TRUMP PARDONING RIOTERS : ಅಮೆರಿಕದ ನೂತನದ ಅಧ್ಯಕ್ಷರಾಗಿರುವ ಟ್ರಂಪ್ ಮೊದಲ ದಿನ ಯಾವೆಲ್ಲಾ ಅದೇಶಗಳಿಗೆ ಸಹಿ ಹಾಕಿದರು ಎಂಬ ಮಾಹಿತಿ ಇಲ್ಲಿದೆ..
![](https://samagrasuddi.co.in/wp-content/uploads/2025/01/image-3-1024x576.png)
ವಾಷಿಂಗ್ಟನ್: ಅಮೆರಿಕದ 47ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ಡೋನಾಲ್ಡ್ ಟ್ರಂಪ್ ಮೊದಲ ದಿನವೇ ಹವಾಮಾನದಿಂದ ಹಿಡಿದು ವಲಸೆವರೆಗೆ ಹಲವು ಆದೇಶಗಳಿಗೆ ಸಹಿ ಹಾಕಿದರು. ಇದೇ ವೇಳೆ 2021ರ ಜನವರಿ 6ರಂದು ದಾಳಿ ಮಾಡಿದ ಅನೇಕರಿಗೆ ಕ್ಷಮಾಧಾನವನ್ನು ನೀಡಿದರು.
2024ರ ಚುನಾವಣಾ ಪ್ರಚಾರದ ಸಮಯದಲ್ಲಿ ನೀಡಿದ ಅನೇಕ ಭರವಸೆಗಳ ಆದೇಶವನ್ನು ಅವರು ಈಡೇರಿಸಿದರು. ಅದರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಬರುವಿಕೆಯನ್ನು ಮಾತ್ರ ನಿರೀಕ್ಷಿಸಿರಲಿಲ್ಲ. ಟ್ರಂಪ್ ಮೊದಲ ದಿನ ಯಾವ ಆದೇಶಗಳಿಗೆ ಸಹಿ ಹಾಕಿ ಶ್ವೇತಭವನದಲ್ಲಿ ಪ್ರಮಾಣವಚನ ಸ್ವೀಕರಿಸಿದರು ಎಂಬ ಕುರಿತ ವಿವರ ಇಲ್ಲಿದೆ..
ವಲಸೆ: ಅಮೆರಿಕ ವಲಸೆ ಮತ್ತು ಪೌರತ್ವವನ್ನು ಹೇಗೆ ಮರು ವಿನ್ಯಾಸ ಮಾಡಲಿದೆ ಎಂಬ ಗುರಿಯ ಹಲವು ಆದೇಶಗಳಿಗೆ ಸಹಿ ಹಾಕಿದರು. ಅದರಲ್ಲಿ ಒಂದು ದಕ್ಷಿಣ ಗಡಿಯಲ್ಲಿ ರಾಷ್ಟ್ರೀಯ ತುರ್ತನ್ನು ಘೋಷಣೆ ಮಾಡಿದರು. ವಿದೇಶಿ ಅಪರಾಧಿಗಳು ಎಂದು ಕರೆಯುವ ಮೂಲಕ ಸಾಮೂಹಿಕ ಗಡೀಪಾರು ಕಾರ್ಯಾಚರಣೆಗೆ ಭರವಸೆ ನೀಡಿದರು.
ಜನನ ಪೌರತ್ವ ರದ್ದು : ಜನ್ಮ ಪೌರತ್ವ ಹಕ್ಕನ್ನು ರದ್ದುಗೊಳಿಸುವ ಆದೇಶಕ್ಕೂ ಕೂಡ ಅವರು ಸಹಿ ಹಾಕಿದರು. ಅಮೆರಿಕ ಪೌರತ್ವಕ್ಕಾಗಿ ಅಲ್ಲಿ ಜನಿಸಿದ ಮಕ್ಕಳಿಗೆ ಹಕ್ಕು ನೀಡುವ ಈ ಪೌರತ್ವವನ್ನು ಟ್ರಂಪ್ ರದ್ದು ಮಾಡಿದ್ದು, ಈ ಕ್ರಮವು ಇದೀಗ ಕಾನೂನು ಸವಾಲನ್ನು ಎದುರಿಸಲಿದೆ.
ಜನವರಿ 6ರ ದಂಗೆ : 2020ರ ಚುನಾವಣೆ ಬಳಿಕ ಅಧಿಕಾರ ಹಸ್ತಾಂತರ ಸಂದರ್ಭದಲ್ಲಿ 2021ರ ಜನವರಿ 6ರ ದಾಳಿಯಲ್ಲಿ ಭಾಗಿಯಾಗಿದ್ದ 1,500 ಮಂದಿಗೆ ಟ್ರಂಪ್ ಸಹಿ ಹಾಕಿದರು. ಈ ವೇಳೆ ಗಲಭೆಯಲ್ಲಿ ತಪ್ಪೊಪ್ಪಿಕೊಂಡವರನ್ನು ತಮ್ಮ ಒತ್ತೆಯಾಳುಗಳು ಎಂದು ಒಪ್ಪಿಕೊಂಡರು.
ವೈವಿಧ್ಯತೆ, ಸಮಾನತೆ, ಒಳಗೊಳ್ಳುವಿಕೆ : ಸಂಸ್ಕೃತಿ ಮೇಲಿನ ದಾಳಿಗೆ ಕಾರಣವಾಗುವ ಅನೇಕ ವೈವಿಧ್ಯತೆಯ ಕಾರ್ಯಕ್ರಮ ಮತ್ತು ಎಲ್ಜಿಬಿಟಿಕ್ಯೂ ಸಮಾನತೆಯನ್ನು ಅವರು ರದ್ದು ಮಾಡಿದರು. ಸರ್ಕಾರ, ವ್ಯವಹಾರಗಳು ಮತ್ತು ಆರೋಗ್ಯ ರಕ್ಷಣೆಯಲ್ಲಿ ವೈವಿಧ್ಯತೆ ಮತ್ತು ಸಮಾನತೆಯನ್ನು ಉತ್ತೇಜಿಸುವ ತೀರ್ಪು ಹಾಗೇ ಅವರು, ಎಲ್ಜಿಬಿಟಿಕ್ಯೂ ಅಮೆರಿಕನ್ನರ ಹಕ್ಕನ್ನು ರದ್ದುಗೊಳಿಸಿದರು. ಇದೇ ವೇಳೆ ಅವರು ಅಮೆರಿಕದಲ್ಲಿರುವುದು ಕೇವಲ ಎರಡು ಲಿಂಗ ಅದು ಗಂಡು ಮತ್ತು ಹೆಣ್ಣು ಎಂದರು.
ಪ್ಯಾರಿಸ್ ಹವಾಮಾನ ಒಪ್ಪಂದ : ಪ್ಯಾರಿಸ್ ಒಪ್ಪಂದದಿಂದ ತಕ್ಷಣವೇ ಅಮೆರಿಕವನ್ನು ಹಿಂಪಡೆಯುವ ಮೂಲಕ ಮೊದಲ ಆಡಳಿತ ಅವಧಿಯಲ್ಲಿ ತೆಗೆದುಕೊಂಡ ನಿರ್ಧಾರವನ್ನು ಮರುಕಳಿಸಿದರು. ಜಾಗತಿಕವಾಗಿ ತಾಪಮಾನ ವಿರುದ್ಧ ಒಟ್ಟಾರೆ ಹೋರಾಟದ ನಿರ್ಧಾರದಿಂದ ಟ್ರಂಪ್ ಹಿಂದೆ ಸರಿದರು.
ತೈಲ ಕೊರೆಯುವಿಕೆ : ರಾಷ್ಟ್ರೀಯ ಇಂಧನ ತುರ್ತು ಪರಿಸ್ಥಿತಿಯನ್ನು ಘೋಷಿಸಿ ವಿಶ್ವದ ಪ್ರಮುಖ ತೈಲ ಮತ್ತು ಗ್ಯಾಸ್ ಉತ್ಪಾದನೆ ವಿಸ್ತರಣೆ ಗುರಿಯೊಂದಿಗೆ ಆದೇಶಕ್ಕೆ ಸಹಿ ಹಾಕಿದರು.
ಮನೆಯಿಂದ ಕೆಲಸ ರದ್ದು : ಫೆಡರಲ್ ಉದ್ಯೋಗಿಗಳು ಸಂಪೂರ್ಣವಾಗಿ ಕಚೇರಿಗೆ ಬಂದು ಕಾರ್ಯ ನಿರ್ವಹಿಸಬೇಕು ಎಂದು ಆದೇಶ ಮಾಡಿದರು ಹಾಗೇ ಕೋವಿಡ್ 19 ಸಾಂಕ್ರಾಮಿಕ ವೇಳೆ ನೀಡಿದ ವರ್ಕ್ ಫ್ರಂ ಹೋಮ್ ಭತ್ಯೆಗಳನ್ನು ತೆಗೆದು ಹಾಕಿದರು.
ಡಬ್ಲ್ಯೂಎಚ್ಒದಿಂದ ಹೊರಗೆ : ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರ ನಡೆಯುವ ನಿರ್ಧಾರಕ್ಕೆ ಕೂಡ ಟ್ರಂಪ್ ಸಹಿ ಹಾಕಿದರು. ಇದು ಅಮೆರಿಕಕ್ಕೆ ಪಕ್ಷಪಾತ ಮಾಡುತ್ತಿದ್ದು, ಚೀನಾಗೆ ಸಹಾಯ ಮಾಡುತ್ತಿದೆ ಎಂದು ಆರೋಪಿಸಿದರು.
ಟಿಕ್ಟಾಕ್ : ಟಿಕ್ ಟಾಕ್ ಮೇಲೆ ಇದ್ದ ನಿಷೇಧವನ್ನು ಟ್ರಂಪ್ ಹಿಂಪಡೆದಿದ್ದಾರೆ. ಈ ವಾರದಿಂದ ಈ ಕಾಯ್ದೆ ಜಾರಿಯಾಗಲಿದೆ ಎಂದರು. ಇದೇ ವೇಳೆ ಟ್ರಂಪ್ ಚೀನಿ ಮಾತೃ ಸಂಸ್ಥೆಯ ಟಿಕ್ ಟಾಕ್ ಆ್ಯಪ್ ಅಮೆರಿಕಕ್ಕೆ 50ರಷ್ಟು ಷೇರು ಮಾರಾಟ ಮಾಡಲು ಒಪ್ಪಿಗೆ ನೀಡಬೇಕು ಎಂದರು.
ವೆಸ್ಟ್ ಬ್ಯಾಂಕ್ ಸೆಟಲ್ಮೆಂಟ್ : ವೆಸ್ಟ್ ಬ್ಯಾಂಕ್ನಲ್ಲಿ ಇಸ್ರೇಲಿ ವಸಾಹತುಗಾರರ ವಿರುದ್ಧದ ನಿರ್ಬಂಧಗಳನ್ನು ಟ್ರಂಪ್ ಹಿಂತೆಗೆದುಕೊಂಡರು. ಜೋ ಬೈಡನ್ ಆಡಳಿತದಲ್ಲಿ ನಡೆಸಿದ ಕಾರ್ಯವನ್ನು ರದ್ದುಗೊಳಿಸಿದರು.
ಕ್ಯೂಬಾ: ಭಯೋತ್ಪಾದಕರ ಕಪ್ಪು ಪಟ್ಟಿಯಿಂದ ಕ್ಯೂಬಾವನ್ನು ಟ್ರಂಪ್ ತೆಗೆದುಹಾಕಿದರು.