ಆಗಸ್ಟ್ 06: ಶ್ರಾವಣ ಮಾಸ (Shravan Masa) ಆರಂಭವಾಗುತ್ತಿದ್ದಂತೆ ಜನರು ಸಾಲು ಹಬ್ಬಗಳ ಆಚರಣೆಯಲ್ಲಿ ಬ್ಯೂಸಿಯಾಗುತ್ತಾರೆ. ಶ್ರಾವಣ ಮಾಸದಲ್ಲಿ ಬರುವ ವರಮಹಾಲಕ್ಷ್ಮಿ ಹಬ್ಬವನ್ನು (Varamahalakshmi) ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹಿಂದೂಗಳ ಪ್ರತಿಯೊಂದು ಮನೆಯಲ್ಲೂ ವರಮಹಾಲಕ್ಷ್ಮಿ ಹಬ್ಬ ಆಚರಿಸಲಾಗುತ್ತದೆ.
ವರಮಾಹಲಕ್ಷ್ಮಿ ಹಬ್ಬದ ನಿಮಿತ್ತ ಮಾರುಕಟ್ಟೆಗಳಲ್ಲಿ ಖರಿದಿ ಭರಾಟೆ ಜೋರಾಗಿದೆ. ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳ ಖರೀದಿಗಾಗಿ ಗ್ರಾಹಕರು ಕೆಆರ್ ಮಾರುಕಟ್ಟೆಯತ್ತ ಬರುತ್ತಿದ್ದಾರೆ.
ಹಬ್ಬ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಾಗಿದ್ದು, ಅಗತ್ಯದಷ್ಟು ವಸ್ತುಗಳ ಪೂರೈಕೆಯಾಗುತ್ತಿಲ್ಲ. ಇದರಿಂದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಹೂವು, ಹಣ್ಣು ಮತ್ತು ತರಕಾರಿಗಳ ಬೆಲೆ ಏರಿಕೆಯಾಗಿದೆ. ಹೂವು, ಹಣ್ಣುಗಳ ಬೆಲೆಯಲ್ಲಿ ಏರಿಕೆ ಕಂಡು ಗ್ರಾಹಕರು ಅಸಮಾಧಾನ ಹೊರಹಾಕಿದ್ದಾರೆ. ಕಳೆದ ವಾರಕ್ಕಿಂತ ಈ ದರದಲ್ಲಿ ಗಜಗಜಾಂತರ ವ್ಯತ್ಯಾಸವಿದೆ ಎನ್ನುತ್ತಿದ್ದಾರೆ.
| ತರಕಾರಿಗಳ ಬೆಲೆ (ಕೆಜಿ) | ||
| ತರಕಾರಿ | ಪ್ರಸ್ತುತ ದರ | ಹಿಂದಿನ ದರ (ರೂಪಾಯಿಗಳಲ್ಲಿ) |
| ಬಟಾಣಿ | 150 | 120 |
| ಹುರುಳಿಕಾಯಿ | 120 | 80 |
| ಗಜ್ಜರಿ | 120 | 60 |
| ಬೀನ್ಸ್ | 60 | 40 |
| ಕ್ಯಾಪ್ಸಿಕಮ್ | 60 | 40 |
| ಬದನೇಕಾಯಿ | 60 | 40 |
| ಹೀರೆಕಾಯಿ | 60 | 40 |
| ಚಿಕಡಿಕಾಯಿ | 70 | 50 |
| ಶುಂಠಿ | 80 | 60 |
| ಬೆಳ್ಳುಳ್ಳಿ | 140 | 100 |
| ನೌಕಲ್ | 30 | 20 |
| ಹೂಕೋಸು | 20 | 15 |
| ತೊಂಡೆಕಾಯಿ | 40 | 30 |
| ಹಣ್ಣುಗಳ ದರ (ಕೆಜಿ) | ||
| ತರಕಾರಿ | ಪ್ರಸ್ತುತ ದರ | ಹಿಂದಿನ ದರ (ರೂಪಾಯಿಗಳಲ್ಲಿ |
| ಸೇಬು | 250 | 200 |
| ದಾಳಿಂಬೆ | 200 | 150 |
| ಕಿತ್ತಳೆ | 200 | 160 |
| ಮೂಸಂಬಿ | 100 | 80 |
| ಮಾವಿನ ಹಣ್ಣು | 160 | 120 |
| ದ್ರಾಕ್ಷಿ | 200 | 150 |
| ಸಪೋಟ | 150 | 100 |
| ಮರ ಸೇಬು | 160 | 120 |
| ಸೀತಾಫಲ | 100 | 60 |
| ಅನಾನಸ್ | 50 | 50 |
| ಚೇಪೆಕಾಯಿ | 120 | 60 |
ಹೂವು ಖರೀದಿಗೆ ಮುಗಿಬಿದ್ದ ಮಹಿಳೆಯರು
ವರಮಹಾಲಕ್ಷ್ಮಿ ಹಬ್ಬ ಹಿನ್ನೆಲೆಯಲ್ಲಿ ಕೋಲಾರದಲ್ಲಿ ಮಹಿಳೆಯರು ಮಲ್ಲಿಗೆ ಹೂವು ಖರೀದಿಗೆ ಮುಗಿಬಿದಿದ್ದಾರೆ. ಕೋಲಾರದ ಹಳೆ ಬಸ್ ನಿಲ್ದಾಣದ ಹತ್ತಿರ ಹೂವು, ಹಣ್ಣು ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿದೆ. ಹೂವು ಹಣ್ಣು ಬೆಲೆ ಏರಿಕೆ ನಡುವೆಯೂ ಖರೀದಿ ಜೋರಾಗಿಯೇ ನಡೆಯುತ್ತಿದೆ. ಎಲ್ಲ ಬಗೆಯ ಹೂವಿನ ಬೆಲೆ ಗಗನಕ್ಕೇರಿದೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಹೂವು ಬೆಳೆದ ರೈತರು ಜಾಕ್ ಪಾಟ್ ಹೊಡೆದಿದ್ದಾರೆ.
Views: 30