ಚಿತ್ರದುರ್ಗ| ಕಿಡ್ನ್ಯಾಪ್ ಕೇಸ್‌ಗೆ ಟ್ವಿಸ್ಟ್ – ಹೋಂವರ್ಕ್, ಟ್ಯೂಷನ್‌ನಿಂದ ತಪ್ಪಿಸಿಕೊಳ್ಳಲು ಕಥೆ ಕಟ್ಟಿದ ಬಾಲಕರು.

ಚಿತ್ರದುರ್ಗ: ಟ್ಯೂಷನ್‌ಗೆ (Tuition) ಹೋಗುವುದರಿಂದ ತಪ್ಪಿಸಿಕೊಳ್ಳಲು 11 ವರ್ಷದ ಬಾಲಕರು ಸಿನಿಮಾ ಶೈಲಿಯಲ್ಲಿ ಕಿಡ್ನ್ಯಾಪ್ (Kidnap) ಕಥೆ ಕಟ್ಟಿದ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಹಿರಿಯೂರು ತಾಲೂಕಿನ ಧರ್ಮಪುರ ಗ್ರಾಮದಲ್ಲಿ ನಡೆದಿದೆ.

ನಿತ್ಯ ಟ್ಯೂಷನ್‌ಗೆ ಹೋಗಿಬರುತ್ತಿದ್ದ ಇಬ್ಬರು ಮಕ್ಕಳು ಟ್ಯೂಷನ್‌ನಲ್ಲಿ ಕೊಟ್ಟಿದ್ದ ಹೋಂವರ್ಕ್ (Homework) ಮಾಡಲಾಗದೇ, ಹೊಸ ಕಥೆಯೊಂದನ್ನು ಹೆಣೆದಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಟ್ಯೂಷನ್‌ಗೆ ತೆರಳಿದ್ದ ಇಬ್ಬರು ಬಾಲಕರು, ನಮ್ಮ ಅಪಹರಣಕ್ಕೆ ಕಳ್ಳರು ಯತ್ನಿಸಿದ್ರು. ಕಳೆದ 15 ದಿನಗಳಿಂದ ಈ ಮಕ್ಕಳ ಅಪಹರಣಕ್ಕೆ ನಾಲ್ವರ ತಂಡ ಸ್ಕೆಚ್ ಹಾಕಿದ್ದು, ಬಹಿರ್ದೆಸೆಗೆ ತೆರಳಿದ್ದವರನ್ನು ರಾಸಾಯನಿಕ ಸ್ಪ್ರೇ ಸಿಂಪಡಿಸಿ ಓಮ್ನಿ ಕಾರಲ್ಲಿ ಕಿಡ್ನಾಪ್ ಮಾಡಿದ್ದು, 10 ಕಿಲೋಮೀಟರ್ ದೂರದಲ್ಲಿ ಬಿಟ್ಟು ಎಸ್ಕೇಪ್ ಆದರು ಎಂದು ಎಲ್ಲರನ್ನು ನಂಬಿಸಿದ್ದರು. ಈ ಪ್ರಕರಣದಿಂದ ಆತಂಕಗೊಂಡ ಮಕ್ಕಳ ಪೋಷಕರು ಅಬ್ಬಿನಹೊಳೆ ಠಾಣೆಗೆ ದೂರು ನೀಡಿ, ಕೂಡಲೇ ಈ ಪ್ರಕರಣ ಭೇದಿಸಬೇಕು. ಇಂತಹ ಘಟನೆ ಮರುಕಳಿಸದಂತೆ ಅಪಹರಣಕಾರರನ್ನು ಬಂಧಿಸುವಂತೆ ಆಗ್ರಹಿಸಿದ್ದರು.

ಇನ್ನು ಈ ವಿಚಾರ ಕೇಳಿ ಬೆಚ್ಚಿಬಿದ್ದ ಹಿರಿಯೂರು ಡಿವೈಎಸ್ಪಿ ಶಿವಕುಮಾರ್ ಮತ್ತು ತಂಡ ಪ್ರಕರಣದ ಬೆನ್ನತ್ತಿದೆ. ಬಾಲಕರು ಓದುತಿದ್ದ ಶಾಲೆ ಹಾಗೂ ಟ್ಯೂಷನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಧರ್ಮಪುರದಲ್ಲಿನ ಸಿಸಿಟಿವಿಗಳಲ್ಲಿ ತಲಾಶ್ ನಡೆಸಿದ್ದಾರೆ. ಆದರೆ ಬಾಲಕರು ಹೇಳಿದಂತೆ ಓಮ್ನಿ ಓಡಾಡಿರುವ ಕುರುಹು ಎಲ್ಲೂ ಪತ್ತೆಯಾಗಲಿಲ್ಲ. ಆಗ ಅಲರ್ಟ್ ಆದ ಪೊಲೀಸರು, ಈ ಪ್ರಕರಣದ ತನಿಖೆಗಾಗಿ ವಿಶೇಷ ತಂಡ ರಚಿಸಿ, ಬುದ್ದಿವಂತಿಕೆಯಿಂದ ಮಕ್ಕಳ ವಿಚಾರಣೆ ನಡೆಸಿದಾಗ ಕಿಡ್ನ್ಯಾಪ್ ಕಹಾನಿಯ ಅಸಲಿ ಸತ್ಯವನ್ನು ಬಾಲಕರು ಬಾಯಿ ಬಿಟ್ಟಿದ್ದಾರೆ ಎಂದು ಚಿತ್ರದುರ್ಗ ಎಸ್ಪಿ ರಂಜಿತ್ ಕುಮಾರ್ ಬಂಡಾರು ತಿಳಿಸಿದ್ದಾರೆ.

Source : https://publictv.in/chitradurga-twist-in-kidnapping-case-boys-fabricate-story-to-escape-from-homework-tuition

Leave a Reply

Your email address will not be published. Required fields are marked *