ಅಮೆರಿಕ : ನೂತನ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರoಪ್ ಅಧಿಕಾರ ವಹಿಸಿಕೊಳ್ಳುವ ಮುನ್ನವೇ ಆಡಳಿತ ಸುಧಾರಣೆಗೆ ಹೊಸ ಕ್ರಮ ಜರುಗಿಸಿದ್ದಾರೆ.ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಹಾಗೂ ಭಾರತೀಯ ಮೂಲದ ಅಮೆರಿಕ ರಾಜಕಾರಣಿ ವಿವೇಕ್ ರಾಮಸ್ವಾಮಿಗೆ ಹೊಸ ಜವಾಬ್ದಾರಿ ನೀಡಿದ್ದಾರೆ.

ಜನವರಿಯಲ್ಲಿ ಅಧಿಕಾರ ವಹಿಸಿಕೊಳ್ಳುವ ಡೊನಾಲ್ಡ್ ಟ್ರoಪ್ , ಆಡಳಿತ ಸುಧಾರಣೆ ಕ್ರಮವಾಗಿ ಡಿಪಾರ್ಟ್ಮೆಂಟ್ ಆಫ್ ಗವರ್ನ್ಮೆಂಟ್ ಎಫಿಶಿಯನ್ಸಿ (DOGE) ಇಲಾಖೆಯ ನೇತೃತ್ವನ್ನ ಎಲಾನ್ ಮಸ್ಕ್ ಹಾಗೂ ವಿವೇಕ್ ರಾಮಸ್ವಾಮಿಗೆ ನೀಡಿದ್ದಾರೆ. ಟ್ರoಪ್ ಅಧಿಕೃತ ಕಚೇರಿಯಿಂದ ಈ ವಿಚಾರ ಹೊರಬಿದ್ದಿದೆ.
ಅಮೆರಿಕನ್ನರಿಗೆ ಉತ್ತಮ ಆಡಳಿತ ನೀಡುವ ಗುರಿ ಹೊಂದಿದ್ದೇನೆ. ಪಾರದರ್ಶಕ ಆಡಳಿತ ನೀಡುವುದು ಮೊದಲ ಆದ್ಯತೆಯಾಗಿದೆ.ದುಂದು ವೆಚ್ಚಕ್ಕೆ ಕಡಿವಾಣ ಹಾಕಿ ಹಣವನ್ನ ಅಭಿವೃದ್ಧಿಗೆ ಬಳಸಬೇಕಾಗಿದೆ. ಅಡಳಿತ ಸುಧಾರಣಾ ಇಲಾಖೆಯನ್ನ ಈ ಇಬ್ಬರು ಮಹನೀಯರು ಯಶಸ್ವಿಯಾಗಿ ಮುನ್ನಡೆಸಲಿದ್ದಾರೆ ಎಂದು ಟ್ರoಪ್ ಹೇಳಿದ್ದಾರೆ .ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ನಷ್ಟವಾಗಿದೆ. 6.5 ಟ್ರಿಲಿಯನ್ ನಷ್ಟು ಹಣ ವ್ಯಥಾ ಖರ್ಚಾಗುತ್ತಿದೆ. ಅಮೆರಿಕದ ಜನರು ಅಭಿವೃದ್ಧಿ ಪ್ರಿಯರು . ಹೀಗಾಗಿ ಅನಗತ್ಯ ಖರ್ಚನ್ನು ತಡೆಹಿಡಿದು ಉಳಿತಾಯದ ಹಣವನ್ನ ಅಭಿವೃದ್ಧಿಗೆ ಬಳಸಲಾಗುತ್ತದೆ ಎಂದು ಟ್ರoಪ್ ಹೇಳಿಕೊಂಡಿದ್ದಾರೆ. ಅಲ್ಲದೆ ಈ ಬಾರಿಯ ಆಡಳಿತ ಮತ್ತಷ್ಟು ಚುರುಕಾಗಲಿದೆ. ವಿಭಿನ್ನ ಹಾಗೂ ವಿಶಿಷ್ಟ ದೃಷ್ಟಿಕೋನವನ್ನ ಒಳಗೊಂಡಿರಲಿದೆ ಎಂದು ಟ್ರoಪ್ ಸುಳಿವು ನೀಡಿದ್ದಾರೆ.