ಈ ಸಮಸ್ಯೆ ಇದ್ದವರು ಬೆಂಡೆಕಾಯಿ ತಿನ್ನುವಂತಿಲ್ಲ!ತಿಂದರೆ ಅಪಾಯ ತಪ್ಪಿದ್ದಲ್ಲ.

  • ಬೆಂಡೆಕಾಯಿಯನ್ನು ಬಹುತೇಕ ಎಲ್ಲಾ ಮನೆಗಳಲ್ಲಿ ಅಡುಗೆಯಲ್ಲಿ ಬಳಸುತ್ತಾರೆ
  • ಬೆಂಡೆಕಾಯಿಯನ್ನು ಬೇರೆ ಬೇರೆ ರೀತಿಯಲ್ಲಿ ಅಡುಗೆಯಲ್ಲಿ ಬಳಸಬಹುದು.
  • ಕಿರಿಯರಿಂದ ಹಿಡಿದು ಹಿರಿಯರವರೆಗೂ ಬೆಂಡೆಕಾಯಿಯನ್ನು ಇಷ್ಟಪಟ್ಟು ತಿನ್ನುತ್ತಾರೆ

Lady Finger Side Effects : ಬೆಂಡೆಕಾಯಿಯನ್ನು ಬಹುತೇಕ ಎಲ್ಲಾ ಮನೆಗಳಲ್ಲಿ ಅಡುಗೆಯಲ್ಲಿ ಬಳಸುತ್ತಾರೆ.ಬೆಂಡೆಕಾಯಿಯನ್ನು ಬೇರೆ ಬೇರೆ ರೀತಿಯಲ್ಲಿ ಅಡುಗೆಯಲ್ಲಿ ಬಳಸಬಹುದು.ಕಿರಿಯರಿಂದ ಹಿಡಿದು ಹಿರಿಯರವರೆಗೂ ಬೆಂಡೆಕಾಯಿಯನ್ನು ಬಹಳ ಇಷ್ಟಪಟ್ಟು ತಿನ್ನುತ್ತಾರೆ.ಇದು ತಿನ್ನಲು ರುಚಿಕರವಾಗಿರುವುದರ ಜೊತೆಗೆ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ.ಇದರಲ್ಲಿ ಪ್ರೋಟೀನ್,ಫೈಬರ್,ಕಬ್ಬಿಣ,ಕ್ಯಾಲ್ಸಿಯಂ, ಪೊಟ್ಯಾಸಿಯಮ್,ಮೆಗ್ನೀಸಿಯಮ್,ಸತು,ಮ್ಯಾಂಗನೀಸ್,ತಾಮ್ರ,ರಂಜಕ ಮತ್ತು ಉತ್ಕರ್ಷಣ ನಿರೋಧಕಗಳಂತಹ ಅನೇಕ ಪೋಷಕಾಂಶಗಳಿವೆ.ಇದು ದೇಹವನ್ನು ಆರೋಗ್ಯಕರವಾಗಿಡಲು ಅವಶ್ಯಕವಾಗಿದೆ.ಬೆಂಡೆಕಾಯಿ ಸೇವನೆ ಆರೋಗ್ಯಕ್ಕೆ ಅನೇಕ ರೀತಿಯ ಪ್ರಯೋಜನಗಳನ್ನು ಒದಗಿಸುತ್ತದೆ.ಇದು ಅಧಿಕ ರಕ್ತದ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.ಇದರ ಸೇವನೆಯು ಜೀರ್ಣಕ್ರಿಯೆಯನ್ನು ಸುಧಾರಿಸುವುದಲ್ಲದೆ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.ಇಷ್ಟೆಲ್ಲಾ ಪ್ರಯೋಜನಗಳ ಹೊರತಾಗಿಯೂ,ಬೆಂಡೆಕಾಯಿ ಸೇವನೆಯು ಕೆಲವು ಜನರಿಗೆ ಹಾನಿಕಾರಕವಾಗಿ ಪರಿಣಮಿಸಬಹುದು.ಇದನ್ನು ಅತಿಯಾಗಿ ಸೇವಿಸುವುದರಿಂದ ದೇಹದಲ್ಲಿ ಹಲವಾರು ತೊಂದರೆಗಳು ಉಂಟಾಗುತ್ತವೆ.ಕೆಲವು ಕಾಯಿಲೆಗಳಲ್ಲಿ,  ಬೆಂಡೆಕಾಯಿ ಸೇವಿಸುವುದರಿಂದ ರೋಗಿಯ ಸ್ಥಿತಿ ಇನ್ನಷ್ಟು ಹದಗೆಡಬಹುದು. 

ಯಾರು  ಬೆಂಡೆಕಾಯಿ ತಿನ್ನಬಾರದು : 
ಕಿಡ್ನಿ ಸಂಬಂಧಿತ ಸಮಸ್ಯೆ : 

ಮೂತ್ರಪಿಂಡಕ್ಕೆ ಸಂಬಂಧಿಸಿದ ಯಾವುದೇ ಕಾಯಿಲೆ ಇದ್ದರೆ,ಬೆಂಡೆಕಾಯಿ ಸೇವಿಸುವುದನ್ನು ತಪ್ಪಿಸಬೇಕು.ವಿಶೇಷವಾಗಿ, ಮೂತ್ರಪಿಂಡ ಮತ್ತು ಪಿತ್ತಕೋಶದ ಕಲ್ಲಿನ ಸಮಸ್ಯೆಯ ಸಂದರ್ಭದಲ್ಲಿ, ಬೆಂಡೆಕಾಯಿ ಸೇವನೆಯು ಸಾಕಷ್ಟು ಹಾನಿಕಾರಕವಾಗಿ ಪರಿಣಮಿಸುತ್ತದೆ.ಬೆಂಡೆಕಾಯಿ ದೊಡ್ಡ ಪ್ರಮಾಣದ ಆಕ್ಸಲೇಟ್ ಹರಳುಗಳನ್ನು ಹೊಂದಿರುತ್ತದೆ.ಇದರಿಂದಾಗಿ ಕಲ್ಲುಗಳ ಸಮಸ್ಯೆ ಹೆಚ್ಚಾಗಬಹುದು. 

ಹೊಟ್ಟೆ ಉಬ್ಬುವುದು :
ಗ್ಯಾಸ್ ಮತ್ತು ಹೊಟ್ಟೆ ಉಬ್ಬುವಿಕೆಯ ಸಮಸ್ಯೆಯಿಂದ ತೊಂದರೆಗೊಳಗಾಗುತ್ತಿದ್ದರೆ, ಬೆಂಡೆಕಾಯಿ ಸೇವಿಸಬಾರದು. ಇದು ಬಹಳಷ್ಟು ಫೈಬರ್ ಅನ್ನು ಹೊಂದಿರುತ್ತದೆ. ಇದರಿಂದಾಗಿ ಹೊಟ್ಟೆ ಉಬ್ಬರದ ಸಮಸ್ಯೆ ಹೆಚ್ಚಾಗುತ್ತದೆ.ಇದರ ಸೇವನೆಯಿಂದ ಕೆಲವರಿಗೆ ಗ್ಯಾಸ್ ಸಮಸ್ಯೆಯೂ ಎದುರಾಗಬಹುದು.ಅಷ್ಟೇ ಅಲ್ಲ, ಬೆಂಡೆಕಾಯಿ ಅತಿಯಾದ ಸೇವನೆಯಿಂದ   ಮಲಬದ್ಧತೆ ಮತ್ತು ಆಸಿಡಿಟಿ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು.

ಶೀತ ಮತ್ತು ಜ್ವರ ಇದ್ದಾಗ : 
ಶೀತ ಮತ್ತು ಕೆಮ್ಮಿನ ಸಮಸ್ಯೆಯಿಂದ ಬಳಲುತ್ತಿದ್ದರೆ  ಬೆಂಡೆಕಾಯಿ ಸೇವಿಸಬಾರದು.ಇದರ ಸೇವನೆಯಿಂದ ಶೀತ ಮತ್ತು ಕೆಮ್ಮಿನ ಸಮಸ್ಯೆ ಹೆಚ್ಚಾಗುತ್ತದೆ.ಇದಲ್ಲದೆ,ಸೈನಸ್ ಸಮಸ್ಯೆ ಇದ್ದಾಗಲೂ  ಬೆಂಡೆಕಾಯಿ ಸೇವಿಸಬಾರದ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ:
ಅಧಿಕ ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿದ್ದರೆ, ಬೆಂಡೆಕಾಯಿ ಸೇವಿಸಬಾರದು. ಹೆಚ್ಚಿನವರು ಬೆಂಡೆಕಾಯಿಯನ್ನು ಎಣ್ಣೆಯಲ್ಲಿ ಕರಿದು ಅಥವಾ ಹುರಿದು ತಿನ್ನುತ್ತಾರೆ. ಸಾಮಾನ್ಯ ಪಲ್ಯ ಮಾಡುವಾಗಲೂ ಬೆಂಡೆಕಾಯಿಗೆ ಹೆಚ್ಚು ಎಣ್ಣೆ ಬಳಸಲಾಗುತ್ತದೆ. ಇದರಿಂದಾಗಿ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಾಗುವ ಅಪಾಯವಿರುತ್ತದೆ.ಈಗಾಗಲೇ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ಇದ್ದರೆ ಬೆಂಡೆಕಾಯಿ  ಸೇವಿಸದಿರುವುದೇ ಒಳ್ಳೆಯದು. 

ದುರ್ಬಲ ಜೀರ್ಣಕ್ರಿಯೆ ಹೊಂದಿರುವವರು:
ದುರ್ಬಲ ಜೀರ್ಣಕ್ರಿಯೆ ಹೊಂದಿರುವ ಜನರು ಬೆಂಡೆಕಾಯಿ ತಿನ್ನಬಾರದು.  ಇದನ್ನು ಸೇವಿಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಬಹುದು. ಬೆಂಡೆಕಾಯಿಯ ಅತಿಯಾದ ಸೇವನೆಯು ಅತಿಸಾರಕ್ಕೆ ಕಾರಣವಾಗಬಹುದು.

(ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಸಮಗ್ರ ಸುದ್ದಿ ಇದನ್ನು ಖಚಿತಪಡಿಸುವುದಿಲ್ಲ.)  

Source : https://zeenews.india.com/kannada/health/people-with-these-health-problem-must-avoid-ladies-finger-212150

Leave a Reply

Your email address will not be published. Required fields are marked *