
ರಾಗಿಯ (Ragi) ಆರೋಗ್ಯ (Health) ಪ್ರಯೋಜನಗಳು ಬಹುತೇಕ ಎಲ್ಲರಿಗೂ ತಿಳಿದಿರುತ್ತದೆ. ಆದರೆ ಬೇಸಿಗೆಯಲ್ಲಿ ಪ್ರತಿದಿನ ರಾಗಿ ಮಾಲ್ಟ್ (Ragi Malt) ಕುಡಿಯುವುದರಿಂದ ಯಾವ ರೀತಿಯ ಲಾಭಗಳಿವೆ ಎಂಬುದು ನಿಮಗೆ ತಿಳಿದಿದೆಯೇ? ಆರೋಗ್ಯ ತಜ್ಞರು ಹೇಳುವ ಪಕಾರ, ಬೇಸಿಗೆಯಲ್ಲಿ, ಶಾಖ ಹೆಚ್ಚಾಗಿರುವುದರಿಂದ ಅದನ್ನು ಕಡಿಮೆ ಮಾಡಲು ಈ ಮಾಲ್ಟ್ ಸಹಾಯ ಮಾಡುತ್ತದೆ.ಅದಕ್ಕಾಗಿಯೇ ರಾಗಿ ಮಾಲ್ಟ್ ಅನ್ನು ದಿನಕ್ಕೆ ಒಂದು ಬಾರಿಯಾದರೂ ಸೇವನೆ ಮಾಡಬೇಕು ಎಂದು ವೈದ್ಯರು ಹೇಳುತ್ತಾರೆ. ಹಾಗಾದರೆ ಇದನ್ನು ಕುಡಿಯುವುದರಿಂದ ದೇಹಕ್ಕೆ ಯಾವ ರೀತಿಯ ಪ್ರಯೋಜನಗಳು ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಸಂಪೂರ್ಣ ಮಾಹಿತಿ ಇಲ್ಲಿದೆ.ಆತಂಕ, ಖಿನ್ನತೆ ಕಡಿಮೆಯಾಗುತ್ತದೆರಾಗಿಯಲ್ಲಿ ಕಾರ್ಬೋಹೈಡ್ರೇಟ್ ಗಳು ಜೀವಸತ್ವಗಳು, ಖನಿಜಗಳು, ನಾರುಗಳು, ಕೊಬ್ಬುಗಳು, ಪ್ರೋಟೀನ್ಗಳು ಮುಂತಾದ ಎಲ್ಲಾ ಅಗತ್ಯ ಮ್ಯಾಕ್ರೋನ್ಯೂಟ್ರಿಯೆಂಟ್ಗಳನ್ನು ಒಳಗೊಂಡಿದ್ದು, ಪ್ರತಿದಿನ ರಾಗಿ ಮಾಲ್ಟ್ ಕುಡಿಯುವುದರಿಂದ ಆತಂಕ, ಖಿನ್ನತೆ ಮತ್ತು ನಿದ್ರಾಹೀನತೆ ಕಡಿಮೆಯಾಗುತ್ತದೆ. ಇದರಲ್ಲಿರುವ ಉತ್ಕರ್ಷಣ ನಿರೋಧಕಗಳು. ಟ್ರಿಪ್ಟೋಫಾನ್ ಮತ್ತು ಅಮೈನೋ ಆಮ್ಲಗಳು ನೈಸರ್ಗಿಕ ವಿಶ್ರಾಂತಿಕಾರಕವಾಗಿ ಕಾರ್ಯನಿರ್ವಹಿಸುತ್ತವೆ.ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆರಾಗಿಯಲ್ಲಿ ಫೈಬರ್ ಸಮೃದ್ಧವಾಗಿದೆ. ಇದು ಜೀರ್ಣಾಂಗ ವ್ಯವಸ್ಥೆಗೆ ತುಂಬಾ ಒಳ್ಳೆಯದು. ಪ್ರತಿದಿನ ರಾಗಿ ಮಾಲ್ಟ್ ಕುಡಿಯುವುದರಿಂದ ಆಯಾಸವಾಗುವುದಿಲ್ಲ. ಇದನ್ನು ಬೆಳಿಗ್ಗೆಯ ಉಪಾಹಾರವಾಗಿಯೂ ತೆಗೆದುಕೊಳ್ಳಬಹುದು. ಈ ರೀತಿ ಅಭ್ಯಾಸ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ ಇದರಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿರುವುದರಿಂದ ಮೂಳೆಗಳು ಬಲಗೊಳ್ಳುತ್ತವೆ.ನಿರ್ಜಲೀಕರಣ ಸಮಸ್ಯೆಯಿಂದ ಮುಕ್ತಿ ನೀಡುತ್ತದೆಬೇಸಿಗೆಯಲ್ಲಿ ಬೆವರು ಬರುವುದು ಸಾಮಾನ್ಯ. ಆದರೆ ಇದು ದೇಹವನ್ನು ನಿರ್ಜಲೀಕರಣಗೊಳಿಸುತ್ತದೆ. ಹಾಗಾಗಿ ಬೇಸಗೆಯ ದಿನಗಳಲ್ಲಿ ಪ್ರತಿನಿತ್ಯ ರಾಗಿ ಮಾಲ್ಟ್ ಕುಡಿಯುವ ಅಭ್ಯಾಸವನ್ನು ರೂಢಿಸಿಕೊಳ್ಳಿ. ಇದು ನಿರ್ಜಲೀಕರಣ ಸಮಸ್ಯೆಯನ್ನು ತಡೆಯುತ್ತದೆ. ಜೊತೆಗೆ ಇದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಇದನ್ನು ನಿಯಮಿತವಾಗಿ ಕುಡಿದರೆ, ರಾಗಿಯಲ್ಲಿರುವ ಪೋಷಕಾಂಶಗಳು ಚರ್ಮವನ್ನು ತೇವಾಂಶ ಮತ್ತು ಆರೋಗ್ಯಕರವಾಗಿರಿಸುತ್ತದೆ.ವಿಟಮಿನ್ ಡಿ ಕೊರತೆಯನ್ನು ನಿವಾರಿಸುತ್ತದೆರಾಗಿಯಲ್ಲಿ ದೇಹವನ್ನು ನಿರ್ವಿಷಗೊಳಿಸುವ ಸಾಕಷ್ಟು ಗುಣಗಳಿವೆ. ಹಾಗಾಗಿ ರಾಗಿ ಮಾಲ್ಟ್ ನಿಯಮಿತವಾದ ಸೇವನೆಯು ದೇಹದಿಂದ ವಿಷವನ್ನು ಹೊರಹಾಕುತ್ತದೆ. ಇದು ಮಕ್ಕಳಿಗೂ ಕೂಡ ತುಂಬಾ ಒಳ್ಳೆಯದು. ಜೊತೆಗೆ ಇದು ವಿಟಮಿನ್ ಡಿ ಕೊರತೆಯನ್ನು ನಿವಾರಿಸುತ್ತದೆ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ರಾಗಿ ಮಾಲ್ಟ್ ಮತ್ತು ಮಜ್ಜಿಗೆಯನ್ನು ಒಟ್ಟಿಗೆ ಸೇವಿಸಬಹುದು ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.