Usman Khawaja: 141 ರನ ಬರಸ ಉಸಮನ ಖವಜ ಔಟದಗ ಇಗಲಡ ಆಟಗರ ಜ ರಟ ಏನ ಮಡದರ ನಡ

Usman Khawaja: 141 ರನ್ ಬಾರಿಸಿ ಉಸ್ಮಾನ್ ಖ್ವಾಜಾ ಔಟಾದಾಗ ಇಂಗ್ಲೆಂಡ್ ಆಟಗಾರ ಜೋ ರೂಟ್ ಏನು ಮಾಡಿದ್ರು ನೋಡಿ
Usman Khawaja and Joe Root

ಬರ್ಮಿಂಗ್‌ಹ್ಯಾಮ್​ನ ಎಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್- ಆಸ್ಟ್ರೇಲಿಯಾ (ENG vs AUS) ನಡುವಣ ಆ್ಯಶಸ್ ಟೆಸ್ಟ್ (Ashes Test) ಸರಣಿಯ ಮೊದಲ ಪಂದ್ಯ ಕುತೂಹಲ ಕೆರಳಿಸಿದೆ. ಪ್ರಥಮ ದಿನ ಅಂತ್ಯವಾಗುವ ಮುನ್ನವೇ 393 ರನ್​ಗಳಿಗೆ ಡಿಕ್ಲೇರ್ ಘೋಷಿಸಿದ್ದ ಆಂಗ್ಲರು ಆಸ್ಟ್ರೇಲಿಯಾವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕುವ ಯೋಜನೆಯಲ್ಲಿದ್ದರು. ಆದರೆ, ಇದರಲ್ಲಿ ಸಂಪೂರ್ಣ ಯಶಸ್ವಿ ಆಗಲಿಲ್ಲ. ಇಂಗ್ಲೆಂಡ್ ಬೌಲರ್​ಗಳನ್ನು ಬೆಂಬಿಡದೆ ಕಾಡಿದ ಆಸೀಸ್ ಬ್ಯಾಟರ್ ಉಸ್ಮಾನ್ ಖ್ವಾಜಾ (Usman Khawaja) ಆಕರ್ಷಕ ಶತಕ ಸಿಡಿಸಿ ತಂಡವನ್ನು ಅಪಾಯದಿಂದ ಪಾರು ಮಾಡಿದರು. ಖ್ವಾಜಾ 321 ಎಸೆತಗಳಲ್ಲಿ 14 ಫೋರ್, 3 ಸಿಕ್ಸರ್​ನೊಂದಿಗೆ 141 ರನ್ ಗಳಿಸಿ ಔಟಾದರು.

ರಾಬಿನ್ ಸಿಂಗ್ ಬೌಲಿಂಗ್​ನಲ್ಲಿ ಖ್ವಾಜಾ ಕ್ಲೀನ್ ಬೌಲ್ಡ್ ಆದರು. ದೊಡ್ಡ ವಿಕೆಟ್ ಉರುಳುತ್ತಿದ್ದಂತೆ ಇಂಗ್ಲೆಂಡ್ ಆಟಗಾರರು ಸಂಭ್ರಮಿಸಿದರು. ಇದರ ನಡುವೆ ಜೋ ರೂಟ್ ಅವರು ಖ್ವಾಜಾ ಅವರ ಬಳಿ ಓಡಿ ಬಂದು ಅತ್ಯುತ್ತಮ ಆಟವಾಡಿದ ಖ್ವಾಜಾ ಅವರನ್ನು ಗೌರವಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ರೂಟ್ ನಡೆಗೆ ಒಳ್ಳೆಯ ಪ್ರತಿಕ್ರಿಯೆ ಕೇಳಿಬರುತ್ತಿದೆ. ಇಲ್ಲಿದೆ ನೋಡಿ ಆ ವಿಡಿಯೋ.

Ashes 2023: ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 1100 ವಿಕೆಟ್..! ವಿಶೇಷ ದಾಖಲೆ ಬರೆದ ಜೇಮ್ಸ್ ಆಂಡರ್ಸನ್

 

ಖ್ವಾಜಾ ವಿಕೆಟ್​ಗಾಗಿ ರಣತಂತ್ರ ರೂಪಿಸಿದ ಇಂಗ್ಲೆಂಡ್:

ಇಂಗ್ಲೆಂಡ್​ಗೆ ತಲೆನೋವಾಗಿದ್ದ ಖ್ವಾಜಾ ವಿಕೆಟ್​ ಕಬಳಿಸಲು ಆಕ್ರಮಣಕಾರಿ ಫೀಲ್ಡಿಂಗ್​ ಸೆಟ್​ ಮಾಡುವ ಮೂಲಕ ​ಸ್ಟೋಕ್ಸ್ ಕೊನೆಗೂ ಯಶಸ್ಸು ಕಂಡರು. ಸ್ಟೋಕ್ಸ್​ ಆರು ಮಂದಿ ಫೀಲ್ಡರ್​ಗಳನ್ನು ಅರ್ಧ ಕ್ರೀಸ್​ ಮುಂಭಾಗದಲ್ಲಿ ಬ್ಯಾಟರ್​ಗೆ ಎದುರಾಗಿ ನಿಲ್ಲಿಸಿದ್ದರು. ಇದರಿಂದ ಪ್ರೇರಿತಗೊಂಡು ಖ್ವಾಜಾ ವಿಕೆಟ್​ ಬಿಟ್ಟು ಮುಂದೆ ಬಂದಿದ್ದರು. ಸ್ಟೋಕ್ಸ್‌ ಮಾಡಿದ ಹೊಸ ಕ್ಷೇತ್ರರಕ್ಷಣಾ​ ತಂತ್ರಗಳಿಂದ ಒತ್ತಡಕ್ಕೆ ಸಿಲುಕಿದಂತೆ ಕಂಡುಬಂದ ಖ್ವಾಜಾ ಮುನ್ನುಗ್ಗಿ ಆಡುವ ಯತ್ನದಲ್ಲಿ ವಿಫಲರಾಗಿ​ ವಿಕೆಟ್​ ಕಳೆದುಕೊಂಡರು. ಇಲ್ಲಿದೆ ನೋಡಿ ಆ ರಣತಂತ್ರದ ವಿಡಿಯೋ.

 

ಇಂಗ್ಲೆಂಡ್​​ಗೆ 35 ರನ್​ಗಳ ಮುನ್ನಡೆ:

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಅಚ್ಚರಿ ಎಂಬಂತೆ ಮೊದಲ ದಿನ ಮುಕ್ತಾಯ ಆಗುವ ಮುನ್ನವೇ 78 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 393 ರನ್ ಗಳಿಸಿದಾಗ ಡಿಕ್ಲೇರ್ ಘೋಷಿಸಿತು. ರೂಟ್ 152 ಎಸೆತಗಳಲ್ಲಿ 7 ಫೋರ್, 4 ಸಿಕ್ಸರ್​ನೊಂದಿಗೆ ಅಜೇಯ 118 ರನ್ ಚಚ್ಚಿದರು. ಜಾಕ್ ಕ್ರಾವ್ಲಿ (61), ಒಲಿ ಪೋಪ್ (31), ಬೇರ್​ಸ್ಟೋವ್​ 78 ರನ್ ಗಳಿಸಿದರು. ತನ್ನ ಪ್ರಥಮ ಇನಿಂಗ್ಸ್​​​ ಆರಂಭದಲ್ಲಿ ಆಸೀಸ್ ತೃತೀಯ ದಿನದಾಟದ ಆರಂಭದಲ್ಲಿ 386 ರನ್​ಗಳಿಗೆ ಆಲೌಟ್ ಆಯಿತು. ಖ್ವಾಜಾ 141 ರನ್ ಗಳಿಸಿದರೆ, ಟ್ರೇವಿಸ್​ ಹೆಡ್ 50, ಅಲೆಕ್ಸ್​ ಕ್ಯಾರಿ 66, ಪ್ಯಾಟ್ ಕಮಿನ್ಸ್ 38 ರನ್​ಗಳ ಕೊಡುಗೆ ನೀಡಿದರು. ಬಳಿಕ ತನ್ನ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ 28 ರನ್​ಗೆ 2 ವಿಕೆಟ್ ಕಳೆದುಕೊಂಡಿದ್ದು 35 ರನ್​ಗಳ ಮುನ್ನಡೆಯಲ್ಲಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/joe-root-won-everyones-hearts-with-his-incredible-gesture-for-usman-khawaja-during-eng-vs-aus-ashes-vb-603914.html

Views: 0

Leave a Reply

Your email address will not be published. Required fields are marked *