TRUMP PULLED BACK GLOBAL TARIFFS : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾವು ಹೇರಿದ್ದ ಸುಂಕವನ್ನು ಹಠಾತ್ ಆಗಿ ಹಿಂಪಡೆದಿದ್ದಾರೆ. ಚೀನಾ ಹೊರತು ಪಡಿಸಿ ತಾವು ಘೋಷಿಸಿದ್ದ ಸುಂಕಕ್ಕೆ 90 ದಿನಗಳ ವಿರಾಮ ಘೋಷಿಸಿದ್ದಾರೆ.

ವಾಷಿಂಗ್ಟನ್: ವ್ಯಾಪಾರ ಯುದ್ಧಕ್ಕೆ ಟ್ರಂಪ್ 90 ದಿನಗಳ ತಾತ್ಕಾಲಿಕ ವಿರಾಮ ಹಾಕಿದ್ದಾರೆ. ಚೀನಾ ಹೊರತುಪಡಿಸಿ ಎಲ್ಲ ದೇಶಗಳ ಮೇಲೆ ಹಾಕಿದ್ದ ಟಾರಿಫ್ ಅನ್ನು ಹಠಾತ್ ಆಗಿ ಹಿಂಪಡೆಯಲಾಗಿದೆ ಎಂದು ಟ್ರಂಪ್ ಘೋಷಿಸಿದ್ದಾರೆ.
ಚೀನಾದ ವಸ್ತುಗಳ ಮೇಲೆ ಅಮೆರಿಕ ಶೇ125 ರಷ್ಟು ಸುಂಕ ವಿಧಿಸಿದೆ. ಇದಕ್ಕೆ ಪ್ರತಿಯಾಗಿ ಚೀನಾ ಸಹ ಅಮೆರಿಕದ ವಸ್ತುಗಳ ಮೇಲೆ ಶೇ84 ರಷ್ಟು ಸುಂಕ ವಿಧಿಸಿದೆ. ನಿನ್ನೆ ಎಲ್ಲ ದೇಶಗಳ ಮೇಲೆ ಹೇರಿದ್ದ ಸುಂಕಕ್ಕೆ 90 ದಿನಗಳ ವಿರಾಮ ನೀಡಲಾಗಿದೆ ಎಂದು ಟ್ರಂಪ್ ಘೋಷಿಸಿದರು. ಆದರೆ ಇದು ಚೀನಾಗೆ ಅನ್ವಯಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲ ಬೀಜಿಂಗ್ ತನ್ನ ಹಿಂದಿನ ವ್ಯಾಪಾರ ಕ್ರಮಗಳಿಗೆ ಪ್ರತೀಕಾರ ತೀರಿಸಿಕೊಳ್ಳಬಾರದು ಎಂದು ಹೇಳಿದರು.

ರೆಸಿಪ್ರೋಕಲ್ ಟಾರಿಫ್ ಗೆ ತಾತ್ಕಾಲಿಕ ವಿರಾಮ ಘೋಷಿಸಿದ ಟ್ರಂಪ್ : ಅಧ್ಯಕ್ಷ ಟ್ರಂಪ್ ಅವರ ಟಾರಿಫ್ ನೀತಿ ಜಾರಿಗೆ ಬಂದ ಕೆಲವೇ ಗಂಟೆಗಳಲ್ಲಿ ಆ ದೇಶವನ್ನು ಟ್ರಂಪ್ ವಾಪಸ್ ಪಡೆದಿದ್ದು, ಚೀನಾ ಹೊರತುಪಡಿಸಿ 90 ದಿನಗಳ ವಿರಾಮ ಘೋಷಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಟ್ರಂಪ್, ನಾವು ನಮ್ಮ ವ್ಯಾಪಾರ ಪಾಲುದಾರರೊಂದಿಗೆ ಪರಿಹಾರವನ್ನು ಕಂಡುಕೊಳ್ಳಲಿದ್ದೇವೆ ಎಂದರು.
ಚೌಕಾಸಿಯ ಟೇಬಲ್‌ಗೆ ಕರೆತರಲು ಈ ಕ್ರಮ ಎಂದ ಖಜಾನೆ ಕಾರ್ಯದರ್ಶಿ: ಇದೇ ವೇಳೆ 90 ದಿನಗಳ ವಿರಾಮದ ಬಗ್ಗೆ ಮಾತನಾಡಿದ ಅಮೆರಿಕ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್, ದೇಶಗಳನ್ನು ಚೌಕಾಸಿಯ ಟೇಬಲ್‌ಗೆ ತರಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರತಿಪಾದಿಸಿದರು. ಏಪ್ರಿಲ್ 2 ರಂದು ಟ್ರಂಪ್ ಘೋಷಣೆಯೊಂದಿಗೆ ಜಾಗತಿಕ ಷೇರು ಮಾರುಕಟ್ಟೆಗಳಲ್ಲಿನ ಕುಸಿತ ಈ ಚಿಂತನೆಗೆ ಕಾರಣವಾಗಿದೆ ಎಂದು ಅವರು ಇದೇ ವೇಳೆ ಪ್ರಕಟಿಸಿದರು. ಅವರ ನೀತಿಗಳು ಎಂದಿಗೂ ಬದಲಾಗುವುದಿಲ್ಲ ಎಂಬುದನ್ನು ಸ್ಕಾಟ್ ಬೆಸೆಂಟ್ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

ಎಸ್&ಪಿಯಲ್ಲಿ ಭಾರಿ ಚೇತರಿಕೆ: ಟ್ರಂಪ್ ಅವರ ಈ ಘೋಷಣೆಯಿಂದ ಅಮೆರಿಕದ ಷೇರು ಮಾರುಕಟ್ಟೆ ಎಸ್&ಪಿ 500 ಶೇ 9 ರಷ್ಟು ಏರಿಕೆ ಕಂಡಿದೆ. ಕಳೆದ ನಾಲ್ಕು ದಿನಗಳಿಂದ ಶೇ 22 ಅಂಶಗಳಷ್ಟು ಕುಸಿತ ಕಂಡಿದ್ದ ಅಮೆರಿಕದ ಷೇರು ಮಾರುಕಟ್ಟೆಗಳು ಸುಮಾರು 10 ಟ್ರಿಲಿಯನ್ ಡಾಲರ್ ನಷ್ಟ ಅನುಭವಿಸಿದ್ದವು. ನಿನ್ನೆ ಇದ್ದಕ್ಕಿದ್ದಂತೆ ಟ್ರಂಪ್ ತಮ್ಮ ನಿಲುವಿನಿಂದ ಹಿಂದೆ ಸರಿದಿದ್ದರಿಂದ ಅಮೆರಿಕ ಷೇರು ಮಾರುಕಟ್ಟೆಗಳ ದಿಢೀರ್ ಏರಿಕೆ ಕಂಡಿವೆ.
ನಿನ್ನೆಯ ಈ ಏರಿಕೆ ಈಗಾಗಲೇ ಆಗಿರುವ ನಷ್ಟವನ್ನು ಸರಿದೂಗಿಸುವುದಿಲ್ಲ ಎಂದು ಹೂಡಿಕೆ ತಜ್ಞರು ಹೇಳಿದ್ದಾರೆ. ಟ್ರಂಪ್ ಅವರ ಈ ಕ್ರಮದ ನಂತರ ಗೋಲ್ಡ್‌ಮನ್ ಸ್ಯಾಚ್ಸ್ ಆರ್ಥಿಕ ಹಿಂಜರಿತದ ಸಂಭವನೀಯತೆಯನ್ನು ಶೇ 45 ಕ್ಕೆ ಇಳಿಕೆ ಮಾಡಿದೆ.
ETV Bharat
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1