Yogasana For Weight Loss: ತೂಕ ಇಳಿಕೆ ಬೇರೆಲ್ಲಾ ಋತುಗಳಿಗಿಂತ ಚಳಿಗಾಲದಲ್ಲಿ ಕಬ್ಬಿಣದ ಕಡಲೆಯೇ ಸರಿ.
Yogasana For Weight Loss in Winter: ಚಳಿಗಾಲದಲ್ಲಿ ಎಷ್ಟೇ ಕಸರತ್ತು ಮಾಡಿದರೂ, ಏನೆಲ್ಲಾ ಡಯಟ್ ಮಾಡಿದ್ರೂ ಅರ್ಧ ಕೆಜಿ ತೂಕ ಇಳಿಸುವುದು ಸಹ ಕಷ್ಟಸಾಧ್ಯ…

ಚಳಿಗಾಲದಲ್ಲಿ ಕೆಲವು ಯೋಗಾಭ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ಜಿಡ್ಡುಗಟ್ಟಿರುವ ಕೊಬ್ಬು ಕರಗಿ ಸುಲಭವಾಗಿ ತೂಕ ಇಳಿಕೆಯಾಗುವುದರ ಜೊತೆಗೆ ಬೆಲ್ಲಿ ಫ್ಯಾಟ್ ಕರಗಿ ಹೊತ್ತೆಯೂ ಚಪ್ಪಟೆಯಾಗುತ್ತದೆ. ಅಂತಹ ಯೋಗಾಭ್ಯಾಸಗಳೆಂದರೆ…

ಕಿಬ್ಬೊಟ್ಟೆಯ ಅಂಗಗಳನ್ನು ಸ್ಟ್ರೆಚ್ ಮಾಡುವ ಧನುರಾಸನವು ದೇಹದಲ್ಲಿ ಚಯಾಪಚಯವನ್ನು ಹೆಚ್ಚಿಸಿ ಹೊಟ್ಟೆ, ಸೊಂಟದ ಸುತ್ತ, ತೊಡೆಗಳಲ್ಲಿ ಶೇಖರವಾಗಿರುವ ಫ್ಯಾಟ್ ಕರಗಿಸುವಲ್ಲಿ ಪರಿಣಾಮಕಾರಿ ಆಗಿದೆ.

ಬುಧಂಜಾಸನವು ದೇಹದ ಆಲಸ್ಯವನ್ನು ದೂರ ಮಾಡಲು, ದೇಹದಲ್ಲಿ ರಕ್ತಪರಿಚಲನೆಯನ್ನು ಹೆಚ್ಚಿಸಲು ಸಹಾಯಕ. ನಿತ್ಯ ಈ ಆಸನವನ್ನು ಮಾಡುವುದರಿಂದ ಹೊಟ್ಟೆಯಲ್ಲಿ ಶೇಖರವಾಗಿರುವ ಕಠಿಣಾತಿ ಕಠಿಣ ಕೊಬ್ಬನ್ನು ಸುಲಭವಾಗಿ ಕರಗಿಸಬಹುದು.

ಸೇತು ಬಂಧಾಸನ ಮಾಡುವುದರಿಂದ ದೇಹದಲ್ಲಿ ರಕ್ತ ಪರಿಚಲನೆ ಸುಧಾರಣೆಗೊಂಡು ಜಿಡ್ಡುಗಟ್ಟಿರುವ ಕೊಬ್ಬನ್ನು ಸುಡಲು ಇದು ತುಂಬಾ ಲಾಭದಾಯಕವಾಗಿದೆ.

ಮಲಾಸನವು ಚಯಾಪಚಯವನ್ನು ಉತ್ತೇಜಿಸುವ ಮೂಕ ತೂಕ ನಷ್ಟಕ್ಕೆ ಅದರಲ್ಲೂ ಸೊಂಟದ ಸುತ್ತಲಿನ ಕೊಬ್ಬು ಕರಗಿಸಲು ಸಹಾಯಕವಾಗಿದೆ.

ತ್ರಿಕೋನಾಸನವು ಪ್ರಮುಖವಾಗಿ ಕಿಬ್ಬೊಟ್ಟೆಯ ಸ್ನಾಯುಗಳನ್ನು ತೊಡಗಿಸಿಕೊಳ್ಳುವುದರಿಂದ ಇದು ಹೆಚ್ಚಿನ ಕ್ಯಾಲೋರಿ ಬರ್ನ್ ಮಾಡಲು ಸಹಾಯಕವಾಗಿದೆ.

ವೀರಭದ್ರಾಸನವನ್ನು ಯೋಧರ ಭಂಗಿ ಎಂತಲೂ ಕರೆಯಲಾಗುತ್ತದೆ. ಇದರಲ್ಲಿ ಕೈ-ಕಾಲುಗಳ ಸ್ನಾಯುಗಳಿಗೆ ಶಕ್ತಿ ದೊರೆಯುತ್ತದೆ. ಜೊತೆಗೆ ತೂಕ ನಷ್ಟವೂ ಸುಲಭವಾಗುತ್ತದೆ.

ಪ್ರಮುಖವಾಗಿ ಒತ್ತಡ ನಿವಾರಣೆಗಾಗಿ ಮಾಡುವ ಈ ಆಸನವು ತೂಕ ನಷ್ಟವನ್ನು ಉತ್ತೇಜಿಸುತ್ತದೆ.

Source: https://zeenews.india.com/kannada/photo-gallery/yoga-poses-for-weight-loss-and-burn-belly-fat-in-winter-276092/best-yoga-asanas-for-weight-loss-reduce-belly-fat-276093