ವಿಕಸಿತ ಭಾರತಕ್ಕೆ ಪೂರಕ ‘ವಿಬಿ-ಜಿ ರಾಮ್ ಜಿ’: ಕಾಂಗ್ರೆಸ್ ವಿರೋಧಕ್ಕೆ ಬಿಜೆಪಿ ತಿರುಗೇಟು.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಜ. 8

ವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ ಗ್ರಾಮೀಣ ವಿಬಿ-ಜಿ ರಾಮ್ ಜಿ ವಾಸ್ತವದಲ್ಲಿ ನರೇಗಾಗಿಂತ ‘ವಿಬಿ-ಜಿ ರಾಮ್ ಜಿ’ ಒಂದು ಉತ್ತಮ ಯೋಜನೆಯಾಗಿದೆ. ನರೇಗಾ ವ್ಯವಸ್ಥಿತವಾಗಿ ಲೂಟಿ ಮಾಡುವ ಯೋಜನೆಯಾಗಿತ್ತು. ಹೀಗಾಗಿ ಸರ್ಕಾರದ ಪ್ರತಿಯೊಂದು ಪೈಸೆಯೂ ಸದ್ಬಳಕೆಯಾಗಬೇಕು ಮತ್ತು ಆಯಾ ಗ್ರಾಮಗಳಲ್ಲಿ ಶಾಶ್ವತ ಆಸ್ತಿ ನಿರ್ಮಾಣ ಆಗಬೇಕೆಂಬುದೇ ಪ್ರಧಾನಿ ಮೋದಿ ಅವರ ಉದ್ದೇಶ ಎಂದು ರಾಜ್ಯ ಬಿಜೆಪಿ ವಕ್ತಾರರು ವಿಧಾನ ಪರಿಷತ್ವ ಸದಸ್ಯರಾದ ಕೆ.ಎಸ್.ನವೀನ್ ತಿಳಿಸಿದರು.

ಚಿತ್ರದುರ್ಗ ನಗರದ ಭಾರತೀಯ ಜನತಾ ಪಾರ್ಟಿಯ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರುವಿಕಸಿತ ಭಾರತ ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ ಗ್ರಾಮೀಣ ವಿಬಿ-ಜಿ ರಾಮ್ ಜಿ) ಕುರಿತು ಕಾಂಗ್ರೆಸ್ ಅಪಪ್ರಚಾರ ನಡೆಸುತ್ತಿದ್ದು, ಈ ಯೋಜನೆ ಕುರಿತು ಜನ ಜಾಗೃತಿ ಮೂಡಿಸಲು ಜಾಗೃತಿ ಅಭಿಯಾನ ನಡೆಸಲಾಗುವುದು, ಈ ಯೋಜನೆಯ ವಾಸ್ತವಿಕ ಸಂಗತಿಗಳು ಮತ್ತು ಪಾರದರ್ಶಕತೆ ಕುರಿತು ಜಿಲ್ಲಾ ಮಟ್ಟದಿಂದ ಗ್ರಾಮ ಮಟ್ಟದವರೆಗೆ ಮಾಹಿತಿ ನೀಡಲಾಗುವುದು. ಹೊಸ ಯೋಜನೆಯ ಕುರಿತು ಕಾಂಗ್ರೆಸ್ ನಾಯಕರು ನಕಾರಾತ್ಮಕ ಚಿತ್ರಣ ನೀಡುತ್ತಿದ್ದಾರೆ. ವಾಸ್ತವದಲ್ಲಿ ನರೇಗಾಗಿಂತ ‘ವಿಬಿ-ಜಿ ರಾಮ್ ಜಿ’ ಒಂದು ಉತ್ತಮ ಯೋಜನೆಯಾಗಿದೆ. ನರೇಗಾ ವ್ಯವಸ್ಥಿತವಾಗಿ ಲೂಟಿ ಮಾಡುವ ಯೋಜನೆಯಾಗಿತ್ತು. ಹೀಗಾಗಿ ಸರ್ಕಾರದ ಪ್ರತಿಯೊಂದು ಪೈಸೆಯೂ ಸದ್ಬಳಕೆಯಾಗಬೇಕು ಮತ್ತು ಆಯಾ ಗ್ರಾಮಗಳಲ್ಲಿ ಶಾಶ್ವತ ಆಸ್ತಿ ನಿರ್ಮಾಣ ಆಗಬೇಕೆಂಬುದೇ ಪ್ರಧಾನಿ ಮೋದಿ ಅವರ ಉದ್ದೇಶ. ಹಿಂದುಳಿದ ವರ್ಗಕ್ಕೆ ಸೇರಿದ ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿ ಆಗಿರುವುದನ್ನು ಸಹಿಸದ ಕಾಂಗ್ರೆಸ್ ನವರು ಎಲ್ಲ ಯೋಜನೆಗಳಿಗೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ದೂರಿದರು.

ನರೇಗಾದಡಿ ವಿನೂತನ ತಂತ್ರಜ್ಞಾನ, ಪಾರದರ್ಶಕತೆ ಕಾಂಗ್ರೆಸ್ಸಿಗರಿಗೆ ದೊಡ್ಡ ಸವಾಲಾಗಿದೆ ಎಂದು ಮಾಜಿ ಭ್ರಷ್ಟಾಚಾರ ಮಾಡಿ ಖಜಾನೆಯಿಂದ ಹಣ ಎತ್ತಿ-ಕೊಂಡು ಹೋಗುತ್ತಿದ್ದರು. ಅದು ತಪ್ಪಲಿದೆ ಅದಕ್ಕಾಗಿ ಹೊಟ್ಟೆ ಉರಿಯಿಂದ ಹೇಳಿಕೊಳ್ಳುತ್ತಿದ್ದಾರೆ ಗಾಂಧಿ ಹೆಸರನ್ನು ಅಳಿಸಿದವರು ಯಾರು ಎಂಬುದಕ್ಕೆ ಉದಾಹರಣೆಗಳನ್ನು ನೀಡಿದ ಅವರು, ರಾಜ್ಯದಲ್ಲಿ 25 ಯೋಜನೆಗಳು ರಾಜೀವ್‍ಗಾಂಧಿ, ಇಂದಿರಾಗಾಂಧಿ ಹೆಸರಿನಲ್ಲಿವೆ. ಶೈಕ್ಷಣಿಕ ಸಂಸ್ಥೆಗಳಲ್ಲಿ 55 ರಾಜೀವ್ ಗಾಂಧಿ. ಇಂದಿರಾ ಗಾಂಧಿ ಹೆಸರಿನಲ್ಲಿ 21 ಮತ್ತು ನೆಹರೂ ಹೆಸರಿನಲ್ಲಿ 22 ಇವೆ ಎಂದು ತಿಳಿಸಿ ಪ್ರತಿಯೊಂದು ಕ್ರೀಡಾಕೂಟದಲ್ಲೂ ರಾಜೀವ್ ಗಾಂಧಿ, ರಾಹುಲ್ ಗಾಂಧಿ ಹೆಸರು, ಇಂದಿರಾ ಗಾಂಧಿ ಹೆಸರು ಇಟ್ಟುಕೊಂಡು ಇವರು ಜನರಿಗೆ ಮೋಸ ಮಾಡಿ ನಿಜವಾದ ಗಾಂಧಿಯನ್ನು ಮರೆತುಬಿಟ್ಟವರು ಎಂದು ಟೀಕಿಸಿದರು.

ಹೊಸದಾಗಿ ನರೇಗಾದಡಿ ಎಲ್ಲ ವರ್ಗದವರಿಗೂ ಅವಕಾಶ ಇದೆ. ಯಾರು ಬೇಕಾದರೂ ಬರಬಹುದು ಎಂದರು. ಇವತ್ತು ನರೇಂದ್ರ ಮೋದಿಜೀ ಅವರು ತಮ ಹೆಸರನ್ನು ಒಂದೇ ಒಂದು ಸಂಸ್ಥೆಗಾಗಲೀ, ಯೋಜನೆಗಾಗಲೀ ಇಟ್ಟುಕೊಂಡಿಲ್ಲ. ಸರಕಾರದ ಹೆಸರೇ ಇದೆ. ನರೇಂದ್ರಮೋದಿಜೀ ಅವರು ವಿಕಸಿತ ಭಾರತ-ಕ್ಕೆ ಪೂರಕ ವಿಬಿ-ಜಿ ರಾಮ್ ಜಿ ಎಂಬ ಯೋಜನೆ ಜಾರಿಗೊಳಿಸಿ, ಭ್ರಷ್ಟಾಚಾರ ತಡೆ, ಆಸ್ತಿ ನಿರ್ಮಾಣ, ಗ್ರಾಮೀಣ ನಿಜವಾದ ಬಡವರಿಗೆ ಕೂಲಿ ಕೆಲಸ ಕೊಡಲು ಅನುಕೂಲ ಆಗುವ ಇದೊಂದು ಹೊಸ ವ್ಯವಸ್ಥೆ ತಂದಿದ್ದಾರೆ. ನರೇಗಾದಲ್ಲಿ ಯಾವುದಕ್ಕೂ ಹೊಣೆಗಾರಿಕೆ ಇರಲಿಲ್ಲ. ಇವತ್ತು ಲೆಕ್ಕ ಕೊಡಬೇಕಲ್ಲವೇ ಎಂಬುದು ಕಾಂಗ್ರೆಸ್ಸಿಗರ ಹೊಟ್ಟೆ ಉರಿ ವಿಮಾನನಿಲ್ದಾಣ, ಬಂದರುಗಳಿಗೆ ಇಂದಿರಾಗಾಂಧಿ, ರಾಹುಲ್ ಗಾಂಧಿ, ರಾಜೀವ್ ಗಾಂಧಿ ಹೆಸರು ಇಟ್ಟುಕೊಂಡು ಕುಳಿತಿದ್ದಾರಲ್ಲವೇ? ಇವರಿಗೆ ಮಹಾತ್ಮ ಗಾಂಧಿ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ? ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಹಾಡು ಹಗಲಲ್ಲಿಯೇ ದೌರ್ಜನ್ಯಗಳು ನಡೆಯುತ್ತಿವೆ ಬೀದಿಯಲ್ಲಿಯೇ ಮಹಿಳೆಯರನ್ನು ವಿವಸ್ತ್ರ ಮಾಡಲಾಗುತ್ತಿದೆ. ಇದರ ಬಗ್ಗೆ ಗೃಹ ಮಂತ್ರಿಗಳನ್ನು ವಿಚಾರಿಸಿದಾಗ ಇದರ ಬಗ್ಗೆ ಏನು ಗೋತ್ತಿಲ್ಲ ಎಂದು ಅಮಾಯಕರ ಹಾಗೇ ಉತ್ತರಿಸುತ್ತಾರೆ, ಇಂತಹರು ರಾಜ್ಯವನ್ನು ಯಾವ ರೀತಿ ಕಾಪಾಡುತ್ತಾರೆ, ಇಲ್ಲಿ ಯಾರಿಗೂ ಸಹಾ ಸರಿಯಾದ ರಕ್ಷಣೆ ಇಲ್ಲವಾಗಿದೆ. ರಕ್ಷಣೆ ಮಾಡಬೇಕಾದ ಪೋಲಿಸರೇ ದೌರ್ಜನ್ಯ ಮಾಡುತ್ತಿದ್ದಾರೆ ಕಾನೂನು ಎನ್ನುವುದು ಸತ್ತು ಹೋಗಿದೆ ಎಂದು ದೂರಿದರು.

ಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿಕುಮಾರಸ್ವಾಮಿ,, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ರಾಜ್ಯ ರೈತ ಮೋರ್ಚಾದ ಕಾರ್ಯದರ್ಶಿ ಮಲ್ಲಿಕಾರ್ಜನ್, ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ವೆಂಕಟೇಶ್ ಯಾದವ್, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೇ, ನಗರಾಧ್ಯಕ್ಷ ಲೋಕೇಶ್ ಪಾಪಯ್ಯ ಉಪಸ್ಥಿತರಿದ್ದರು.

Views: 24

Leave a Reply

Your email address will not be published. Required fields are marked *