Uncommon Symptoms of Cancer: ನಾವು ಆರೋಗ್ಯಕರ ಜೀವನವನ್ನು ನಡೆಸುತ್ತಿದ್ದರೂ ಸಹ ಕ್ಯಾನ್ಸರ್ ಎಚ್ಚರಿಕೆಯ ಚಿಹ್ನೆಗಳು ಮತ್ತು ರೋಗಲಕ್ಷಣಗಳನ್ನು ತಿಳಿದಿರುವುದು ಬಹಳ ಮುಖ್ಯ. ಇದರಿಂದ ಆರಂಭಿಕ ಹಂತದಲ್ಲಿಯೇ ಕ್ಯಾನ್ಸರ್ ಪತ್ತೆಹಚ್ಚಿ, ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯಲು ಸಾಧ್ಯವಾಗುತ್ತದೆ.

- ವಿಶ್ರಾಂತಿ ತೆಗೆದುಕೊಂಡರೂ ಆಯಾಸ ಕಡಿಮೆಯಾಗದೇ ಇದ್ದರೆ ಇದು ಲ್ಯುಕೇಮಿಯಾ, ಕೊಲೊನ್ ಅಥವಾ ಹೊಟ್ಟೆಯ ಕ್ಯಾನ್ಸರ್ ಲಕ್ಷಣವಾಗಿರುವ ಸಾಧ್ಯತೆ ಇರುತ್ತದೆ.
- ನರಗಳು ರೋಗಗ್ರಸ್ತವಾಗುವುದರಿಂದ ದೃಷ್ಟಿ ಬದಲಾವಣೆ, ನಿರಂತರ ತಲೆನೋವು ಅಥವಾ ಮೆದುಳಿನಲ್ಲಿ ಗೆಡ್ಡೆಯಾಗಿರುವ ಚಿಹ್ನೆಯನ್ನು ಸೂಚಿಸುವ ಸಾಧ್ಯತೆಗಳಿರುತ್ತವೆ.
- ಮೂತ್ರದಲ್ಲಿ ರಕ್ತ ಸ್ರಾವ ಆಗುತ್ತಿದ್ದರೆ ಮೂತ್ರಕೋಶ ಅಥವಾ ಮೂತ್ರಪಿಂಡದ ಕ್ಯಾನ್ಸರ್ ಸೂಚಕವೂ ಆಗಿರಬಹುದು.
Uncommon Symptoms of Cancer: ಕ್ಯಾನ್ಸರ್ ಗೆ ಕಾರಣವಾಗುವ ಸಾಮಾನ್ಯ ಚಿಹ್ನೆಗಳು ಮತ್ತು ರೋಗ ಲಕ್ಷಣಗಳು ತಿಳಿದಿರುತ್ತವೆ. ಆದರೆ, ಕೆಲವೊಮ್ಮೆ ಸಾಮಾನ್ಯವಾಗಿ ಗೊತ್ತಿರದ, ಸ್ಪಷ್ಟವಾಗಿ ಗೋಚರಿಸದೇ ಇರುವ ಚಿಹ್ನೆಗಳೂ ಸಹ ಕ್ಯಾನ್ಸರ್ ಅಪಾಯದ ಎಚ್ಚರಿಕೆಯ ಗಂಟೆಯಾಗಿರಬಹುದು. ಆದರೆ, ಈ ಲಕ್ಷಣಗಳನ್ನು ನಿರ್ಲಕ್ಷಿಸುವುದರಿಂದ ಇದು ಭವಿಷ್ಯದಲ್ಲಿ ಭಾರೀ ತೊಂದರೆ ಉಂಟುಮಾಡಬಹುದು.
ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಸರ್ಜಿಕಲ್ ಆಂಕೊಲಾಜಿ ವಿಭಾಗದ ಡಾ. ಹರೀಶ್ ಇ, ವಿವಿಧ ರೀತಿಯ ಕ್ಯಾನ್ಸರ್ ಗೆ ಕಾರಣವಾಗಬಲ್ಲ ಕೆಲವು ಸಾಮಾನ್ಯವಾಗಿ ಗೊತ್ತಿರದ ಚಿಹ್ನೆಗಳು ಮತ್ತು ರೋಗಲಕ್ಷಣಗಳ (Uncommon Symptoms of Cancer) ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ.
ನೀವು ನಿರ್ಲಕ್ಷಿಸಲೇಬಾರದ ಸಾಮಾನ್ಯವಲ್ಲದ ಕ್ಯಾನ್ಸರ್ ಚಿಹ್ನೆ ಮತ್ತು ಲಕ್ಷಣಗಳು ಈ ಕೆಳಕಂಡಂತಿವೆ:-
1. ನಿರಂತರ ಕೆಮ್ಮು ಅಥವಾ ಒರಟಾದ ಧ್ವನಿ:
ಇದು ಸಾಮಾನ್ಯವಾಗಿ ಶ್ವಾಸಕೋಶದ ಕ್ಯಾನ್ಸರ್ (Lung Cancer) ಅಥವಾ ಗಂಟಲಿನ ಕ್ಯಾನ್ಸರ್‌ಗೆ ಸಂಬಂಧಿಸಿದ ಸೂಚಕವಾಗಿದೆ.
2. ನುಂಗಲು ತೊಂದರೆ:
ಇದು ಅನ್ನನಾಳ ಅಥವಾ ಗಂಟಲು ಕ್ಯಾನ್ಸರ್‌ನ (Throat Cancer) ಸಂಕೇತವಾಗಿರುವ ಸಾಧ್ಯತೆಯಾಗಿದೆ.
3. ಭಾರಿ ತೂಕ ನಷ್ಟ:
ಹೀಗಾಗಲು ಪ್ಯಾಂಕ್ರಿಯಾಟಿಕ್, ಹೊಟ್ಟೆ, ಅನ್ನನಾಳ ಮತ್ತು ಶ್ವಾಸಕೋಶದ ಕ್ಯಾನ್ಸರ್ ಸೇರಿದಂತೆ ಹಲವು ರೀತಿಯ ಕ್ಯಾನ್ಸರ್‌ಗಳು (Cancers) ಕಾರಣವಾಗಿರಬಹುದು.
4. ದೀರ್ಘಕಾಲದ ಆಯಾಸ:
ವಿಶ್ರಾಂತಿ ತೆಗೆದುಕೊಂಡರೂ ಆಯಾಸ ಕಡಿಮೆಯಾಗದೇ ಇದ್ದರೆ ಇದು ಲ್ಯುಕೇಮಿಯಾ, ಕೊಲೊನ್ ಅಥವಾ ಹೊಟ್ಟೆಯ ಕ್ಯಾನ್ಸರ್ (Stomach Cancer) ಲಕ್ಷಣವಾಗಿರುವ ಸಾಧ್ಯತೆ ಇರುತ್ತದೆ.
5. ನಿರಂತರ ತುರಿಕೆ:
ತುರಿಕೆ, ವಿಶೇಷವಾಗಿ ದೇಹದ ಕೆಳಭಾಗದಲ್ಲಿ (ಸೊಂಟದ ಕೆಳಗೆ) ಇದ್ದರೆ. ಇದು ಕೆಲವೊಮ್ಮೆ ಲಿಂಫೋಮಾ ಕ್ಯಾನ್ಸರ್ (Lymphoma Cancer) ಲಕ್ಷಣವಾಗಿರುವ ಸಾಧ್ಯತೆ ಇರುತ್ತದೆ. ಇದು ಕೆಲವೊಮ್ಮೆ ಲಿಂಫೋಮಾ ಕ್ಯಾನ್ಸರ್ ಲಕ್ಷಣವಾಗಿರುವ ಸಾಧ್ಯತೆ ಇರುತ್ತದೆ.
6. ತಡೆದುಕೊಳ್ಳಲಾಗದಷ್ಟು ನೋವು:
ಬೆನ್ನುನೋವಿನಂತಹ ನಿರ್ದಿಷ್ಟ ಪ್ರದೇಶಗಳಲ್ಲಿ ನಿರಂತರವಾದ ನೋವು ಇದ್ದರೆ , ಇದು ಮೇದೋಜ್ಜೀರಕ ಗ್ರಂಥಿಯ ಕ್ಯಾನ್ಸರ್‌ನ ಒಂದು ಚಿಹ್ನೆಯಾಗಿರಬಹುದು ಅಥವಾ ಮೂಳೆ ನೋವು ಇದು ಮೂಳೆ ಕ್ಯಾನ್ಸರ್ (Bone Cancer) ಅನ್ನು ಸೂಚಿಸುತ್ತದೆ.
7. ಚರ್ಮದಲ್ಲಿನ ಬದಲಾವಣೆಗಳು:
ಚರ್ಮದಲ್ಲಿ ಉಂಟಾಗುವ ಬದಲಾವಣೆಗಳು ಕೂಡ ಕ್ಯಾನ್ಸರ್ ಸೂಚಕವಾಗಿವೆ. ಗಾಢವಾಗಿ ಕಾಣುವ ಚರ್ಮ (ಹೈಪರ್ಪಿಗ್ಮೆಂಟೇಶನ್), ಹಳದಿ ಚರ್ಮ ಮತ್ತು ಕಣ್ಣುಗಳು (ಕಾಮಾಲೆ), ಕೆಂಪು ಚರ್ಮ (ಎರಿಥೆಮಾ) , ತುರಿಕೆ ಅಥವಾ ಅತಿಯಾದ ಕೂದಲು ಬೆಳವಣಿಗೆ ಕೂಡ ಕ್ಯಾನ್ಸರ್ ಸೂಚಕವಾಗಿರುವ ಸಾಧ್ಯತೆ ಇರುತ್ತದೆ.
8. ಜ್ವರ:
ಸೋಂಕುಗಳಿಗೆ ಸಂಬಂಧಿಸದ ಆಗಾಗ ಬರುವ ಜ್ವರ, ಲ್ಯುಕೇಮಿಯಾ ಅಥವಾ ಲಿಂಫೋಮಾ ಕ್ಯಾನ್ಸರ್ ಸಾಧ್ಯತೆಯನ್ನು ಸೂಚಿಸುತ್ತದೆ.
9. ತೀವ್ರ ರಕ್ತಸ್ರಾವ ಅಥವಾ ಡಿಸ್ಚಾರ್ಜ್:
ಮೂತ್ರದಲ್ಲಿ ರಕ್ತ ಸ್ರಾವ ಆಗುತ್ತಿದ್ದರೆ ಮೂತ್ರಕೋಶ ಅಥವಾ ಮೂತ್ರಪಿಂಡದ ಕ್ಯಾನ್ಸರ್, ಮಲಬದ್ದತೆ ಇದ್ದರೆ ಕೊಲೊನ್ ಅಥವಾ ಗುದನಾಳದ ಕ್ಯಾನ್ಸರ್, ಯೋನಿಯಲ್ಲಿ ಹೆಚ್ಚು ರಕ್ತಸ್ರಾವವಾಗುವುದರಿಂದ ಎಂಡೊಮೆಟ್ರಿಯಲ್ ಅಥವಾ ಗರ್ಭಕಂಠದ ಕ್ಯಾನ್ಸರ್ (Cervical Cancer) ಗೆ ಕಾರಣವಾಗಬಹುದು.
10. ನರಗಳಲ್ಲಿನ ಸಮಸ್ಯೆ:
ನರಗಳು ರೋಗಗ್ರಸ್ತವಾಗುವುದರಿಂದ ದೃಷ್ಟಿ ಬದಲಾವಣೆ, ನಿರಂತರ ತಲೆನೋವು ಅಥವಾ ಮೆದುಳಿನಲ್ಲಿ ಗೆಡ್ಡೆಯಾಗಿರುವ ಚಿಹ್ನೆಯನ್ನು ಸೂಚಿಸುವ ಸಾಧ್ಯತೆಗಳಿರುತ್ತವೆ.
11. ಉಬ್ಬುಗಳು ಅಥವಾ ಕಿಬ್ಬೊಟ್ಟೆಯ ಊತ:
ಇದು ಸಾಮಾನ್ಯವಾಗಿ ಅಂಡಾಶಯದ ಕ್ಯಾನ್ಸರ್‌ಗೆ (Ovarian Cancer) ಸಂಬಂಧಿಸಿರುತ್ತದೆ.
12. ಸ್ತನದಲ್ಲಿ ವ್ಯತ್ಯಾಸ:
ಸ್ತನದ ಮೇಲೆ ಗಡ್ಡೆಯಲ್ಲದೆ, ಅಸಹಜವಾಗಿ ಸ್ತನಗಳ ತೊಟ್ಟುಗಳಿಂದ ಸಾವ್ರವಾಗುತ್ತಿದ್ದರೆ , ಸ್ತನದ ಮೇಲೆ ಡಿಂಪ್ಲಿಂಗ್ (ಕುಳಿ) ಅಥವಾ ಸ್ತನದ ರಚನೆಯಲ್ಲಿ ಬದಲಾವಣೆಯಾದರೆ ಇದು ಸ್ತನ ಕ್ಯಾನ್ಸರ್‌ನ (Breast Cancer) ಸೂಚಕವಾಗಿರಬಹುದು.
ಈ ರೋಗಲಕ್ಷಣಗಳಲ್ಲಿ ಯಾವುದಾದರೂ ದೀರ್ಘಕಾಲದವರೆಗೆ ಇದ್ದರೆ , ಹೆಚ್ಚಿನ ವೈದ್ಯಕೀಯ ಪರೀಕ್ಷೆಗೆ ಒಳಗಾಗುವುದು ಅವಶ್ಯಕವಾಗಿದೆ ಎಂದು ಡಾ.ಹರೀಶ್ ಇ ಸಲಹೆ ನೀಡಿದ್ದಾರೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ವೈದ್ಯರ ಸಲಹೆಯನ್ನು ಆಧರಿಸಿದೆ. ಸಮಗ್ರ ಸುದ್ದಿ ಇದನ್ನು ಖಚಿತಪಡಿಸುವುದಿಲ್ಲ.