ಭೀಮಸಮುದ್ರ.. ಸಮೀಪದ ವಿ ಪಾಳ್ಯ ಗ್ರಾಮಸ್ಥರು ಮುಂಜಾನೆ 5:00 ಗಂಟೆಯಿಂದ ಸಂಜೆವರೆಗೆ ಗಣಿಗಾರಿಕೆಯ ಲಾರಿ ಬಸ್ಸು ರಸ್ತೆ ತಡೆಯಾಗಿ ಬಂದ್ ಮಾಡಿದ್ದರು
ಚಿತ್ರದುರ್ಗ ದಿಂದ. ಈ ಮಾರ್ಗದಲ್ಲಿ ಬಿದುರ್ಗ ಸಂತೆಬೆನ್ನೂರು ಹೊಳಲ್ಕೆರೆ ಚನ್ನಗಿರಿ ಶಿವಮೊಗ್ಗ ಹೊನ್ನಾಳಿ ಹಾಗೂ ಕುಂಟ ಸೇರುವ ರಸ್ತೆ ಆಗಿದೆ ಹೆಚ್ಚಿನ ಸಂಖ್ಯೆಯಲ್ಲಿ ಈ ಜಿಲ್ಲೆಗೆ ತಾಲೂಕುಗಳಿಗೆ ಸಾರ್ವಜನಿಕರು ಇದೇ ಮಾರ್ಗದಲ್ಲಿ ಓಡಾಡುತ್ತಾರೆ.

ಈ ರಸ್ತೆಯಲ್ಲಿ ಸುಮಾರು 50 ಕ್ಕೂ ಹೆಚ್ಚು ಬೈಕ್ ಸವಾರರು ಗುಂಡಿಯಲ್ಲಿ ಬಿದ್ದು ಆಸ್ಪತ್ರೆ ಸೇರುವ ಪರಿಸ್ಥಿತಿ ಬಂದಿದೆ ಹತ್ತಕ್ಕೂ ಹೆಚ್ಚು ಕಾರುಗಳ ಟೈಯರ್ ಒಡೆದು ಹೋಗಿದೆ ಭೀಮಸಮುದ್ರ ದಿಂದ ವಿ ಪಾಳ್ಯದವರೆಗೆ ರಸ್ತೆ ಅದೇ ಹದಗೆಟ್ಟಿದ್ದು ಇದರ ಬಗ್ಗೆ ಅಧಿಕಾರಿಗಳಾಗಲಿ ಸರ್ಕಾರ ಗಮನ ಹರಿಸುತ್ತಿಲ್ಲ ಸುಮಾರು 30ಕ್ಕೂ ಹೆಚ್ಚು ಜನ ರಾತ್ರಿ ಓಡಾಡುವಾಗ ಗುಂಡಿಗಳಲ್ಲಿ ಬಿದ್ದು ಆಸ್ಪತ್ರೆ ಸೇರುವ ಪರಿಸ್ಥಿತಿ ಬಂದಿದೆ ಸಾರ್ವಜನಿಕರು ಹೋರಾಡುವರಕ್ಕೆ ಹೀಗಾದರೆ ಸರ್ಕಾರ ಏನು ಗಮನ ಹರಿಸುತ್ತದೆ ಎಂದು ಈ ಪಾಳ್ಯ ಗ್ರಾಮಸ್ಥರು ರಸ್ತೆ ತಡೆ ಮಾಡಿ ಬಂದ್ ಮಾಡಿದ್ದರು.

ವಿ ಪಾಳ್ಯ. ಗ್ರಾಮಸ್ಥರಾದ ನವೀನ್ ಕುಮಾರ್ ಮಾತನಾಡಿ ಈ ಮಾರ್ಗದಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಗಣಿಗಾರಿಕಾ ಕಂಪನಿಗಳ ಲಾರಿಗಳು ಓಡಾಡುತ್ತವೆ ಆದರೆ ಗಣಿಗಾರಿಕೆಯಿಂದ ಬಹುತೇಕ ಹೆಚ್ಚು ಹಣ ಸರ್ಕಾರದ ಬಕ್ಕಸಕ್ಕೆ ಸೇರುತ್ತದೆ ಆದರೂ ಕೂಡ ರಸ್ತೆ ಸರಿಪಡಿಸದಿರುವುದು ವಿಷಾಧಕರ ಸಂಗತಿ ಸುತ್ತಮುತ್ತಲಿರುವ ಪಾಳ್ಯ ಮಳಲಿ ನಲಿಕಟ್ಟೆ ಕಂದವಾಡಿ ಸಾರ್ವಜನಿಕರು ಸುಮಾರು 15 20 ಗುಂಡಿಯಲ್ಲಿ ಬಿದ್ದು ಆಸ್ಪತ್ರೆಯಲ್ಲಿ ಈಗಲೂ ಕೂಡ ತೋರಿಸುತ್ತಿದ್ದಾರೆ ಆದರೆ ಸುತ್ತಮುತ್ತಲಿರುವ ಗ್ರಾಮಗಳಿಗೆ ಕಂಪನಿಗಳಿಂದ ಯಾವುದೇ ರೀತಿಯ ಸಹಕಾರ ಸಿಕ್ಕಿಲ್ಲ ಈ ಮಾರ್ಗವಾಗಿ 4 ಗಣಿಗಾರಿಕೆಯ ಕಂಪನಿಗಳು ಲಾರಿಗಳು ಹಾಗೂ ಕೆಲಸಗಾರರ ಬಸುಗಳು ಸಂಚರಿಸುತ್ತವೆ ಆದರೂ ಕೂಡ ಕಂಪನಿಯವರು ಎಚ್ಚೆತ್ತುಕೊಳ್ಳುತ್ತಿಲ್ಲ ಆದಷ್ಟು ಬೇಗ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನಾದರೂ ಮುಚ್ಚಲಿ ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳು ಕಚೇರಿಯ ಮುಂದೆ ಉಪವಾಸ ಸತ್ಯಾಗ್ರಹಕ್ಕೆ ಮಾಡುತ್ತೇವೆ ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಸರಿಪಡಿಸಬೇಕು ಎಂದು ಆಗರಿಸಿದರು
ಈ ಸ್ಟ್ರೈಕ್ ನಲ್ಲಿ ಬಿ ಪಾಳ್ಯ ಗ್ರಾಮಸ್ಥರಾದ ಬೋಜರಾಜು ಸ್ವಾಮಿ ಮಾರುತಿ ತಿಮ್ಮರಾಜು ಎಲ್ಲಪ್ಪ ಹನುಮಂತಪ್ಪ ಮಂಜುನಾಥ ಹಾಗೂ ನಲ್ಲಿಕಟ್ಟೆ ವಿ ಪಾಳ್ಯ ಮಳಲಿ ಗ್ರಾಮಸ್ಥರು ಇದ್ದರು