ತಿದ್ದವರಿಗೆ ಈ ಎಲೆ ರಾಮಬಾಣ .

  • ಎಕ್ಕದ ಗಿಡಗಳು ಸಾಮಾನ್ಯವಾಗಿ ಪೊದೆಗಳಲ್ಲಿ ಕಂಡು ಬರುತ್ತದೆ.
  • ಇದರ ಎಲೆಗಳನ್ನು ಅನೇಕ ರೀತಿಯ ಸಮಸ್ಯೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ
  • ಕೀಲು, ಮೊಣಕಾಲು ನೋವಿನಿಂದ ಬಳಲುತ್ತಿದ್ದವರಿಗೆ ಈ ಎಲೆ ರಾಮಬಾಣ ಪರಿಹಾರ

Remedies for Joint pain : ಎಕ್ಕದ ಗಿಡಗಳು ಸಾಮಾನ್ಯವಾಗಿ ಪೊದೆಗಳಲ್ಲಿ ಕಂಡು ಬರುತ್ತದೆ. ಈ ಎಲೆ ವಿಷಕಾರಿ ಎಂದು ಹೇಳುತ್ತಾರೆ. ಆದರೆ, ಆಯುರ್ವೇದದಲ್ಲಿ ಇದರ ಎಲೆಗಳನ್ನು ಅನೇಕ ರೀತಿಯ ಸಮಸ್ಯೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ. ಎಕ್ಕದ ಎಲೆಯು ನೋಡಲು ತಿಳಿ ಹಸಿರು ಮತ್ತು ಮೇಲ್ಭಾಗದಲ್ಲಿ ತಿಳಿ ಬಿಳಿಯಾಗಿ ಕಾಣುತ್ತದೆ. ಇತರ ಎಲೆಗಳಿಗೆ ಹೋಲಿಸಿದರೆ ಇದು ಹೆಚ್ಚು ದಪ್ಪ. ಈ ಎಲೆ ಒಡೆದರೆ ಇದರಲ್ಲಿ ಹಾಲು ಬರುತ್ತದೆ. ಕೀಲು ಮತ್ತು ಮೊಣಕಾಲು ನೋವಿನಿಂದ ಬಳಲುತ್ತಿದ್ದವರಿಗೆ ಈ ಎಲೆ ರಾಮಬಾಣ ಪರಿಹಾರ ಎಂದೇ ಹೇಳಲಾಗುತ್ತದೆ. ಈ ಎಲೆಗಳನ್ನು ಬಳಸುವ ಮೂಲಕ ನೋವನ್ನು ನಿಮಿಷಗಳಲ್ಲಿ ನಿವಾರಿಸಬಹುದು.ಆದರೆ ಬಳಸುವ ವಿಧಾನ ತಿಳಿದಿರಬೇಕು. 

ಮೊಣಕಾಲು ನೋವಿಗೆ  ಎಕ್ಕದ ಎಲೆಗಳನ್ನು ಬಳಸುವುದು ಹೇಗೆ ?: 
ಬೇಕಾಗಿರುವ ಪದಾರ್ಥಗಳು :
ಎಕ್ಕದ ಎಲೆಗಳು – 2 ರಿಂದ 3
ಸಾಸಿವೆ ಎಣ್ಣೆ – 1 ಟೀಸ್ಪೂನ್
ಅರಿಶಿನ – ಅರ್ಧ ಟೀಚಮಚ
ಹತ್ತಿ ಬಟ್ಟೆ – 1

ಬಳಸುವ ವಿಧಾನ : 
ಮೊದಲನೆಯದಾಗಿ, ಬಾಣಲೆಯ ಮೇಲೆ ಎಕ್ಕದ ಎಲೆಗಳನ್ನು ತಲೆಕೆಳಗಾಗಿ ಇರಿಸಿ ಅದನ್ನು ಬಿಸಿ ಮಾಡಿ.ನಂತರ,ಈ ಎಲೆಯ ಮೇಲೆ ಸ್ವಲ್ಪ ಸಾಸಿವೆ ಎಣ್ಣೆ ಮತ್ತು ಅರಿಶಿನ ಪುಡಿಯನ್ನು ಹಚ್ಚಿ. ಈಗ ಈ ಎಲೆಯನ್ನು ಮೊಣಕಾಲು ಅಥವಾ ಕೀಲು ನೋವಿನಿಂದ ಬಳಲುತ್ತಿರುವ ಜಾಗಕ್ಕೆ ಹಚ್ಚಿ, ಹತ್ತಿ ಬಟ್ಟೆಯ ಸಹಾಯದಿಂದ ಚೆನ್ನಾಗಿ ಕಟ್ಟಿಕೊಳ್ಳಿ. ಹೀಗೆ ಎಲೆಯನ್ನು ನೋವಿನ ಜಾಗಕ್ಕೆ ಕಟ್ಟುವಾಗ ಎಲೆಯು ಸ್ವಲ್ಪ ಬೆಚ್ಚಗಿರಬೇಕು ಎಂಬುದು ನೆನಪಿರಲಿ. ನೀವು ಸುಮಾರು 15 ರಿಂದ 30 ನಿಮಿಷಗಳ ಕಾಲ ಅಥವಾ ರಾತ್ರಿಯಿಡೀ ಈ ಎಲೆಯನ್ನು ಹೀಗೆ ಕಟ್ಟಿಕೊಂಡು ಬಿಡಬಹುದು. ಇದು ನೋವು, ಊತ ಮತ್ತು ಕೆಂಪು ಬಣ್ಣದಿಂದ ಪರಿಹಾರವನ್ನು ನೀಡುತ್ತದೆ.

ಎಕ್ಕ ಎಲೆಗಳ ನೀರನ್ನು ಕೂಡಾ ಬಳಸಬಹುದು : 
ಕೀಲು ನೋವಿನಿಂದ ಪರಿಹಾರ ಪಡೆಯಲು, ಎಕ್ಕದ ಎಲೆಗಳ ನೀರನ್ನು ಬಳಸಬಹುದು. ಇದನ್ನು ಬಳಸಲು, ಒಂದು ಪಾತ್ರೆಯಲ್ಲಿ ನೀರು ಮತ್ತು ಕೆಲವು ಎಕ್ಕದ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ.ಇದರ ನಂತರ, ನೋವಿರುವ ಜಾಗಕ್ಕೆ ಈ ನೀರಿನ ಶಾಖ ಕೊಡಿ. ಇದು ನೋವು ಮತ್ತು ಊತದಿಂದ ತಕ್ಷಣದ ಪರಿಹಾರವನ್ನು ನೀಡುತ್ತದೆ.

ಎಕ್ಕದ ಎಲೆಯು ಕೀಲು ನೋವಿನಿಂದ ತ್ವರಿತ ಪರಿಹಾರವನ್ನು ನೀಡುತ್ತದೆ. ಮೇಲೆ ಹೇಳಿದ ರೀತಿಯಲ್ಲಿ ಈ ಎಲೆಗಳನ್ನು ಬಳಸಬೇಕು. ಆದರೆ ನೋವಿನಿಂದ ನಿಮ್ಮ ಸ್ಥಿತಿಯು ತುಂಬಾ ಗಂಭೀರವಾಗಿದ್ದರೆ, ವೈದ್ಯರ ಸಹಾಯ ಪಡೆಯಿರಿ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು.  ಸಮಗ್ರ ಸುದ್ದಿ ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.

Source : https://zeenews.india.com/kannada/health/aak-leaf-will-relieve-from-the-knee-pain-know-the-using-method-196520

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *