Underwater Rail Road Tunnel: ಇಲ್ಲಿ ನಿರ್ಮಾಣವಾಗುತ್ತಿದೆ ಭಾರತದ ಮೊಟ್ಟಮೊದಲ ಅಂಡರ್ ವಾಟರ್ ರೇಲ್ ರೋಡ್, ವಿಶೇಷತೆ ಏನು?

Brahmaputra Railroad Tunnel: ಭಾರತಕ್ಕೆ ತನ್ನ ಮೊಟ್ಟಮೊದಲ ಅಂತರ್ಜಲ ರೈಲು ರಸ್ತೆ ಸುರಂಗ ಶೀಃರದಲ್ಲಿಯೇ ಸಿಗಲಿದೆ. ಸಭೆಯನ್ನುದ್ದೇಶಿಸಿ ಮಾತನಾಡಿರುಯ ಅಸ್ಸಾಂ ಮುಖ್ಯಮಂತ್ರಿ ಹೇಮಂತ್ ಬಿಸ್ವ ಶರ್ಮಾ ಈ ಕುರಿತು ಘೋಷಣೆಯೊಂದನ್ನು ಮಾಡಿದ್ದಾರೆ.   

Brahmaputra Railroad Tunnel: ಭಾರತವು ತನ್ನ ಮೊಟ್ಟಮೊದಲ ನೀನೀನೊಳಗಿನ ರೈಲು ರಸ್ತೆ ಸುರಂಗ ಶೀಘ್ರದಲ್ಲೇ ಪಡೆಯಲಿದೆ. ಈ ಕುರಿತು ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಈ ಘೋಷಣೆ ಮಾಡಿದ್ದಾರೆ. ಇದನ್ನು ಬ್ರಹ್ಮಪುತ್ರ ನದಿಯೊಳಗೆ ನಿರ್ಮಿಸಲಾಗುವುದು ಎಂದು ಅವರು ಹೇಳಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ತಮ್ಮ ಅಧಿಕಾರಾವಧಿಯಲ್ಲಿಯೇ ರೈಲು ಸುರಂಗ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

ರೈಲ್ ರೋಡ್ ಸುರಂಗ ಎಂದರೆ ಅದರ ಮೇಲೆ ರೈಲುಗಳು ಮತ್ತು ಮೋಟಾರು ವಾಹನಗಳು (ಕಾರುಗಳು, ಟ್ರಕ್ಗಳು, ಬಸ್ಸುಗಳು) ಚಲಿಸಬಹುದು. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪ್ರಕಾರ, ಅಸ್ಸಾಂನ ಮೊದಲ ನೀರೊಳಗಿನ ಸುರಂಗವನ್ನು ನುಮಾಲಿಗಢ ಮತ್ತು ಗೋಪುರ ನಡುವೆ 6,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುವುದು ಎನ್ನಲಾಗಿದೆ. ಈ ನಿಟ್ಟಿನಲ್ಲಿ ಮುಂದಿನ ತಿಂಗಳು ಟೆಂಡರ್ ತೆರೆಯಲಾಗುವುದು ಎಂದು ಅವರು ತಿಳಿಸಿದ್ದಾರೆ. ಬ್ರಹ್ಮಪುತ್ರ ನದಿಯನ್ನು ದಾಟಿದ ಈಶಾನ್ಯ ಭಾರತದ ಮೊದಲ ರೈಲು ಸುರಂಗ ಇದಾಗಲಿದೆ.

ಜನಸಮೂಹವನ್ನುದ್ದೇಶಿಸಿ ಮಾತನಾಡಿದ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ, “ನನಗೆ ಕನಸು ಇದೆ, ಬ್ರಹ್ಮಪುತ್ರದ ಅಡಿಯಲ್ಲಿ ರೈಲು ಮತ್ತು ಮೋಟಾರು ಎರಡಕ್ಕೂ ಅವಕಾಶ ಕಲ್ಪಿಸುವ ಸುರಂಗವನ್ನು ನಿರ್ಮಿಸಲು ಸಾಧ್ಯವಾಗುತ್ತದೆ” ಎಂದು ಹೇಳಿದ್ದಾರೆ. ಬ್ರಹ್ಮಪುತ್ರದ ಅಡಿಯಲ್ಲಿ ಸುರಂಗ ಮಾರ್ಗದ ಸಾಧ್ಯತೆಯ ಬಗ್ಗೆ ದೆಹಲಿಯಲ್ಲಿ ಹೈಕಮಾಂಡ್ ಅವರನ್ನು ಪ್ರಶ್ನಿಸಿದೆ ಎಂದು ಅವರು ಹೇಳಿದ್ದಾರೆ.

ಅಟಲ್ ಸುರಂಗವನ್ನು ಹೇಗೆ ಪರ್ವತಗಳ ಒಳಗಿನಿಂದ ನಿರ್ಮಿಸಲಾಗಿದೆಯೋ ಅದೇ ರೀತಿ ಬ್ರಹ್ಮಪುತ್ರದ ಕೆಳಗೆ ಸುರಂಗವನ್ನು ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಇದಕ್ಕಾಗಿ ಎರಡು ಪ್ರತ್ಯೇಕ ಸುರಂಗಗಳನ್ನು ಸಿದ್ಧಪಡಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ. ಇವುಗಳಲ್ಲಿ ಒಂದರ ಮೇಲೆ ರೈಲುಗಳು ಚಲಿಸುತ್ತವೆ ಮತ್ತು ಮೋಟಾರು ವಾಹನಗಳು ಇನ್ನೊಂದರಲ್ಲಿ ಚಲಿಸಲಿವೆ ಎಂದು ಹೇಳಿದ್ದಾರೆ.

ಈ ಸುರಂಗ ನಿರ್ಮಾಣದ ನಂತರ ನುಮಾಲಿಗಢ್ ಮತ್ತು ಗೋಪುರ ನಡುವಿನ ಅಂತರ ಕೇವಲ 33 ಕಿ.ಮೀ.ಗಳಿಗೆ ಸೀಮಿತಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.  ಮೊದಲು ಇದು 220 ಕಿಮೀಗಳಷ್ಟಾಗಿತ್ತು ಮತ್ತು ಪ್ರಯಾಣಿಸಲು 5-6 ಗಂಟೆಗಳ ಸಮಯಾವಕಾಶ ಬೇಕಾಗುತ್ತಿತ್ತು.  ನೀರೊಳಗಿನ ರೈಲ್ವೆ ಸುರಂಗದ ನಂತರ, ತಲುಪಲು ಇದು ಕೇವಲ 40 ನಿಮಿಷಗಳನ್ನು ತೆಗೆದುಕೊಳ್ಳಲಿದೆ. ಈ ಸುರಂಗವು ಸುಮಾರು 35 ಕಿಲೋಮೀಟರ್ ಉದ್ದವಿರಲಿದೆ.

ಅಸ್ಸಾಂನ ಸಿಎಂ ಪ್ರಕಾರ, ಮೊದಲ ಟೆಂಡರ್ ಜುಲೈ 4, 2023 ರಂದು ಹೊರಬೀಳಲಿದೆ. ಹೆಚ್ಚುವರಿಯಾಗಿ, ಎಲ್ಲವೂ ಯೋಜನೆಯ ಪ್ರಕಾರ ನಡೆದರೆ, ಭೂಮಿಯ ಆಯ್ಕೆಗಾಗಿ ಡಿಐಪಿಆರ್ ಸಂಕಲನದ ನಂತರ ಅವರ ಅವಧಿಯಲ್ಲಿ ಯೋಜನೆಯ ನಿರ್ಮಾಣ ಪ್ರಾರಂಭವಾಗಲಿದೆ ಎಂದು ಅವರು ಹೇಳಿದ್ದಾರೆ. ಕುತೂಹಲಕಾರಿಯಾಗಿ, ಬ್ರಹ್ಮಪುತ್ರದ ಉತ್ತರ ಮತ್ತು ದಕ್ಷಿಣವನ್ನು ಹತ್ತಿರಕ್ಕೆ ತರುವ ಯೋಜನೆಗೆ ಪ್ರಧಾನಿ ಮೋದಿ ಈಗಾಗಲೇ ಅನುಮೋದನೆ ನೀಡಿದ್ದಾರೆ.

Source : https://zeenews.india.com/kannada/india/soon-india-will-get-its-first-underwater-railroad-tunnel-says-assam-cm-himant-biswa-sarma-142177

Leave a Reply

Your email address will not be published. Required fields are marked *