ಬಹಿರಂಗವಾಗಿಯೇ ದೇವೇಗೌಡರ ವಿರುದ್ಧ ಹರಿಹಾಯ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ..!

ಬೆಂಗಳೂರು: ಈ ಬಾರಿ ಬಿಜೆಪಿ ಪಕ್ಷ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ. ಐದು ವರ್ಷಗಳ ಆಡಳಿತ ನಡೆಸುವ ಮೂಲಕ ಭ್ರಷ್ಟಾಚಾರ ರಹಿತ, ಪರಿವಾರ ರಹಿತವಾದ ಆಡಳಿತವನ್ನು ನೀಡಲಿದೆ. ನಾವೂ ಯಾವ ಪಾರ್ಟಿ ಜೊತೆಗೂ ಕೈಜೋಡಿಸುವುದಿಲ್ಲ. ನಾವೂ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲಿದ್ದೇವೆ ಎಂದು ಗುಡುಗಿದ್ದಾರೆ.

ಇದೇ ವೇಳೆ ಜೆಡಿಎಸ್ ಹಾಗೂ ದೇವೇಗೌಡರ ವಿರುದ್ಧವಾಗಿ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದ್ದು, ನೀವೂ ಜೆಡಿಎಸ್ ಪಕ್ಷಕ್ಕೆ ಮತ ಹಾಕಿದರೆ ಅವ್ರು ಕಾಂಗ್ರೆಸ್ ಜೊತೆಗೆ ಕೈಜೋಡಿಸುತ್ತಾರೆ. ಬಿಜೆಪಿ, ಜೆಡಿಎಸ್ ಜೊತೆಗೆ ಕೈ ಜೋಡಿಸುತ್ತೆ, ಅವರೊಟ್ಟಿಗೆ ಅಧಿಕಾರ ನಡೆಸುತ್ತೆ ಅನ್ನೋದೆಲ್ಲಾ ಸುಳ್ಳು. ಜೆಡಿಎಸ್ ಮತ್ತು ಕಾಂಗ್ರೆಸ್ ಚುನಾವಣೆ ಹತ್ತಿರವಾಗುತ್ತಿದ್ದಂತೆ ಒಟ್ಟಿಗೆ ಸೇರುತ್ತಾರೆ.

ಮಂಡ್ಯದಲ್ಲಿ ನಡೆದಂತ ರ್ಯಾಲಿಯನ್ನು ನಾನು ನೋಡಿರಲಿಲ್ಲ. ಮೈಸೂರು, ಮಂಡ್ಯ ಭಾಗದಲ್ಲಿ ನಡೆದಂತ ರ್ಯಾಲಿ ಅದ್ಭುತವಾಗಿತ್ತು. ಇದಕ್ಕಾಗಿ ನಾನು ಕಟೀಲು ಅವರನ್ನು ಅಭಿನಂದಿಸುತ್ತೇನೆ. ಮೋದಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುತ್ತಾ ಇದ್ರೆ, ಇಲ್ಲಿ ಟಿಪ್ಪು ಸುಲ್ತಾನ್ ನನ್ನು ಹೀರೋ ಮಾಡುತ್ತಿದ್ದಾರೆ.

ನೀವೂ ಪ್ರಧಾನಿಯಾಗಿದ್ದವರು, ಮುಖ್ಯಮಂತ್ರಿಯಾಗಿದ್ದವರು ಆದರೆ ರಾಜ್ಯಕ್ಕೆ ಏನು ಮಾಡಿಲ್ಲ. ಆದರೆ ನಾವೂ ಏನು ಮಾಡಿದ್ದೇವೆ ಎಂಬುದನ್ನು ನಮ್ಮ ಯುವಮೋರ್ಚಾ ಕಾರ್ಯಕರ್ತರು ನಿಮಗೆ ಹೇಳುತ್ತಾರೆ ಎಂದು ದೇವೇಗೌಡರ ಮೇಲೆ ವಾಗ್ದಾಳಿ ನಡೆಸಿದ್ದಾರೆ.

The post ಬಹಿರಂಗವಾಗಿಯೇ ದೇವೇಗೌಡರ ವಿರುದ್ಧ ಹರಿಹಾಯ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ..! first appeared on Kannada News | suddione.

from ರಾಷ್ಟ್ರೀಯ ಸುದ್ದಿ – Kannada News | suddione https://ift.tt/iBF6v0e
via IFTTT

Leave a Reply

Your email address will not be published. Required fields are marked *