Health: ಹಾಗಲಕಾಯಿಯನ್ನು ಬಳಸುವ ಬಹುತೇಕ ಜನರು ಹಾಗಲಕಾಯಿಯನ್ನು ಬಳಸುವಾಗ ಅದರ ಬೀಜಗಳನ್ನು ತೆಗೆದು ಎಸೆಯುತ್ತಾರೆ. ಆದರೆ ಹಾಗಲಕಾಯಿ ಹೇಗೆ ಪ್ರಯೋಜನಕಾರಿಯಾಗಿದೆಯೋ ಹಾಗೆಯೇ ಅದರ ಬೀಜಗಳು ಕೂಡ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿವೆ.
ಹಾಗಲಕಾಯಿ ಸೇವನೆಯಿಂದಾಗುವ ಆರೋಗ್ಯಕರ ಲಾಭಗಳ ಕುರಿತು ಬಹುತೇಕ ಜನರಿಗೆ ತಿಳಿದೇ ಇದೆ. ಇದು ವಿಟಮಿನ್ ಎ, ವಿಟಮಿನ್ ಸಿ, ಸತು ಮತ್ತು ಫೋಲೇಟ್ ಗಳಿಂದ ಸಮೃದ್ಧವಾಗಿದೆ. ಇದೇ ವೇಳೆ ಇದು ಮಧುಮೇಹ ಕಾಯಿಲೆಯಿನ ಬಳಲುತ್ತಿರುವ ಜನರಿಗೆ ಕೂಡ ಪ್ರಯೋಜನಕಾರಿಯಾಗಿದೆ. ಹಾಗಲಕಾಯಿಯು ಮಧುಮೇಹ ರೋಗಿಗಳಿಗೆ ಒಂದು ರಾಮಬಾಣ ಔಷಧಿ ಎಂದರೆ ತಪ್ಪಾಗಲಾರದು. ಆದರೆ ಹಾಗಲಕಾಯಿ ಬೀಜಗಳು ಕೂಡ ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿವೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಹೌದು, ಹಾಗಲಕಾಯಿಯನ್ನು ಬಳಸುವ ಬಹುತೇಕ ಜನರು ಅದರ ಬೀಜಗಳನ್ನು ತೆಗೆದು ಎಸೆಯುತ್ತಾರೆ. ಆದರೆ ಹಾಗಲಕಾಯಿಯಂತೆಯೇ ಅದರ ಬೀಜಗಳು ಕೂಡ ಆರೋಗ್ಯಕ್ಕೆ ತುಂಬಾ ಲಾಭಕಾರಿಯಾಗಿವೆ. ಹಾಗಲಕಾಯಿ ಬೀಜಗಳು ಮಧುಮೇಹ ರೋಗಿಗಳಿಗೆ ಮತ್ತು ಇತರ ರೋಗಿಗಳಿಗೆ ಹೇಗೆ ಪ್ರಯೋಜನಕಾರಿಯಾಗಿವೆ ತಿಳಿದುಕೊಳ್ಳೋಣ ಬನ್ನಿ,
ಹಾಗಲಕಾಯಿ ಬೀಜದ ಪ್ರಯೋಜನಗಳು
ಮಧುಮೇಹದಲ್ಲಿ ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ
ಹಾಗಲಕಾಯಿಯನ್ನು ಅದರ ಬೀಜಗಳೊಂದಿಗೆ ಸೇವಿಸಿದಾಗ ಅದು ನಮ್ಮ ದೇಹದಲ್ಲಿ ಒಂದು ರೀತಿಯ ರಫೇಜ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಿಂದ ನಮ್ಮ ದೇಹದ ಚಯಾಪಚಯ ಕ್ರಿಯೆ ಸರಿಯಾಗಿ ಉಳಿಯುತ್ತದೆ, ಇದರಿಂದಾಗಿ ಮಧುಮೇಹದಲ್ಲಿ ಮಲಬದ್ಧತೆಯ ಸಮಸ್ಯೆ ದೂರಾಗುತ್ತವೆ.
ಕೊಲೆಸ್ಟ್ರಾಲ್ ನಿಯಂತ್ರಣ
ಮಧುಮೇಹ ರೋಗಿಗಳಲ್ಲಿ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುವ ಅಪಾಯವಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಬೀಜಗಳೊಂದಿಗೆ ಹಾಗಲಕಾಯಿಯನ್ನು ಸೇವಿಸಿದರೆ, ಅದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ಇದು ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಜೀರ್ಣಕ್ರಿಯೆ ಸರಿಯಾಗಿದ್ದರೆ ಅದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇನ್ನೊಂದೆಡೆ ಹಾಗಲಕಾಯಿಯಲ್ಲಿ ಉತ್ತಮ ಪ್ರಮಾಣದ ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ವಿಟಮಿನ್ ಸಿ ಮತ್ತು ಫೈಬರ್ ಗಳಿವೆ, ಇದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಹಾಗಲಕಾಯಿ ಬೀಜಗಳನ್ನು ಈ ರೀತಿ ಬಳಸಿ
>> ಮೊದಲು ಒಂದು ಹಾಗಲಕಾಯಿ ಬೀಜವನ್ನು ಒಣಗಿಸಿ ಪುಡಿ ಮಾಡಿ. ನಂತರ ಬಿಸಿನೀರಿನೊಂದಿಗೆ ಪ್ರತಿದಿನ ಅದನ್ನು ಸೇವಿಸಿದರೆ ಹೊಟ್ಟೆ ನಿರ್ವಿಶವಾಗಿ ಸ್ವಚ್ಛವಾಗಿರುತ್ತದೆ.
>> ಎರಡು ಹಾಗಲಕಾಯಿಯ ಬೀಜಗಳು ಹಾಗೂ ಬೆಳ್ಳುಳ್ಳಿ ಹುಡಿಗಳನ್ನು ರುಬ್ಬಿ ಪ್ಯೂರಿ ತಯಾರಿಸಿಕೊಳ್ಳಿ. ಇದೀಗ ತುಂಬಿರುವ ಹಾಗಲ ಕಾಯಿಯಂತೆ ಕರಿದ ಈರುಳ್ಳಿಯನ್ನು ತುಂಬಿ, ಹಾಗಲಕಾಯಿಯನ್ನು ಡೀಪ್ ಫ್ರೈ ಮಾಡಿ. ನಂತರ ಬೆಳ್ಳುಳ್ಳಿ-ಹಾಗಲಕಾಯಿ ಬೀಜದ ಪ್ಯೂರಿಯನ್ನು ಅದಕ್ಕೆ ಬೆರೆಸಿ ಬೇಯಿಸಿ. ಈ ಪಲ್ಯೆ ಡಯಾಬಿಟಿಸ್ ರೋಗಿಗಳಿಗೆ ತುಂಬಾ ಲಾಭಕಾರಿಯಾಗಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆಗಳನ್ನು ಪಡೆದುಕೊಳ್ಳಿ. Samagrasuddi.co.in ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)