IPL 2023: ಕಣದಲ್ಲಿ ಮೂವರು ಭಾರತೀಯರು: ಇಲ್ಲಿದೆ 10 ತಂಡಗಳ ಕೋಚ್​ಗಳ ಪಟ್ಟಿ

IPL 2023 Kannada: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಆರಂಭಕ್ಕೆ ಇನ್ನು ದಿನಗಳು ಮಾತ್ರ ಉಳಿದಿದೆ. ಈಗಾಗಲೇ ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡಗಳ ನಾಯಕರಗಳನ್ನು ಹೆಸರಿಸಿದ್ದಾರೆ. ಇದೀಗ 10 ತಂಡಗಳ ತರಬೇತುದಾರರು ಯಾರು ಎಂಬುದು ಕೂಡ ಬಹಿರಂಗವಾಗಿದೆ.ವಿಶೇಷ ಎಂದರೆ ಈ ಹತ್ತು ಕೋಚ್​ಗಳಲ್ಲಿ ಕೇವಲ ಮೂವರು ಭಾರತೀಯರು ಮಾತ್ರ ಪ್ರಧಾನ ಹುದ್ದೆ ಅಲಂಕರಿಸಿದ್ದಾರೆ. ಅಂದರೆ ಐಪಿಎಲ್​ನ 7 ತಂಡಗಳ ಸಾರಥ್ಯವನ್ನು ಫ್ರಾಂಚೈಸಿಗಳು ವಿದೇಶಿ ಕೋಚ್​ಗಳಿಗೆ ಒಪ್ಪಿಸಿದ್ದಾರೆ. ಹಾಗಿದ್ರೆ ಈ ಬಾರಿಯ ಐಪಿಎಲ್​ನಲ್ಲಿ ಪ್ರತಿ ತಂಡಗಳ ಕೋಚ್​ಗಳಾಗಿ ಕಾಣಿಸಿಕೊಳ್ಳುವವರು ಯಾರು ಎಂಬುದನ್ನು ನೋಡೋಣ...
ಮುಂಬೈ ಇಂಡಿಯನ್ಸ್: ಈ ಬಾರಿ ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಆಗಿ ಸೌತ್ ಆಫ್ರಿಕಾದ ಮಾಜಿ ಆಟಗಾರ ಮಾರ್ಕ್ ಬೌಚರ್ ಕಾಣಿಸಿಕೊಳ್ಳಲಿದ್ದಾರೆ.ಚೆನ್ನೈ ಸೂಪರ್ ಕಿಂಗ್ಸ್​: ಸಿಎಸ್​ಕೆ ತಂಡದ ತರಬೇತಿಯ ಉಸ್ತುವಾರಿ ಈ ಬಾರಿ ಕೂಡ ನ್ಯೂಜಿಲೆಂಡ್ ತಂಡದ ಮಾಜಿ ಆಟಗಾರ ಸ್ಟೀಫನ್ ಫ್ಲೇಮಿಂಗ್ ಕೈಯಲ್ಲಿದೆ.ಸನ್​ರೈಸರ್ಸ್ ಹೈದರಾಬಾದ್: ಎಸ್​ಆರ್​ಹೆಚ್​ ತಂಡದ ಕೋಚ್ ಆಗಿ ವೆಸ್ಟ್ ಇಂಡೀಸ್​ನ ಕ್ರಿಕೆಟ್ ದಂತಕಥೆ ಬ್ರಿಯಾನ್ ಲಾರಾ ಆಯ್ಕೆಯಾಗಿದ್ದಾರೆ. ಈ ಮೂಲಕ ಲಾರಾ ಹೊಸ ಇನಿಂಗ್ಸ್​ ಆರಂಭಿಸುತ್ತಿರುವುದು ವಿಶೇಷ.ಡೆಲ್ಲಿ ಕ್ಯಾಪಿಟಲ್ಸ್: ಡೆಲ್ಲಿ ತಂಡದ ಕೋಚ್ ಆಗಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಮುಂದುವರೆದಿದ್ದಾರೆ.ಗುಜರಾತ್ ಟೈಟಾನ್ಸ್: ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ತಂಡ ಕೂಡ ತಮ್ಮ ಕೋಚ್ ಅನ್ನು ಬದಲಿಸಿಲ್ಲ. ಟೀಮ್ ಇಂಡಿಯಾದ ಮಾಜಿ ಆಟಗಾರ ಆಶಿಶ್ ನೆಹ್ರಾ ಮುಖ್ಯ ಕೋಚ್ ಆಗಿ ಮುಂದುವರೆದಿದ್ದಾರೆ.ಲಕ್ನೋ ಸೂಪರ್ ಜೈಂಟ್ಸ್​: ಲಕ್ನೋ ತಂಡದ ಕೋಚ್ ಆಗಿ ಜಿಂಬಾಬ್ವೆ ತಂಡದ ಮಾಜಿ ಆಟಗಾರ ಆ್ಯಂಡಿ ಫ್ಲವರ್ ಕಾಣಿಸಿಕೊಳ್ಳಲಿದ್ದಾರೆ.ರಾಜಸ್ಥಾನ್ ರಾಯಲ್ಸ್: ಶ್ರೀಲಂಕಾ ತಂಡದ ಮಾಜಿ ನಾಯಕ ಕುಮಾರ್ ಸಂಗಾಕ್ಕರ ಈ ಬಾರಿ ಕೂಡ ರಾಜಸ್ಥಾನ್ ರಾಯಲ್ಸ್ ತಂಡದ ಕೋಚ್ ಸ್ಥಾನದಲ್ಲಿ ಮುಂದುವರೆದಿದ್ದಾರೆ.ಕೊಲ್ಕತ್ತಾ ನೈಟ್​ ರೈಡರ್ಸ್: ಕೆಕೆಆರ್ ತಂಡವು ಈ ಬಾರಿ ಹೊಸ ಕೋಚ್ ಅನ್ನು ಆಯ್ಕೆ ಮಾಡಿದೆ. 6 ಬಾರಿ ರಣಜಿ ಟ್ರೋಫಿ ಗೆದ್ದುಕೊಟ್ಟ (ಮುಂಬೈ ಹಾಗೂ ಮಧ್ಯಪ್ರದೇಶ) ಯಶಸ್ವಿ ಕೋಚ್ ಖ್ಯಾತಿಯ ಚಂದ್ರಕಾಂತ್ ಪಂಡಿತ್ ಈ ಬಾರಿ ಕೆಕೆಆರ್ ತಂಡದ ಜವಾಬ್ದಾರಿವಹಿಸಿಕೊಂಡಿದ್ದಾರೆ.ಪಂಜಾಬ್ ಕಿಂಗ್ಸ್: ಈ ಬಾರಿ ಪಂಜಾಬ್ ಕಿಂಗ್ಸ್ ಕೂಡ ತಮ್ಮ ತರಬೇತುದಾರನನ್ನು ಬದಲಿಸಿದೆ. ಇಂಗ್ಲೆಂಡ್ ತಂಡಕ್ಕೆ ಏಕದಿನ ವಿಶ್ವಕಪ್ ತಂದುಕೊಟ್ಟ ಕೋಚ್ ಟ್ರೆವರ್ ಬೇಲಿಸ್ ಅವರನ್ನು ಈ ಬಾರಿ ಪಂಜಾಬ್ ಕಿಂಗ್ಸ್ ಮುಖ್ಯ ಕೋಚ್ ಆಗಿ ಆಯ್ಕೆ ಮಾಡಿದೆ.ರಾಯಲ್ ಚಾಲೆಂಜರ್ಸ್ ಬೆಂಗಳೂರು: ಆರ್​ಸಿಬಿ ತಂಡದ ಮುಖ್ಯ ಕೋಚ್ ಆಗಿ ಟೀಮ್ ಇಂಡಿಯಾದ ಮಾಜಿ ಆಟಗಾರ ಸಂಜಯ್ ಬಂಗಾರ್ ಮುಂದುವರೆದಿದ್ದಾರೆ.ಐಪಿಎಲ್ ಸೀಸನ್​ 16 ಶುಕ್ರವಾರದಿಂದ ಶುರುವಾಗಲಿದ್ದು, ಅಹಮದಾಬಾದ್​ನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟಾನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿದೆ.

source https://tv9kannada.com/photo-gallery/cricket-photos/ipl-2023-all-teams-head-coaches-kannada-news-zp-au50-545289.html

Views: 0

Leave a Reply

Your email address will not be published. Required fields are marked *