ನಿಮಗೂ ಆಗಾಗ್ಗೆ ಕಣ್ಣು ಕೆಂಪಾಗುತ್ತಾ! ಈ ಮನೆಮದ್ದುಗಳನ್ನೊಮ್ಮೆ ಪ್ರಯತ್ನಿಸಿ

Eye Care: ಕಣ್ಣು ದೇಹದ ಪ್ರಮುಖ ಹಾಗೂ ಸೂಕ್ಷ್ಮವಾದ ಭಾಗವಾಗಿದೆ. ನಮ್ಮಲ್ಲಿ ಕೆಲವರಿಗೆ ಕಣ್ಣು ಕೆಂಪಾಗುವ ಸಮಸ್ಯೆ ಆಗಾಗ್ಗೆ ಕಾಡುತ್ತಿರುತ್ತದೆ. ಇದಕ್ಕೆ ಹಲವು ಕಾರಣಗಳಿರಬಹುದು. ಆದರೆ, ಕೆಲವು ಸರಳ ಮನೆಮದ್ದುಗಳಿಂದ ಈ ಸಮಸ್ಯೆಗೆ ಸುಲಭ ಪರಿಹಾರ ಪಡೆಯಬಹುದು. 

  • ನಮ್ಮಲ್ಲಿ ಕೆಲವರಿಗೆ ಗ್ಯಾಜೆಟ್ಸ್ ಗಳನ್ನು ಹೆಚ್ಚಾಗಿ ಬಳಸದಿದ್ದರೂ ಸಹ ಕಣ್ಣುಗಳು ಕೆಂಪಾಗುತ್ತವೆ.
  • ಇದಕ್ಕೆ ದೇಹದ ಉಷ್ಣತೆ ಹೆಚ್ಚಾಗುವುದು, ಕಣ್ಣುಗಳಿಗೆ ವಿಶ್ರಾಂತಿ ನೀಡದೆ ಇರುವುದು, ಅಲರ್ಜಿ ಹೀಗೆ ನಾನಾ ಕಾರಣಗಳಿರಬಹುದು.
  • ಈ ಲೇಖನದಲ್ಲಿ ಕಣ್ಣು ಕೆಂಪಾಗುವ ಸಮಸ್ಯೆಯಿಂದ ಪರಿಹಾರ ಪಡೆಯಲು ಕೆಲವು ಮನೆಮದ್ದುಗಳ ಬಗ್ಗೆ ತಿಳಿಯೋಣ…

Eye Care At Home: ಇತ್ತೀಚಿನ ದಿನಗಳಲ್ಲಿ ಟಿವಿ, ಮೊಬೈಲ್, ಲ್ಯಾಪ್‌ಟಾಪ್ ಅತಿಯಾದ ಬಳಕೆಯಿಂದಾಗಿ ಕಣ್ಣುಗಳಲ್ಲಿ ಹೆಚ್ಚಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅವುಗಳಲ್ಲಿ ಕಣ್ಣು ನೋವು, ಕಣ್ಣುಗಳು ಹೆಚ್ಚಾಗಿ ಒಣಗುವುದು, ಕಣ್ಣಿನಲ್ಲಿ ಅತಿಯಾಗಿ ನೀರು ಸುರಿಯುವುದು, ಕಣ್ಣುಗಳು ಕೆಂಪಾಗುವುದು ಹೀಗೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇಂತಹ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸದಿದ್ದರೆ ಇದು ಕಣ್ಣುಗಳಿಗೆ ಮಾರಕವಾಗಬಹುದು. 

ನಮ್ಮಲ್ಲಿ ಕೆಲವರಿಗೆ ಗ್ಯಾಜೆಟ್ಸ್ ಗಳನ್ನು ಹೆಚ್ಚಾಗಿ ಬಳಸದಿದ್ದರೂ ಸಹ ಕಣ್ಣುಗಳು ಕೆಂಪಾಗುತ್ತವೆ (Red Eyes). ಇದಕ್ಕೆ ದೇಹದ ಉಷ್ಣತೆ ಹೆಚ್ಚಾಗುವುದು, ಕಣ್ಣುಗಳಿಗೆ ವಿಶ್ರಾಂತಿ ನೀಡದೆ ಇರುವುದು, ಅಲರ್ಜಿ ಹೀಗೆ ನಾನಾ ಕಾರಣಗಳಿರಬಹುದು. ಈ ಲೇಖನದಲ್ಲಿ ಕಣ್ಣು ಕೆಂಪಾಗುವ ಸಮಸ್ಯೆಯಿಂದ ಪರಿಹಾರ ಪಡೆಯಲು ಕೆಲವು ಮನೆಮದ್ದುಗಳ (Home Remedies) ಬಗ್ಗೆ ತಿಳಿಯೋಣ… 

ಕಣ್ಣು ಕೆಂಪಾಗುವ ಸಮಸ್ಯೆಗೆ ಮನೆಮದ್ದುಗಳು:-
ರೋಸ್ ವಾಟರ್: 

ಕಣ್ಣಿನ ಹಲವು ಸಮಸ್ಯೆಗಳನ್ನು  ಗುಣಪಡಿಸಲು ರೋಸ್ ವಾಟರ್ (Rose Water) ಅನ್ನು ಹಲವು ವರ್ಷಗಳಿಂದ ಬಳಸಲಾಗುತ್ತಿದೆ. ರೋಸ್ ವಾಟರ್‌ನಲ್ಲಿ ಹತ್ತಿ ಉಂಡೆಗಳನ್ನು ನೆನೆಸಿಟ್ಟು ಬಳಿಕ ಹತ್ತಿ ಉಂಡೆಗಳನ್ನು ತೆಗೆದು ಕಣ್ಣುಗಳ ಮೇಲೆ ರೋಸ್ ವಾಟರ್ ಅನ್ನು ಅನ್ವಯಿಸಿ. 10 ನಿಮಿಷಗಳ ಬಳಿಕ ಕಣ್ಣಿನಲ್ಲಿ ಉರಿ ಸಂವೇದನೆ ಕಡಿಮೆ ಆಗುತ್ತದೆ. 

ಸೌತೆಕಾಯಿ: 
ಕಣ್ಣುಗಳು ಕೆಂಪಾಗಿದ್ದರೆ ಅಥವಾ ಕಣ್ಣುಗಳು ಊದಿಕೊಂಡಿದ್ದರೆ ಸೌತೆಕಾಯಿಯನ್ನು ಗೋಲಾಕಾರದಲ್ಲಿ ಕತ್ತರಿಸಿ ಸ್ವಲ್ಪ ಸಮಯದವರೆಗೆ ಕಣ್ಣುಗಳ ಮೇಲಿರಿಸಿ. ಇದು ಕಣ್ಣುಗಳನ್ನು ತಂಪಾಗಿಸುತ್ತದೆ. 

ಕೊಬ್ಬರಿ ಎಣ್ಣೆ: 
ಎಲ್ಲರ ಮನೆಯಲ್ಲೂ ಬಹಳ ಸುಲಭವಾಗಿ ಲಭ್ಯವಿರುವ ಕೊಬ್ಬರಿ ಎಣ್ಣೆಯು  (Coconut Oil) ಕಣ್ಣುಗಳಿಗೆ ತೇವಾಂಶವನ್ನು ನೀಡುತ್ತದೆ.  ಕಣ್ಣುಗಳಿಗೆ ತೆಂಗಿನ ಎಣ್ಣೆಯ ಕೆಲವು ಹನಿಗಳನ್ನು ಹಾಕಿ ಕಣ್ಣು ಮಿಟುಕಿಸುವುದರಿಂದ ಕಣ್ಣಿನ ಊತ, ಕಿರಿಕಿರಿ, ಕಣ್ಣಿನ ತುರಿಕೆ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು. 

ಕೋಲ್ಡ್ ಕಂಪ್ರೆಸ್:
ಕೋಲ್ಡ್ ಕಂಪ್ರೆಸ್ ನರಗಳನ್ನು ನಿಶ್ಚೇಷ್ಟಿತಗೊಳಿಸುತ್ತದೆ ಮತ್ತು ನೋವಿನಿಂದ ಅಲ್ಪಾವಧಿಯ ಪರಿಹಾರವನ್ನು ನೀಡುತ್ತದೆ. ಹಾಗಾಗಿ, ಕಣ್ಣುಗಳಲ್ಲಿ ಊತ, ಕಣ್ಣು ಕೆಂಪಾಗಿದ್ದರೆ ತಾತ್ಕಾಲಿಕ ಪರಿಹಾರವಾಗಿ ಕೋಲ್ಡ್ ಕಂಪ್ರೆಸ್ ಬಳಸಬಹುದು. 

ಅಲೋವೆರಾ: 
ಕಣ್ಣುಗಳಿಗೆ ಅಲೋವೆರಾ ಅತ್ಯುತ್ತಮ ಗಿಡಮೂಲಿಕೆ ಆಗಿದೆ. ಅಲೋವೆರಾದ ಒಂದು ತುಂಡನ್ನು ರೆಫ್ರಿಜರೇಟರ್ನಲ್ಲಿ ಇರಿಸಿ ಸ್ವಲ್ಪ ಸಮಯದ ನಂತರ ದನ್ನು ತಣ್ಣನೆಯ ನೀರಿನಲ್ಲಿ ಮಿಕ್ಸ್ ಮಾಡಿ. ಅದರಲ್ಲಿ  ಹತ್ತಿಯನ್ನು ನೆನೆಸಿ ಕಣ್ಣಿನ ಮೇಲೆ ಸ್ವಲ್ಪ ಸಮಯ ಇಟ್ಟರೆ ಕಣ್ಣಿನ ಉರಿ, ಊತ, ಕಣ್ಣು ಕೆಂಪಾಗಿರುವುದರಿಂದ ಪರಿಹಾರ ಪಡೆಯಬಹುದು. 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Samagrasuddi ಇದನ್ನು ಖಚಿತಪಡಿಸುವುದಿಲ್ಲ. 

Source: https://zeenews.india.com/kannada/health/simple-home-remedies-to-get-rid-from-eyes-redness-203362

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

 

Leave a Reply

Your email address will not be published. Required fields are marked *